ಪ್ರಧಾನಿ ನರೇಂದ್ರ ಮೋದಿ ಬುಧವಾರ ದೇವಭೂಮಿ ಉತ್ತರಾಖಂಡಕ್ಕೆ ಭೇಟಿ ನೀಡಿದರು. ಈ ವೇಳೆ ಅವರಿಗೆ ವೃದ್ಧಮಹಿಳೆಯೊಬ್ಬರು ತಮ್ಮ ಆಶೀರ್ವಾದ ನೀಡಿದರು.
ಉತ್ತಾರಖಂಡಕ್ಕೆ ಆಗಮಿಸಿದ ಬಳಿಕ ನೆರೆದಿದ್ದ ಸ್ಥಳೀಯರ ಕುಶಲೋಪಚರಿ ವಿಚಾರಿಸಿದ ಪ್ರಧಾನಿ ಮೋದಿ, ಪುಟ್ಟ ಮಗುವಿನೊಂದಿಗೆ ಆತ್ಮೀಯವಾಗಿ ಮಾತನಾಡಿದರು.
ಇದೇ ವೇಳೆ ಉತ್ತಾರಖಂಡದ ಸಾಂಪ್ರದಾಯಿಕ ಶಾಲುಗಳು ಹಾಗೂ ವಸ್ತಗಳ ಮಳಿಗೆಯಲ್ಲಿ ಪ್ರಧಾನಿ ಮೋದಿ ಕೆಲ ಸಮಯ ಕಳೆದರು. ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಉತ್ತರಾಖಂಡಕ್ಕೆ ತೆರಳಿದ್ದರು.
ಉತ್ತರಾಖಂಡದ ಪಿಥೋರ್‌ಗಢದಲ್ಲಿ ದೇವಸ್ಥಾನಗಳ ಭೇಟಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಐಟಿಬಿಪಿ ಸೈನಿಕರ ಜೊತೆ ಮಾತುಕತೆ ನಡೆಸಿದರು.
ಅದಾದ ಬಳಿಕ ಆದಿ ಕೈಲಾಸ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. ಕೆಲ ಹೊತ್ತು ಅಲ್ಲಿನ ಪರಿಸರದಲ್ಲಿ ಮೋದಿ ತಿರುಗಾಟ ನಡೆಸಿದರು. ಈ ವೇಳೆ ಮೋದಿ ಧರಿಸಿದ್ದ ಬಟ್ಟೆ ಗಮನಸೆಳೆದಿದೆ.
ಪ್ರಧಾನಿ ನರೇಂದ್ರ ಮೋದಿ ಪಾರ್ವತಿ ಕುಂಡದಲ್ಲಿ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸಿದರು. ಪವಿತ್ರ ಆದಿ-ಕೈಲಾಸದಿಂದ ಆಶೀರ್ವಾದ ಪಡೆದುಕೊಂಡರು.
ಆದಿ ಕೈಲಾಸ ಆಧ್ಯಾತ್ಮಿಕ ಮಹತ್ವ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.'ನಮ್ಮ ಸರ್ಕಾರವು ದೇವಭೂಮಿ ಉತ್ತರಾಖಂಡದ ಜನರ ಕಲ್ಯಾಣ ಮತ್ತು ರಾಜ್ಯದ ತ್ವರಿತ ಅಭಿವೃದ್ಧಿಗೆ ಬದ್ಧವಾಗಿದೆ. ಇದಕ್ಕೆ ಮತ್ತಷ್ಟು ವೇಗ ನೀಡಲು ಪಿಥೋರಗಢದಲ್ಲಿ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುತ್ತೇನೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.
ಇಲ್ಲಿನ ಗುಂಜಿ ಗ್ರಾಮದಲ್ಲಿ ಜನರೊಂದಿಗೆ ಸಂವಾದ ನಡೆಸಲಿದ್ದೇನೆ. ಈ ಪ್ರವಾಸದ ಸಮಯದಲ್ಲಿ, ಪಾರ್ವತಿ ಕುಂಡ್ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯ ಜಾಗೇಶ್ವರ ಧಾಮದಲ್ಲಿ ದರ್ಶನ ಮತ್ತು ಪೂಜೆಗಾಗಿ ಕಾತುರದಿಂದ ಕಾಯುತ್ತಿದ್ದೇನೆ ಎಂದು ಮೋದಿ ಬರೆದುಕೊಂಡಿದ್ದರು.
ಪ್ರಧಾನಿ ಮೋದಿ ಅವರು ಸುಮಾರು ಉತ್ತರಾಖಂಡದಲ್ಲಿ ₹ 4200 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆರವೇರಿಸಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಅಡಿಯಲ್ಲಿ 76 ಗ್ರಾಮೀಣ ರಸ್ತೆಗಳು ಮತ್ತು 25 ಸೇತುವೆಗಳು ಈ ವೇಳೆ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಒಂಬತ್ತು ಜಿಲ್ಲೆಗಳಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಆಫೀಸ್‌ಗಳಿಗೆ (ಬಿಡಿಒ) 15 ಹೊಸ ಕಟ್ಟಡಗಳನ್ನು ಸರ್ಕಾರ ಅನಾವರಣಗೊಳಿಸಲಿದ್ದು, ಆಡಳಿತಾತ್ಮಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಸುಮಾರು 6200 ಅಡಿ ಎತ್ತರದಲ್ಲಿರುವ ಮತ್ತು ಕಲ್ಲಿನ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ಅಲ್ಮೋರಾ ಜಿಲ್ಲೆಯ ಜಾಗೇಶ್ವರ ಧಾಮಕ್ಕೆ ಪ್ರಧಾನಿ ಮೋದಿ ಮಧ್ಯಾಹ್ನದ ವೇಳೆಗೆ ಆಗಮಿಸಿದರು.
ಜಗೇಶ್ವರ ಧಾಮಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಶಿವಲಿಂಗಕ್ಕೆ ವಿಶೇಷವಾದ ಪೂಜೆ ಸಲ್ಲಿಸಿದ್ದರು. ಅವರಿಗೆ ಅರ್ಚಕರು ಹಣೆಗೆ ಗಂಧವನ್ನು ಹಚ್ಚಿ ಸ್ವಾಗತಿಸಿದರು.