ಮೊಮ್ಮಗ ಶಾಲೆಗೆ ಹೋಗಲು ದೇಶದಲ್ಲಿಯೇ ಮೊದಲ ಟೆಸ್ಲಾ ಕಾರು ಖರೀದಿಸಿದ ಸಾರಿಗೆ ಸಚಿವರು!

Published : Sep 05, 2025, 05:36 PM IST

ವಿಶ್ವದ ಅತ್ಯಂದ ಸುರಕ್ಷಿತ ಮತ್ತು ಹೆಚ್ಚು ತಂತ್ರಜ್ಞಾನ ಹೊಂದಿದ ಟೆಸ್ಲಾ ಕಾರಿನ ಭಾರತದ ಮೊದಲ ಮಾಲೀಕರು ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಆಗಿದ್ದಾರೆ. ಅವರು ತಮ್ಮ ಮೊಮ್ಮಗ ಶಾಲೆಗೆ ಕಳಿಸಲು ದೇಶದ ಮೊದಲ ಟೆಸ್ಲಾ ಕಾರನ್ನು ಖರೀದಿಸಿದ್ದಾಗಿ ಹೇಳಿದ್ದಾರೆ.

PREV
15
ನನ್ನ ಮೊಮ್ಮಗ ಶಾಲೆಗೆ ತೆಗೆದುಕೊಂಡು ಹೋಗ್ತಾನೆ

'ಭಾರತದ ಮೊದಲ ಟೆಸ್ಲಾ ಕಾರನ್ನು ಖರೀದಿಸಲು ಸಾಧ್ಯವಾದದ್ದಕ್ಕೆ ನನಗೆ ತುಂಬಾ ಹೆಮ್ಮೆಯಿದೆ. ಪೂರ್ಣ ಹಣವನ್ನು ಪಾವತಿಸಿ ಯಾವುದೇ ರಿಯಾಯಿತಿ ಇಲ್ಲದೆ ಈ ಕಾರನ್ನು ಖರೀದಿಸಿದ್ದೇನೆ. 

ಇದು ನನ್ನ ಮಗನಿಗಲ್ಲ, ಮೊಮ್ಮಗನಿಗೆ ಈ ಕಾರನ್ನು ಕೊಡುತ್ತಿದ್ದೇನೆ. ಅವನು ಶಾಲೆಗೆ ಈ ಕಾರನ್ನು ತೆಗೆದುಕೊಂಡು ಹೋಗುತ್ತಾನೆ ಮತ್ತು ಪರಿಸರ ಸ್ನೇಹಿ ಕಾರಿನ ಸಂದೇಶವನ್ನು ಎಲ್ಲರಿಗೂ ನೀಡುತ್ತಾನೆ. ಎಂದು ಹೇಳಿದ್ದಾರೆ. 
ಈ ಹಿಂದೆ, ‘ದೇಶದ ಮೊದಲ ಟೆಸ್ಲಾ ಕಾರನ್ನು ನಾನೇ ಖರೀದಿಸುತ್ತೇನೆ’ ಎಂದು ಸಾರಿಗೆ ಸಚಿವರು ಹೇಳಿದ್ದರು. ಕೊನೆಗೂ ಅವರು ತಮ್ಮ ಮಾತನ್ನು ಉಳಿಸಿಕೊಂಡರು. ಟೆಸ್ಲಾ ವಿಶ್ವದ ಅತ್ಯಾಧುನಿಕ ಮತ್ತು ಸುರಕ್ಷಿತ ಕಾರು ಎಂದು ಪರಿಗಣಿಸಲಾಗಿದೆ.

