ಭಾರತ ಹಾಗೂ ಚೀನಾ ನಡುವೆ ರಹಸ್ಯಮಯ ಕಣಿವೆ ಇದೆ. ಇದು ಶಾಂಗ್ರಿಲಾ ಎಂಬ ಈ ಕಣಿವೆ ಟಿಬೆಟ್ ಹಾಗೂ ಅರುಣಾಚಲ ಪ್ರದೇಶದ ನಡುವಿದೆ. ಹಲವಾರು ಮಂದಿ ಈ ರಹಸ್ಯಮಯ ಕಣಿವೆ ಕುರಿತು ತಮ್ಮ ಪುಸ್ತಕಗಳಲ್ಲಿ ಬರೆದುಕೊಂಡಿದ್ದಾರೆ. ತಂತ್ರ- ಮಂತ್ರದ ವಿಚಾರ ಬರುವಾಗ ವಿಶೇಷವಾಗಿ ಈ ಕಣಿವೆ ಕುರಿತು ಉಲ್ಲೇಖಿಸಲಾಗುತ್ತದೆ.(ಸಾಂದರ್ಭಿಕ ಚಿತ್ರ)
ಪದ್ಮ ವಿಭೂಷಣ ಹಾಗೂ ಸಾಹಿತ್ಯ ಅಕಾಡೆಮಿಯಿಂದ ಸನ್ಮಾನಿತರಾದ ಡಾ. ಗೋಪಿನಾಥ್ ಕವಿರಾಜ್ ತಮ್ಮ ಪುಸ್ತಕದಕಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ. ಈ ಕಣಿವೆಯನ್ನು ಬರ್ಮುಡಾ ಟ್ರಯಾಂಗಲ್ ನಂತೆ ವಿಶ್ವದ ಅತ್ಯಂತ ರಹಸ್ಯಮಯ ಸ್ಥಳ ಎನ್ನಲಾಗುತ್ತದೆ. ಈ ಕಣಿವೆ ಬೇರೊಂದು ಜಗತ್ತಿಗೆ ಬೆಸೆದುಕೊಂಡಿದೆ ಎನ್ನಲಾಗುತ್ತದೆ. (ಸಾಂದರ್ಭಿಕ ಚಿತ್ರ)
ಅತ್ಯಂತ ಪ್ರಸಿದ್ಧ ತಂತ್ರ ಸಾಹಿತ್ಯ ಲೇಖಕ ಹಾಗೂ ವಿದ್ವಾನ್ ಅರುಣ್ ಕುಮಾರ್ ಶರ್ಮಾ ಕೂಡಾ ತಮ್ಮ ಪುಸ್ತಕ 'ಟಿಬೆಟ್ ಕೀ ವಹ್ ರಹಸ್ಯಮಯೀ ಘಾಟಿ' ಎಂಬ ಕೃತಿಯಲ್ಲಿ ಈ ಸ್ಥಳದ ಕುರಿತು ವಿಸ್ತಾರವಾಗಿ ಬರೆದಿದ್ದಾರೆ. ಇನ್ನು ಅವರ ಈ ಕೃತಿಯಲ್ಲಿ ತಿಳಿಸಿರುವ ಜಗತ್ತಿನಲ್ಲಿ ಕೆಳಮಟ್ಟದ ಮತ್ತು ಗಾಳಿಯಿಲ್ಲದ ಕೆಲವು ಸ್ಥಳದ ಕುರಿತಾಗಿಯೂ ಉಲ್ಲೇಖಿಸಲಾಗಿದ್ದು, ಈ ಸ್ಥಳಗಳು ವಾತಾವರಣದ ನಾಲ್ಕನೇ ಆಯಾಮದಿಂದ ಪ್ರಭಾವಿತವಾಗಿರುತ್ತದೆ. (ಸಾಂದರ್ಭಿಕ ಚಿತ್ರ)
ಇನ್ನು ಪ್ರದೇಶಗಳಿಗೆ ತೆರಳಿದ ವಸ್ತು ಅಥವಾ ವ್ಯಕ್ತಿಗಳ ಅಸ್ತಿತ್ವ ಜಗತ್ತಿನಿಂದ ನಾಪತ್ತೆಯಾಗುತ್ತದೆ ಎಂದೂ ಹೇಳಲಾಗಿದೆ. ಇಂತಹ ಸ್ಥಳಗಳ ಪಟ್ಟಿಯಲ್ಲಿ ಶಾಂಗ್ರಿಲಾ ಕಣಿವೆ ಹೆಸರೂ ಇದೆ. (ಸಾಂದರ್ಭಿಕ ಚಿತ್ರ)
