ಪ್ರಧಾನಿ ಮೋದಿ ಅನಾವರಣ ಮಾಡಲಿರುವ ಚೆನ್ನೈ ವಿಮಾನನಿಲ್ದಾಣದ ಆಕರ್ಷಕ ಚಿತ್ರಗಳು!

Published : Apr 06, 2023, 03:16 PM IST

ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ, ಶನಿವಾರ ಚಾಲನೆ ನೀಡಲಿದ್ದಾರೆ. ಈ ಕಟ್ಟಡದ ಅದ್ಭುತ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ಈ ಹೊಸ ಟರ್ಮಿನಲ್ ಚೆನ್ನೈನ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ತಮಿಳಿನಲ್ಲಿ ಟ್ವೀಟ್ ಮಾಡಿ ತಿಳಿಸಿದ್ದಾರೆ.  

PREV
18
ಪ್ರಧಾನಿ ಮೋದಿ ಅನಾವರಣ ಮಾಡಲಿರುವ ಚೆನ್ನೈ ವಿಮಾನನಿಲ್ದಾಣದ ಆಕರ್ಷಕ ಚಿತ್ರಗಳು!

ಚೆನ್ನೈ ವಿಮಾನ ನಿಲ್ದಾಣದ ಭವಿಷ್ಯದ ಸಂಚಾರ ದಟ್ಟಣೆ, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬೇಕಾದ ವ್ಯವಸ್ಥೆ ಮತ್ತು ಪರಿಸರದ ಆಧಾರದ ಮೇಲೆ ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯಗಳನ್ನು ಕೈಗೊಳ್ಳಲಾಯಿತು.

28

ಅದರಂತೆ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಮತ್ತು 3 ಅನ್ನು ಕೆಡವಲಾಗಿದೆ ಮತ್ತು ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಲಾಗಿದೆ.
 

38

2,20,972 ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಟರ್ಮಿನಲ್ ವಾರ್ಷಿಕ 3.5 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು, ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದೆ.
 

48

ಏಪ್ರಿಲ್‌ 8 ರಂದು  ಚೆನ್ನೈ ವಿಮಾನ ನಿಲ್ದಾಣದ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಟರ್ಮಿನಲ್‌ನಲ್ಲಿರುವ ವಿವಿಧ ಆಧುನಿಕ ಸೌಲಭ್ಯಗಳು ಖಂಡಿತವಾಗಿಯೂ ಪ್ರೇಕ್ಷಕರ ಗಮನಸೆಳೆಯಲಿದೆ.
 

58

ಚೆನ್ನೈ ವಿಮಾನ ನಿಲ್ದಾಣದಲ್ಲಿನ ಹೊಸ ಟರ್ಮಿನಲ್ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯವನ್ನು ವಾರ್ಷಿಕ 2.3 ಕೋಟಿಯಿಂದ 3.5 ಕೋಟಿಗೆ ಹೆಚ್ಚಿಸಲಿದೆ.
 

68

ಹೊಸ ವಿಮಾನ ನಿಲ್ದಾಣದ ನೆಲ ಮಹಡಿಯಲ್ಲಿ ರಂಗೋಲಿಯಂಥ ವಿನ್ಯಾಸಗಳನ್ನು ನೆಲದ ಮೇಲೆ ಬಹಳ ದೊಡ್ಡ ಪ್ರಮಾಣದಲ್ಲಿ ಬಿಡಿಸಲಾಗಿದೆ.
 

78

ತಮಿಳು ಭಾಷೆಯ ಶ್ರೇಷ್ಠತೆಯನ್ನು ತೋರಿಸಲು ತಮಿಳು ಸಂಗೀತ, ನೃತ್ಯ ಮತ್ತು ನಾಟಕವನ್ನು ಚಿತ್ರಿಸುವ ವರ್ಣಚಿತ್ರಗಳನ್ನು ಗೋಡೆಗಳ ಮೇಲೆ ಬರೆಯಲಾಗುದೆ.
 

88

ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ತಮಿಳುನಾಡಿನ ಪ್ರಮುಖ ಪ್ರವಾಸಿ ತಾಣಗಳ ವಿವರಣಾತ್ಮಕ ಚಿತ್ರಗಳನ್ನು ಸಹ ಇರಿಸಲಾಗಿದೆ.

Read more Photos on
click me!

Recommended Stories