ಕೋವಿಡ್‌ಗೂ ಮೊದಲು ಪ್ರತಿ ತಿಂಗಳು 9 ಲಕ್ಷ ವಿದೇಶಿಗರು ಭಾರತಕ್ಕೆ ಭೇಟಿ, ಈಗೆಷ್ಟು?

Published : Oct 07, 2023, 07:35 PM IST

ಕೊರೋನಾ ಮಹಾಮಾರಿ ನಿಯಂತ್ರಿಸಿದ ಭಾರತ ಆರ್ಥಿಕತೆ, ವ್ಯವಹಾರ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಚೇತರಿಕೆ ಕಾಣುತ್ತಿದೆ. ಆದರೆ ಭಾರತಕ್ಕೆ ಆಗಮಿಸುತ್ತಿದ್ದ ವಿದೇಶಿಗರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಕೊರೋನಾಗೂ ಮೊದಲು ಪ್ರತಿ ತಿಂಗಳು 9 ಲಕ್ಷ ವಿದೇಶಿಗರು ಭಾರತಕ್ಕೆ ಭೇಟಿ ನೀಡುತ್ತಿದ್ದರು. ಇದೀಗ ಈ ಸಂಖ್ಯೆ ಎಷ್ಟು?

PREV
18
ಕೋವಿಡ್‌ಗೂ ಮೊದಲು ಪ್ರತಿ ತಿಂಗಳು 9 ಲಕ್ಷ ವಿದೇಶಿಗರು ಭಾರತಕ್ಕೆ ಭೇಟಿ, ಈಗೆಷ್ಟು?

ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ಕೋವಿಡ್‌ಗೆ ತುತ್ತಾಗಿ ನರಕ ಯಾತನೆ ಅನುಭವಿಸಿದೆ. ಕೋವಿಡ್ ನಿಯಂತ್ರಿಸಿ ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಆರ್ಥಿಕತೆ ಚೇತರಿಸಿಕೊಂಡಿದೆ. ವ್ಯಾಪಾರ ವಹಿವಾಟು ಮತ್ತೆ ಚುರುಕುಗೊಂಡಿದೆ. ಎಲ್ಲಾ ಕ್ಷೇತ್ರಗಳು ಪ್ರಗತಿಯತ್ತ ಸಾಗುತ್ತಿದೆ. ಆದರೆ ಭಾರತಕ್ಕೆ ಆಗಮಿಸುತ್ತಿದ್ದ ವಿದೇಶಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ.

28

ಕೊರೋನಾ ಅಪ್ಪಳಿಸುವ ಮೊದಲು ಪ್ರತಿ ತಿಂಗಳು ಭಾರತಕ್ಕೆ ಸರಾಸರಿ 9 ಲಕ್ಷ ವಿದೇಶಿಗರು ಆಗಮಿಸುತ್ತಿದ್ದರು. ಆದರೆ ಭಾರತ ಕೋರೋನಾ ಸಂಪೂರ್ಣ ನಿಯಂತ್ರಿಸಿ ಚೇತರಿಕ ಕಾಣುತ್ತಿದ್ದರೂ ವಿದೇಶಿಗರ ಆಗಮಿಸುವ ಸಂಖ್ಯೆ ಏರಿಕೆಯಾಗಿಲ್ಲ.

38

ಕೋವಿಡ್ ಬಳಿಕ ಭಾರತಕ್ಕೆ ಆಗಮಿಸುವ ವಿದೇಶಿಗರ ಸಂಖ್ಯೆ ತಿಂಗಳಿಗೆ ಸರಾಸರಿ 6 ಲಕ್ಷಕ್ಕೆ ಕುಸಿದಿದೆ. 9 ಲಕ್ಷ ವಿದೇಶಿಗರ ಆಗಮನದಿಂದ ಇದೀಗ 6 ಲಕ್ಷ ವಿದೇಶಿಗರಿಗೆ ಕುಸಿತ ಕಂಡಿದೆ.

48

ಎಪ್ರಿಲ್ 1, 2022ರಿಂದ ಅಕ್ಟೋಬರ್ 31, 2022ರಲ್ಲಿ 38,34,984 ವಿದೇಶಿಗರು ಭಾರತಕ್ಕೆ ಆಗಮಿಸಿದ್ದಾರೆ. ಅಂದರೆ ಸರಾಸರಿ 6,39,000 ವಿದೇಶಿಗರು ಪ್ರತಿ ತಿಂಗಳು ಭಾರತಕ್ಕೆ ಬೇಟಿ ನೀಡಿದ್ದಾರೆ.
 

58

ಕೋವಿಡ್ ಬಳಿಕ ಭಾರತಕ್ಕೆ ಆಗಮಿಸುತ್ತಿರುವವರ ಪೈಕಿ ಕೆಲಸ ಹುಡುಕಿಕೊಂಡು ಬಂದ ಬಾಂಗ್ಲಾದೇಶಿಗಳ ಸಂಖ್ಯೆ ಹೆಚ್ಚಿದೆ. 8,42,869 ಬಾಂಗ್ಲಾದೇಶಿಗಳು ಭಾರತಕ್ಕೆ ಆಗಮಿಸಿದ್ದಾರೆ. 

68

ಕೋವಿಡ್ ಸಮಯದಲ್ಲಿ ಅಂದರೆ ಜನವರಿ 1, 2021ರಿಂದ ಡಿಸೆಂಬರ್ 31, 2021ರ ವರೆಗೆ 15,24,469 ವಿದೇಶಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ.ಪ್ರತಿ ತಿಂಗಳ ಸರಾಸರಿ 1,27,000 ಮಾತ್ರ.

78

2019ರ ಸಾಲಿನಲ್ಲಿ ಭಾರತಕ್ಕೆ ಬರೋಬ್ಬರಿ 1 ಕೋಟಿ ವಿದೇಶಿಗರು ಆಗಮಿಸಿದ್ದರು. ಇದರಲ್ಲಿ  39,018 ಪಾಕಿಸ್ತಾನಿ ಪ್ರಜೆಗಳು ಸೇರಿದ್ದಾರೆ. ಇನ್ನು 2018-19ರ ಸಾಲಿನಲ್ಲಿ 1.37 ಕೋಟಿ ವಿದೇಶಿಗರು ಭಾರತಕ್ಕೆ ಆಗಮಿಸಿದ್ದಾರೆ.
 

88

ಭಾರತಕ್ಕೆ ಆಗಮಿಸುವ ವಿದೇಶಿಗರ ಸಂಖ್ಯೆ ಕುಸಿತದ ಹಿಂದೆ ಕೇವಲ ಕೋವಿಡ್ ಮಾತ್ರ ಕಾರಣವಲ್ಲ. ರಷ್ಯಾ ಉಕ್ರೇನ್ ಯುದ್ಧ ಸೇರಿದಂತೆ ಹಲವು ಜಾಗತಿಗ ಸಮಸ್ಯೆಗಳು ಕಾಣವಾಗಿದೆ. 

Read more Photos on
click me!

Recommended Stories