ಫ್ರಂಟ್‌ಲೈನ್ ಕಾರ್ಯಕರ್ತರ ನೆರವಿಗೆ ಬಂದ ಇಶಾ..! ಆಹಾರ, ಪಾನೀಯ ಪೋರೈಕೆ

First Published | May 7, 2021, 9:27 AM IST

ಇಶಾ ಫೌಂಡೇಷನ್‌ನಿಂದ ಮುಂಚೂಣಿ ಕಾರ್ಯಕರ್ತರಿಗೆ ನೆರವು | ಆಹಾರ, ಪಾನೀಯ, ಔಷಧ, ಆಕ್ಸಿಜನ್ ಸೇರಿ ಹಲವು ರೀತಿಯ ಸಹಾಯ

ಕೊರೋನಾ ಎರಡನೇ ಅಲೆ ಭಾರತದಲ್ಲಿ ಕೆಟ್ಟ ಪರಿಣಾಮ ಬೀರುತ್ತಿದೆ. ವೈದ್ಯರು, ಪೊಲೀಸರು, ಪತ್ರಕರ್ತರೂ, ಇತರ ಸಿಬ್ಬಂದಿ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ.
ಇದೀಗ ಇಶಾ ಫೌಂಡೇಷನ್ ಫ್ರಂಟ್‌ಲೈನ್ ಕಾರ್ಯಕರ್ತರಿಗೆ ನೆರವಾಗುವಲ್ಲಿ ಕೆಲಸ ಮಾಡುತ್ತಿದೆ.ರೆಡಿ ಫುಡ್ ಮತ್ತು ಪಾನೀಯಗಳನ್ನು ಮುಂಚೂಣಿ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ.
Tap to resize

#IshaCOVIDAction ಯೋಜನೆಯ ಭಾಗವಾಗಿ ಸದ್ಗುರು ಅವರ ಇಶಾ ಫೌಂಡೇಷನ್ ಸ್ವಯಂಸೇವಕರು ಕರ್ನಾಟಕದಲ್ಲಿ ಫ್ರಂಟ್‌ಲೈನ್ ಕಾರ್ಯಕರ್ತರಿಗೆ ನೆರವಾಗುತ್ತಿದ್ದಾರೆ.
ಕೊರೋನಾ ವಿರುದ್ಧ ಹೋರಾಡಲು ಈ ಮೂಲಕ ಫ್ರಂಟ್‌ಲೈನ್ ಕಾರ್ಯಕರ್ತರ ಜೊತೆ ಕೈ ಜೋಡಿಸಿದ್ದಾರೆ ಇಶಾ ಫೌಂಡೇಷನ್ ಸ್ವಯಂಸೇವಕರು.
ಮೇ 1ರಿಂದ ಸಾವಿರದಷ್ಟು ರೆಡಿ ಟು ಈಟ್ ಆಹಾರ ಪೊಟ್ಟಣಗಳು ಮತ್ತು ಪಾನೀಯಗಳನ್ನು ವೈದ್ಯರು, ವೈದ್ಯಕೀಯ ಸಿಬ್ಬಂದಿ, ಮೆಡಿಕಲ್ ಸ್ಟಾಫ್ ಮತ್ತು ರೋಗಿಗಳಿಗೆ ವಿತರಿಸಲಾಗುತ್ತಿದೆ.
ಬೆಂಗಳೂರಿನ 11 ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೇವೆಯನ್ನು ಒದಗಿಸಲಾಗುತ್ತಿದೆ. ಕರ್ತವ್ಯದಲ್ಲಿರುವ ಪೊಲೀಸರಿಗೆ ಆಹಾರವನ್ನು ಒದಗಿಸಲಾಗುತ್ತಿದೆ.
ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಕೊಡಗು, ಮಂಡ್ಯ, ಕೋಲಾರ ಸೇರಿ ಕರ್ನಾಟಕ ಇತರ ಜಿಲ್ಲೆಗಳಿಗೂ ಇಶಾ ಈ ಸೇವೆಯನ್ನು ವಿಸ್ತರಿಸಿದೆ.
400ಕ್ಕೂ ಹೆಚ್ಚು ಇಶಾ ಫೌಂಡೇಷನ್ ಸ್ವಯಂಸೇವಕರು ಬೆಂಗಳೂರು ನಾಗರಿಕ ಸಮಿತಿ, ಬಿಬಿಎಂಪಿ ಹಾಗೂ ರಾಜ್ಯ ಆರೋಗ್ಯ ಇಲಾಖೆಯನ್ನು ಬೆಂಬಲಿಸುತ್ತಿದೆ.
ಅಧಿಕಾರಿಗಳೊಂದಿಗೆ ಸೇರಿ ಸ್ವಯಂ ಸೇವಕರು ಸೋಂಕಿತರು ಮತ್ತ ಅವರ ಕುಟುಂಬಕ್ಕೆ ಆಕ್ಸಿಜನ್, ತುರ್ತು ಔಷಧ, ಬೆಡ್, ಸಮಾಲೋಚನೆ ಸೇವೆಯನ್ನು ಒದಗಿಸುತ್ತಿದ್ದಾರೆ.
ಥರ್ಮೋಮೀಟರ್, ಮೆಡಿಕೇಷನ್, ಸಪ್ಲಿಮೆಂಟ್ ಒಳಗೊಂಡ ಕೊರೋನಾ ಕೇರ್ ಕಿಟ್ಗಳನ್ನೂ ಒದಗಿಸಲಾಗುತ್ತಿದೆ.
ಕರ್ನಾಟಕದಲ್ಲಿ ಇಶಾ ಕಾರ್ಯಕರ್ತರು ಪೊಲೀಸ್, ರೋಗಿಗಳು, ಸರ್ಕಾರಿ ಆಸ್ಪತ್ರೆ ಸೇರಿ ಮುಂಚೂಣಿ ಕಾರ್ಯಕರ್ತರನ್ನು ಬೆಂಬಲಿಸುತ್ತಿದ್ದಾರೆ. ನೀವೆಲ್ಲಿದ್ದರೂ, ನಿಮಗೇನು ಮಾಡಲು ಸಾಧ್ಯವೋ ಆ ಮೂಲಕ ಆಡಳಿತಕ್ಕೆ ಸಹಕಾರ ನೀಡಿ. ಕೊರೋನಾ ಸೋಲಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂದು ಸದ್ಗುರು ಟ್ವೀಟ್ ಮಾಡಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ನಾವೆಲ್ಲರೂ ನಮಗಾದಷ್ಟು ಕೆಲಸ ಮಾಡಬೇಕಿದೆ. ದೇಶದ ಕಠಿಣ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ನಮ್ಮ ಕೈಲಾದಷ್ಟು ಮಾಡಬೇಕಾಗಿದೆ. ನಮ್ಮ ಚಟುವಟಿಕೆಯ ಕ್ಷೇತ್ರ ಅಥವಾ ಸ್ವಭಾವ ಏನೇ ಇರಲಿ ನಾವೆಲ್ಲರೂ ನಮ್ಮ ಪ್ರಯತ್ನವನ್ನು ಮಾಡಬಹುದು ಎಂದಿದ್ದಾರೆ.

Latest Videos

click me!