ಶಾಂಗ್ರಿ ಲಾ ಕಣಿವೆ ಬರ್ಮುಡಾ ಟ್ರಯಾಂಗಲ್ ನಂತೆ ಎಂದು ಹೇಳಲಾಗಿದೆ. ಬರ್ಮುಡಾ ಟ್ರಯಾಂಗಲ್ ಆಸುಪಾಸಿನಲ್ಲಿ ಸುಳಿದಾಡುವ ಹಡಗು ಅಥವಾ ವಿಮಾnಗಳು ನಿಗೂಢವಾಗಿ ನಾಪತ್ತೆಯಾಗುತ್ತವೆ. ಈ ಸ್ಥಳವೂ ಭೂನಿಯ ಅತ್ಯಂತ ತಗ್ಗು ಪ್ರದೇಶದಲ್ಲಿದೆ. (ಸಾಂದರ್ಭಿಕ ಚಿತ್ರ)
ಚೀನಾದ ಸೇನೆಯು ಈ ರಹಸ್ಯಮಯ ಸ್ಥಳವನ್ನು ಹುಡುಕಾಡಲು ಹಲವಾರು ಬಾರಿ ಪ್ರಯತ್ನಿಸಿದ್ದು, ಆದರೆ ಅವರಿಗೇನೂ ಸಿಕ್ಕಿಲ್ಲ. ಟಿಬೆಟಿಯನ್ ವಿದ್ವಾನ್ ಯುತ್ಸುಂಗ್ ಅನ್ವಯ ಈ ಕಣಿವೆ ಅಂತರಿಕ್ಷದ ಯಾವುದೋ ಲೋಕಕ್ಕೆ ಹೊಂದಿಕೊಂಡಿದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)
ಟಿಬೆಟಿಯನ್ ಕೃತಿ 'ಕಪ್ಪು ವಿಜ್ಞಾನ'ದಲ್ಲಿ ಈ ಕಣಿವೆ ಕುರಿತು ಉಲ್ಲೇಖಿಸಲಾಗಿದೆ. ಈ ಕೃತಿಯಲ್ಲಿ ವಿಶ್ವದ ಪ್ರತಿಯೊಂದು ವಸ್ತು ದೇಶ, ಕಾಲ ಹಾಗೂ ಉದ್ದೇಶದಿಂದ ಬಂಧಿತವಾಗಿದೆ. ಆದರೆ ಈ ಇಕಣಿವೆಯಲ್ಲಿ ಕಾಲ ಅಥವಾ ಸಮಯ ಯಾವುದೇ ಪರಿಣಾಮ ಬೀರುವುದಿಲ್ಲ. ಅದು ಪ್ರಾಣ, ಮನಸ್ಸಿನ ವಿಚಾರದ ಶಕ್ತಿ, ಶಾರೀರಿಕ ಕ್ಷಮತೆ ಹಾಗೂ ಮಾನಸಿಕ ಪ್ರಜ್ಞೆ ಹೆಚ್ಚುತ್ತದೆ. (ಸಾಂದರ್ಭಿಕ ಚಿತ್ರ)
ಈ ಸ್ಥಳವನ್ನು ಭೂಮಿಯ ಅಧ್ಯಾತ್ಮಿಕ ನಿಯಂತ್ರಣ ಕೇಂದ್ರ ಎಂದೂ ಕರೆಯಲಾಗುತ್ತದೆ. ಅಧ್ಯಾತ್ಮ ಕ್ಷೇತ್ರ, ತಂತ್ರ ಸಾಧನೆ ಅಥವಾ ತಂತ್ರ ಶಕ್ತಿ ಹಾಗೂ ಮಾಂತ್ರಿಕರಿಗೆ ಈ ಕಣಿವೆ ಭಾರತ ಹಾಗೂ ವಿಶ್ವದಲ್ಲಿ ಅತ್ಯಂತ ಫೇಮಸ್ ಆಗಿದೆ. (ಸಾಂದರ್ಭಿಕ ಚಿತ್ರ)
