ಯಾಸ್ ರುದ್ರ ನರ್ತನ: ಹಾರಿ ಹೋಯ್ತು ಮನೆ ಛಾವಣಿ, ಹಳ್ಳಿಗಳೆಲ್ಲಾ ಸಮುದ್ರಮಯ!
First Published | May 26, 2021, 2:57 PM ISTಉತ್ತರ ಅಂಡಮಾನ್ ಸಮುದ್ರ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಪೂರ್ವ- ಕೇಂದ್ರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ, ಹುಟ್ಟಿಕೊಂಡ ಯಾಸ್ ಚಂಡಮಾರುತ ಒಡಿಶಾಗೆ ಅಪ್ಪಳಿಸಿದ್ದು, ಗಂಭೀರ ಸ್ವರೂಪ ಪಡೆದುಕೊಂಡಿದೆ. ಭೀಕರ ಗಾಳಿ ಮಳೆಗೆ ಗುಡಿಸಲುಗಳು ಮಾತ್ರವಲ್ಲದೇ, ಎರಡು ಮೂರು ಅಂತಸ್ತಿನ ಛಾವಣಿಗಳೂ ಹಾರಿ ಹೋಗಿವೆ. ರಸ್ತೆಗಳೆಲ್ಲವೂ ನದಿಗಳಾಗಿ ಪರಿವರ್ತನೆಯಾಗಿದ್ದು, ಕಾರುಗಳು ನೀರಿನಲ್ಲಿ ಮುಳುಗಿವೆ. ಇನ್ನು ಗಾಳಿಯ ವೇಗ ಪ್ರತೀ ಗಮಟೆಗೂ 150 ಕಿ. ಮೀಗೂ ಹೆಚ್ಚಿದೆ ಎನ್ನಲಾಗಿದೆ. ಈ ಚಂಡಮಾರುತದಿಂದ ಅಪಾಯಕ್ಕೀಡಾಗುವ ಪ್ರದೇಶದಲ್ಲಿದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದ್ದು, ಹೆಚ್ಚಿನ ರಕ್ಷಣಾ ಕಾರ್ಯುಕ್ಕೆ ಎನ್‌ಡಿಆರ್‌ಎಫ್ ತಂಡಗಳು ಸಿದ್ಧವಾಗಿವೆ. ಸಮುದ್ರದ ನೀರು ಬೃಹತ್ ಅಲೆಗಳ ರೂಪದಲ್ಲಿ ಹಳ್ಳಿಗಳತ್ತ ನುಗ್ಗದೆ. ಪಶ್ಚಿಮ ಬಂಗಾಳ, ಒಡಿಶಾ ಹೊರತುಪಡಿಸಿ ಬಿಹಾರ, ಜಾರ್ಕಂಡ್, ತಮಿಳುನಾಡು ಹಾಗೂ ಕರ್ನಾಟಕದಲ್ಲೂ ಈ ಚಂಡಮಾರುತದ ಪ್ರಭಾವ ಕಂಡು ಬರಲಿದೆ.