25
ಮಾಡೆಲ್ ವೈ ಟೆಸ್ಕಾ ಕಾರು
ಟೆಸ್ಲಾವನ್ನು ವಿಶ್ವದ ಅತ್ಯಾಧುನಿಕ ಮತ್ತು ಸುರಕ್ಷಿತ ಕಾರು ಎಂದು ಪರಿಗಣಿಸಲಾಗಿದೆ. Tesla 3 RWD ಮಾಡೆಲ್ 0 ರಿಂದ 100 ಕಿಮೀ/ಗಂ ವೇಗವನ್ನು 5.6 ಸೆಕೆಂಡುಗಳಲ್ಲಿ ತಲುಪುತ್ತದೆ. Tesla 3 LR RWD ಒಮ್ಮೆ ಚಾರ್ಜ್ ಮಾಡಿದರೆ 622 ಕಿಮೀ ಪ್ರಯಾಣಿಸಬಹುದು. Tesla Standard RWD ಒಮ್ಮೆ ಚಾರ್ಜ್ ಮಾಡಿದರೆ 500 ಕಿಮೀ ಪ್ರಯಾಣಿಸಬಹುದು.
35
ಈ ಕಾರಿನ ವೈಶಿಷ್ಟ್ಯಗಳು

ಹೊಸ ಮಾಡೆಲ್ Y ಕಾರಿನ ಬಾಹ್ಯ ಮತ್ತು ಆಂತರಿಕ ವಿನ್ಯಾಸವನ್ನು ಬದಲಾಯಿಸಿದೆ. ಹಿಂಭಾಗದ ಸೀಟಿಗೆ ಪ್ರತ್ಯೇಕ ಟಚ್‌ಸ್ಕ್ರೀನ್ ಮತ್ತು ಎಲೆಕ್ಟ್ರಿಕ್ ಹೊಂದಾಣಿಕೆ ಸೌಲಭ್ಯವಿದೆ. ಮಾಡೆಲ್ Y ಟೆಸ್ಲಾದ ಅತಿ ಹೆಚ್ಚು ಮಾರಾಟವಾಗುವ ಕಾರು ಮತ್ತು ಇದು ವಿಶ್ವಾದ್ಯಂತ ಟಾಪ್ ಮಾರಾಟದ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು CBU (ಸಂಪೂರ್ಣವಾಗಿ ನಿರ್ಮಿಸಲಾದ ಘಟಕ) ರೂಪದಲ್ಲಿ ಆಮದು ಮಾಡಿಕೊಳ್ಳುವುದರಿಂದ ಭಾರತದಲ್ಲಿ ಬೆಲೆ ಹೆಚ್ಚಾಗಿದೆ. ಇದು BMW X1 LWB, Volvo C40, BYD Sealion 7, Mercedes-Benz EQA ಗಳೊಂದಿಗೆ ಸ್ಪರ್ಧಿಸಲಿದೆ.

45
ಬೆಲೆ ಎಷ್ಟಿದೆ?

ಮಾದರಿ Y RWD ಬೆಲೆ: ₹61.07 ಲಕ್ಷ, ಮಾಡೆಲ್ Y LR RWD ಬೆಲೆ: ₹69.15 ಲಕ್ಷ ರೂ. ಆಗಿದೆ.

55
ಬಣ್ಣಕ್ಕೆ ಹೆಚ್ಚುವರಿ ಶುಲ್ಕ

ಟೆಸ್ಲಾ ಮಾಡೆಲ್ ವೈ ಕಾರಿನ ಮೂಲ ಬೆಲೆಯ ನಂತರ ನಿಮಗೆ ಇಷ್ಟವಾದ ಬಣ್ಣದ ಕಾರನ್ನು ಖರೀದಿ ಮಾಡಲು ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ. ಹೆಚ್ಚುವರಿ ಹಣದ ಮಾಹಿತಿ ಇಲ್ಲಿದೆ.

ಪರ್ಲ್ ವೈಟ್ ಮಲ್ಟಿ-ಕೋಟ್ - ₹95,000, 

ಡೈಮಂಡ್ ಬ್ಲಾಕ್ - ₹95,000, 

ಗ್ಲೇಸಿಯರ್ ಬ್ಲೂ - ₹1,25,000, 

ಕ್ವಿಕ್ ಸಿಲ್ವರ್ - ₹1,85,000, 

ಅಲ್ಟ್ರಾ ರೆಡ್ - ₹1,85,000

Read more Photos on
click me!

Recommended Stories