ಪುಲ್ವಾಮಾದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹತರಾದ ಭಾರತೀಯ ಸೇನೆಯ ಹುತಾತ್ಮ ಮೇಜರ್ ವಿಭೂತಿ ಶಂಕರ್ ಅವರ ಪತ್ನಿ ನಿಖಿತಾ ಕೌಲ್ ಭಾರತೀಯ ಸೇನೆ ಸೇರಲು ಸಜ್ಜಾಗಿದ್ದಾರೆ. ಈಗಾಗಲೇ SSC ಪರೀಕ್ಷೆಯಲ್ಲಿ ಪಾಸಾಗಿರುವ ನಿಖಿತಾ ಕೌಲ್, ಸಂದರ್ಶನದಲ್ಲೂ ಉತ್ತೀಣರ್ಣರಾಗಿದ್ದಾರೆ. ಶೀಘ್ರದಲ್ಲೇ ಅವರು ಭಾರೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇರ್ಪಡೆಗೊಳ್ಳಲಿದ್ದಾರೆ. ವಿಶೇಷವೆಂದರೆ ನಿಖಿತಾ ತಮ್ಮ ಖಾಸಗಿ ಉದ್ಯೋಗವನ್ನು ತೊರೆದು ಸೇನೆಗೆ ಸೇರುತ್ತಿದ್ದಾರೆ. ನಿಖಿತಾ ಕೌಲ್ ಅವರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.