ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ಪುಣೆಯಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಜೊತೆಗೂಡಿ ಅಭಿವೃದ್ಧಿಪಡಿಸಿದೆ. ಇನ್ನು ತಜ್ಞರು ಹೇಳುವ ಅನ್ವಯ ಶ್ವೇತ ಭವನದ ಮೆಡಿಕಲ್ ಸಲಹೆಗಾರ ಆಂಟನಿ ಫೌಸಿ ಖುದ್ದು ಒಂದು ಸುದ್ದಿಗೋಷ್ಠಿಯಲ್ಲಿ ಕೋವ್ಯಾಕ್ಸಿನ್ ಲಸಿಕೆ B.1.617 ವೇರಿಯೆಂಟ್ ಅಂದರೆ ಭಾರತದ ಡಬಲ್ ಮ್ಯೂಟೆಂಟ್ ವೇರಿಯೆಂಟ್‌ನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ ಎಂದಿದ್ದರು.
ಕೋವಿಶೀಲ್ಡ್ ಚಿಂಪಾಂಜಿ ಅಡೆನೊವೈರಸ್ ವೆಕ್ಟರ್ ಆಧಾರಿತ ಲಸಿಕೆ. ಇದರಲ್ಲಿ ಚಿಂಪಾಂಜಿಗೆ ಸೋಂಕಿಗೀಡು ಮಾಡುವ ತಳೀಯವಾಗಿ ಮಾರ್ಪಡಿಸಿದ ವೈರಸ್‌ಗಳನ್ನು ಒಳಗೊಂಡಿದೆ. ಈ ಮೂಲಕ ಇದು ಮನುಷ್ಯರಿಗೆ ಹರಡದಂತೆ ನೋಡಿಕೊಳ್ಳುತ್ತದೆ. ಈ ಸಂಶೋಧಿತ ವೈರಸ್‌ನ ಒಂದು ಭಾಗ ಕೊರೋನಾ ವೈರಸ್ ಕೂಡಾ ಆಗಿದ್ದು, ಇದನ್ನು ಸ್ಪೈಕ್ ಪ್ರೊಟೀನ್ ಎನ್ನಲಾಗುತ್ತದೆ. ಈ ಲಸಿಕೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಸ್ಪೈಕ್ ಪ್ರೊಟೀನ್ ವಿರುದ್ಧ ಹೋರಾಡುತ್ತದೆ.ಈ ಲಸಿಕೆ ವೈರಸ್ ಅನ್ನು ಗುರುತಿಸಲು ಸಹಾಯ ಮಾಡುವ ಪ್ರತಿಕಾಯಗಳು ಮತ್ತು ಮೆಮೊರಿ ಕೋಶಗಳನ್ನು ಉತ್ಪಾದಿಸುತ್ತದೆ..
ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಬಹಳ ಪರಿಣಾಮಕಾರಿ ಎನ್ನಲಾಗಿದೆ. ಇವೆರಡೂ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಲ್ಲಿ ಪಾಸ್ ಆಗಿವೆ. ಕೋವ್ಯಾಕ್ಸಿನ್ ತನ್ನ ಬಹುದೊಡ್ಡ ಪ್ರಯೋಗವನ್ನು ಈ ವರ್ಷದ ಫೆಬ್ರವರಿಯಲ್ಲಿ ಪೂರ್ಣಗೊಳಿಸಿತ್ತು. ಕ್ಲಿನಿಕಲ್ ಸ್ಟಡೀಸ್ ಅನ್ವಯ ಭಾರತ್ ಬಯೋಟೆಕ್‌ನ ಈ ಲಸಿಕೆಯ ದಕ್ಷತೆ ದರ ಶೇ. 78ರಷ್ಟಾಗಿದೆ. ಅಧ್ಯಯನದ ಅನ್ವಯ ಕೋವ್ಯಾಕ್ಸಿನ್ ಅಪಾಯಕಾರಿ ಸೋಂಕು ಹಾಗೂ ಸಾವಿನ ಅಪಾಯದ ಪ್ರಮಾಣವನ್ನು ಶೇ. 100ರಷ್ಟು ಕಡಿಮೆಗೊಳಿಸುವ ಕ್ಷಮತೆ ಹೊಂದಿದೆ.
ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಸಾಮಾನ್ಯ ಅಡ್ಡಪರಿಣಾಮ ಹೊಂದಿವೆ. ಲಸಿಕೆ ನೀಡಿದಲ್ಲಿ ನೋವು, ಜ್ವರ, ಚಳಿಯಾದ ಅನುಭವ, ನಡುಕ, ತಲೆ ತಿರುಗುವುದು, ತಲೆನೋವು, ಹೊಟ್ಟೆನೋವು ಈ ಮೊದಲಾದ ಸಾಮಾನ್ಯ ಲಕ್ಷಣಗಳು ಕಂಡು ಬರುತ್ತವೆ. ಆದರೆ ಈವರೆಗೂ ಈ ಲಸಿಕೆ ಪಡೆದವರಲ್ಲಿ ಯಾವುದೇ ಗಂಭೀರ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ.
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡು ವಿಭಿನ್ನ ಲಸಿಕೆಗಳು. ವಿಜ್ಞಾನಿಗಳು ಹೇಳುವ ಅನ್ವಯ ಕೋವಿಶೀಲ್ಡ್ ದೇಹದಲ್ಲಿ ಕೊರೋನಾ ವಿರುದ್ಧ ಹೀರಾಡುವ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇವುಗಳ ಈ ವಿಶೇಷತೆಯೇ ಇವರೆರಡೂ ಲಸಿಕೆಯನ್ನು ಭಿನ್ನವಾಗಿಸುತ್ತದೆ.