ಯುತ್ಸುಂಗ್ ಖುದ್ದು ತಾನಲ್ಲಿಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದು, ಅಲ್ಲಿ ಸೂರ್ಯನ ಪ್ರಕಾಶವೂ ಬೀಳುವುದಿಲ್ಲ, ಚಂದ್ರನ ಬೆಳಕೂ ಕಾಣುವುದಿಲ್ಲ ಎಂದಿದ್ದಾರೆ. ಈ ವಾತಾವರಣದಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಹಾಲಿನಂತಹ ಬೆಳಕು ಚೆಲ್ಲಿದ್ದು, ವಿಚಿತ್ರವಾದ ಮೌನ ಆವರಿಸಿತ್ತು ಎನ್ನುತ್ತಾರೆ. (ಸಾಂದರ್ಭಿಕ ಚಿತ್ರ)
ಇಲ್ಲಿನ ಮೂರು ಸಾಧನಾ ಕೇಂದ್ರಗಳು ಬಹಳ ಪ್ರಸಿದ್ಧವಾಗಿವೆ. ಮೊದಲನೆಯದ್ದು ಜ್ಞಾನ ಗಂಜ್ ಮಠ, ಎರಡನೆಯದ್ದು- ಸಿದ್ಧ ವಿಜ್ಞಾನ ಮಠ ಹಾಗೂ ಮೂರನೇಯದ್ದು ಯೋಗ ಸಿದ್ಧಾಶ್ರಮ. (ಸಾಂದರ್ಭಿಕ ಚಿತ್ರ)
ಶಾಂಗ್ರಿ ಲಾ ಕಣಿವೆಯನ್ನು ಸಿದ್ಧಾಶ್ರಮ ಎಂದೂ ಕರೆಯಲಾಗುತ್ತದೆ. ಇದರ ವರ್ಣನೆ ಮಹಾಭಾರತ, ವಾಲ್ಮೀಕಿ ರಾಮಾಯಣ ಹಾಗೂ ವೇದಗಳಲ್ಲೂ ಇದೆ. (ಸಾಂದರ್ಭಿಕ ಚಿತ್ರ)
ಇನ್ನು ಜೇಮ್ಸ್ ಹಿಲ್ಟನ್ ತಮ್ಮ ಕೃತಿ ಲಾಸ್ಟ್ ಹೊರಾಯ್ಸನ್ ನಲ್ಲಿ ಈ ರಹಸ್ಯಮಯ ಕಣಿವೆ ಕುರಿತು ಉಲ್ಲೇಖಿಸಿದ್ದು, ಇಲ್ಲಿ ಜನರು ಸಾವಿರಾರು ವರ್ಷಗಳವರೆಗೆ ಬದುಕುತ್ತಾರೆ ಎಂದಿದ್ದಾರೆ. ಈ ಪುಸ್ತಕ ಓದಿದ ಹಲವಾರು ದೇಶ ವಿದೇಶಿಗರು ಶಾಂಗ್ರಿಲಾ ಪತ್ತೆ ಹಚ್ಚುವ ಕಾರ್ಯಕ್ಕಿಳಿದಿದ್ದಾರೆ, ಆದರೆ ವಿಫಲರಾಗಿದ್ದಾರೆ. (ಸಾಂದರ್ಭಿಕ ಚಿತ್ರ)
ಇನ್ನು ಕೆಲವರಂತೂ ನಾಪತ್ತೆಯಾಗಿದ್ದಾರೆ. ಇನ್ನು ಚೀನಾದ ಸೇನೆ ಓರ್ವ ಲಾಮಾನನ್ನು ಹಿಂಬಾಲಿಸಿ ಕಣಿವೆವರೆಗೆ ತಲುಪಿತ್ತು ಆದರೂ ಶಾಂಗ್ರಿಲಾ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)