ಜಪಾನ್‌ ಪ್ರಧಾನಿ ಕಿಶಿದಾ ಜೊತೆ ಪಾರ್ಕ್‌ನಲ್ಲಿ ಗೋಲ್ಗಪ್ಪ, ಲಸ್ಸಿ ಸವಿದ ಪ್ರಧಾನಿ ಮೋದಿ!

First Published Mar 20, 2023, 10:57 PM IST

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಭಾರತ ಪ್ರವಾಸದಲ್ಲಿದ್ದು, ಅವರ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನ ಮತ್ತಷ್ಟು ಬಲಪಡಿಸುತ್ತದೆ ಎಂದು ಪರಿಗಣಿಸಲಾಗಿದೆ. ಈ ವರ್ಷ ಭಾರತ ಮತ್ತು ಜಪಾನ್ ಎರಡಕ್ಕೂ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ದೆಹಲಿ ಬುದ್ಧ ಜಯಂತಿ ಪಾರ್ಕ್‌ನಲ್ಲಿ ಕಿಶಿದಾ ಜೊತೆ ವಾಕಿಂಗ್‌ ಮಾಡಿದ ಪ್ರಧಾನಿ ಮೋದಿ, ಅವರೊಂದಿಗೆ ಗೋಲ್ಗಪ್ಪ ತಿಂದರು. ಲಸ್ಸಿ ಮಾಡಿದ್ದಲ್ಲದೆ, ಮಾವಿನ ಹಣ್ಣಿನ ಪನ್ನಾವನ್ನೂ ಸೇವಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಸೋಮವಾರ ಇಲ್ಲಿನ ಬುದ್ಧ ಜಯಂತಿ ಉದ್ಯಾನವನದ ಪರಿಸರದಲ್ಲಿ ಗೋಲ್ಗಪ್ಪ ಹಾಗೂ ಇಡ್ಲಿಗಳನ್ನು ಸವಿಯುವ ಮೂಲಕ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದರು.
 

ಗೌತಮ ಬುದ್ಧನ 2,500 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ಅಭಿವೃದ್ಧಿಪಡಿಸಿದ ಉದ್ಯಾನವನದ ಸುತ್ತಲೂ ಮೋದಿ ಹಾಗೂ ಕಿಶಿದಾ ಸಾಕಷ್ಟು ಸಮಯ ಮಾತುಕತೆ ನಡೆಸಿದರು. ಎಂದಿನ ಮುಚ್ಚಿದ ಬಾಗಿಲ ಮಾತುಕತಗಳನ್ನು ಮೀರಿ ಉಭಯ ದೇಶದ ಬಾಂಧವ್ಯದ ಬಗ್ಗೆ ಚರ್ಚಿಸಿದರು.

modi kishida

ಬುದ್ಧನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮೋದಿ ಅವರು ಕಿಶಿದಾಗೆ,  ಬಾಲ ಬೋಧಿ ವೃಕ್ಷದ ಸಸಿಯನ್ನು ಉಡುಗೊರೆಯಾಗಿ ನೀಡಿದರು.

ಬುದ್ಧ ಜಯಂತಿ ಪಾರ್ಕ್‌ನ ಕಲ್ಲಿನ ಮೇಜುಗಳ ಮೇಲೆ ಕುಳಿತು, ಸಾಂಸ್ಕೃತಿಕ ಸಂಬಂಧ ವೃದ್ಧಿಯ ಬಗ್ಗೆ ಮಾತುಕತೆ ನಡೆಸಿದರು. ಮೋದಿ ಅವರ ಮಾತುಗಳನ್ನು ಕಿಶಿದಾ ಆಲಿಸುತ್ತಿರುವುದು ಕಂಡುಬಂತು.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಕಿಶಿದಾ ಅವರಿಗೆ ಕರ್ನಾಟಕದ ಕುಶಲಕರ್ಮಿಗಳಿಂದ ರಚನೆಯಾದ ಶ್ರೀಗಂಧದ ಬುದ್ಧನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಕದಂಬ ಮರದ ಜಾಲಿ ಬಾಕ್ಸ್‌ಗಳಲ್ಲಿ ಬುದ್ಧನ ಪ್ರತಿಮೆಯಲ್ಲಿ ಇಡಲಾಗಿತ್ತು.

ಪಾರ್ಕ್‌ನಲ್ಲಿ ನಡೆದಾಡುವ ವೇಳೆ ಗೋಲ್ಗಪ್ಪವನ್ನು ಇಬ್ಬರೂ ನಾಯಕರು ಸವಿದರು. ಗೋಲ್ಗಪ್ಪವನ್ನು ತಿನ್ನುವುದು ಹೇಗೆ ಎನ್ನುವುದನ್ನೂ ಮೋದಿ ತಿಳಿಸಿಕೊಟ್ಟರು.

ಅದಲ್ಲದೆ, ಇಬ್ಬರೂ ನಾಯಕರು ಸೇರಿ ಲಸ್ಸಿಯನ್ನೂ ಮಾಡಿದರು. ಲಸ್ಸಿಯನ್ನು ಕಡೆದು ಅದನ್ನು ಸೇವಿಸಿದರು. ಅದರೊಂದಿಗೆ ಮಾವಿನ ಹಣ್ಣಿನ ಪನ್ನಾವನ್ನೂ ಸೇವಿಸಿದರು.

click me!