ಪುಲ್ವಾಮಾ ಹುತಾತ್ಮ ಮೇ| ದೌಂಡಿಯಾಲ್ ಪತ್ನಿ ನಿಖಿತಾ ಭಾರತೀಯ ಸೇನೆಗೆ ಸೇರ್ಪಡೆ!

First Published | May 29, 2021, 2:23 PM IST

 2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಹಾದಿಯಲ್ಲೇ ಸಾಗಿದ ಅವರ ಪತ್ನಿ ನಿಕಿತಾ ಕೌಲ್ ಶನಿವಾರ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ. 

2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್
ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಹಾದಿಯಲ್ಲೇ ಸಾಗಿದ ಅವರ ಪತ್ನಿ ನಿಕಿತಾ ಕೌಲ್ ಶನಿವಾರ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ.
Tap to resize

ನಿಖಿತಾ ಕೌಲ್ ಶನಿವಾರ ಸೇನಾ ಸಮವಸ್ತ್ರ ಧರಿಸಿ ಸೇನೆಗೆ ಸೇರ್ಪಡೆಯಾಗಿದ್ದಾರೆ.
ತಮಿಳುನಾಡಿನ ಚೆನ್ನೈ ಆಫೀಸರ್ಸ್ ತರಬೇತಿ ಅಕಾಡೆಮಿಯಲ್ಲಿ ಲೆಫ್ಟಿನೆಂಟ್ ಜನರಲ್ ವೈ. ಕೆ ಜೋಶಿ ಆಕೆಯ ಹೆಗಲಿಗೆ ಸ್ಟಾರ್ ತೊಡಿಸಿದ್ದಾರೆ.
ಈ ಸಂಬಂಧ ಉಧಂಪುರ ರಕ್ಷಣಾ ಇಲಾಖೆ ಪಿಆರ್‌ಒ ಅಧಿಕೃತ ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೇಜರ್ ದೌಂಡಿಯಾಲ್ ಹುತಾತ್ಮರಾಗಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರಿಗೆ ಶೌರ್ಯ ಚಕ್ರ ನೀಡಲಾಗಿತ್ತು.
ಸೈನಿಕ ಇಲ್ಲ ಎಂದ ಕೂಡಲೇ ಸೇನೆಯೂ ಅವರ ಕುಟುಂಬವನ್ನು ಬಿಟ್ಟುಬಿಡುವುದಿಲ್ಲ, ನಮ್ಮ ಸಹೋದರನ್ನು ಮದುವೆಯಾದ ವೀರನಾರಿ ಈಗ ಸೇನೆಯ ಸಮವಸ್ತ್ರ ಧರಿಸಿ ದೇಶ ಕಾಯಲು ನಿಂತಿದ್ದಾರೆ. ಅವರಿಗೆ ನಮ್ಮ ಬೆಂಬಲ ಮತ್ತು ಪ್ರೋತ್ಸಾಹ ಸದಾ ಇರುತ್ತದೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಈ ಟ್ವೀಟ್‌ ಬೆನ್ನಲ್ಲೇ ನೆಟ್ಟಿಗರು ಹುತಾತ್ಮ ಯೋಧನ ಧೈರ್ಯ ಹಾಗೂ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಅನೇಕರು ಕೌಲ್‌ನನ್ನು ಹೊಗಳಿದ್ದಾರೆ, ಅವರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, ದಿವಂಗತ ಪತಿಗೆ ತಕ್ಕ ಗೌರವ. ನಿಜಕ್ಕೂ ಸ್ಪೂರ್ತಿದಾಯಕ ಕಥೆ ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

Latest Videos

click me!