ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?

Published : Dec 07, 2025, 12:30 PM IST

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ವಿದೇಶ ಪ್ರವಾಸಗಳ ವೇಳೆ ಒಂದು ವಿಚಿತ್ರ ಪ್ರೊಟೋಕಾಲ್ ಪಾಲಿಸುತ್ತಾರೆ. ಅದು ಅವರು ತರುವ ಸೂಟ್​ಕೇಸ್​. ಇದರ ಹಿಂದಿದೆ ನಿಗೂಢ ಸ್ಟೋರಿ. ಮೊನ್ನೆಯಷ್ಟೇ ಭಾರತಕ್ಕೆ ಭೇಟಿ ಕೊಟ್ಟಿದ್ದ ಬೆನ್ನಲ್ಲೇ ಇದರ ರಹಸ್ಯವೂ ಬಹಿರಂಗಗೊಂಡಿದೆ. 

PREV
16
ಭಾರತಕ್ಕೆ ಪುಟಿನ್​

ರಷ್ಯಾ ಅಧ್ಯಕ್ಷ ವ್ಲಾಡಿಮರ್‌ ಪುಟಿನ್‌ ಅವರು ಭಾರತಕ್ಕೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಜೊತೆ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಾಪಸ್​ ತೆರಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಭೇಟಿಯ ಸಮಯದಲ್ಲಿ, ಮೋದಿ ಅವರಿಗೆ ಕೊ*ಲೆ ಬೆದರಿಕೆ ಇದ್ದ ಸಂದರ್ಭದಲ್ಲಿ, ಅವರ ಜೀವವನ್ನು ಪುಟಿನ್‌ ಅವರು ಕಾಪಾಡಿದ್ದಾರೆ ಎನ್ನುವ ಮಾತು ಕೂಡ ಇದೆ.

26
ಮಲ- ಮೂತ್ರ ಸದ್ದು

ಪುಟಿನ್ ಅವರು ಯಾವ ದೇಶಕ್ಕೆ ಹೋದರೂ ಅವರ ಮಲ- ಮೂತ್ರದ ಪ್ರೊಟೋಕಾಲ್‌ ಭಾರಿ ಸದ್ದು ಮಾಡುತ್ತದೆ. ಹೌದು. ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಎಲ್ಲಿಯೇ ಹೋದರೂ ಅವರ ಅಂಗರಕ್ಷಕರು ಮಲ-ಮೂತ್ರ ಸೂಟ್‌ಕೇಸ್‌ ಹಿಡಿದು ಬರುತ್ತಾರೆ ಎನ್ನುವ ಮಾತಿದೆ!

36
2017ರಿಂದಲೇ ಆರಂಭ

2017ರ ಮೇ 29 ರಂದು ಫ್ರಾನ್ಸ್‌ ಭೇಟಿಯ ಸಮಯದಿಂದ ಇದು ಆರಂಭವಾಗಿದೆ ಎನ್ನಲಾಗುತ್ತಿದೆ. ವ್ಲಾಡಿಮರ್‌ ಪುಟಿನ್‌ ಅವರು, ವಿದೇಶ ಪ್ರವಾಸದಲ್ಲಿದ್ದ ವೇಳೆ, ಒಬ್ಬ ಸಿಬ್ಬಂದಿಗೆ ಅವರ ಮಲ ಹಾಗೂ ಮೂತ್ರವನ್ನು ಸಂಗ್ರಹ ಮಾಡುವುದೇ ಕೆಲಸ. ಅದನ್ನು ಅವರು ವಾಪಾಸ್‌ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಹೇಳಲಾಗುತ್ತದೆ.

46
ಕಾರಣ ಏನು?

ಇದಕ್ಕೆ ಒಂದು ಕಾರಣವೂ ಇದೆ. ಅದೇನೆಂದರೆ, ಪುಟಿನ್‌ ಅವರ ಆರೋಗ್ಯದ ಬಗ್ಗೆ ಆಗಾಗ್ಗೆ ಹಲವಾರು ಸುದ್ದಿಗಳು ಸದ್ದು ಮಾಡುತ್ತಲೇ ಇರುತ್ತವೆ. ಇದೇ ಕಾರಣಕ್ಕೆ, ಅವರ ದೈಹಿಕ ಸ್ಥಿತಿಯ ಬಗ್ಗೆ ಒಳನೋಟ ಯಾರಿಗೂ ತಿಳಿಯಬಾರದು ಎನ್ನುವ ಉದ್ದೇಶವಂತೆ. 

56
ವಿದೇಶಿ ಗುಪ್ತಚರ

ಇದರ ಜೊತೆಗೆ, ಈ ಮಲ ಮೂತ್ರದ ಮೂಲಕ ಡೇಟಾವನ್ನು ವಿದೇಶಿ ಗುಪ್ತಚರ ಅಥವಾ ಗೂಢಚಾರ ಸಂಸ್ಥೆಗಳು ವಿಶ್ಲೇಷಿಸಬಹುದು ಎನ್ನುವ ಲೆಕ್ಕಾಚಾರ ಎನ್ನಲಾಗಿದೆ.

66
ಸೂಟ್‌ಕೇಸ್‌

ಅಂದಹಾಗೆ ಇದು ಮೊದಲು ಬೆಳಕಿಗೆ ಬಂದದ್ದು 2019ರಲ್ಲಿ. ಪುಟಿನ್‌ ಅವರ ಜೊತೆ ಇರುವ ವ್ಯಕ್ತಿಯೊಬ್ಬರು ಇದರ ಸೂಟ್‌ಕೇಸ್‌ ಹಿಡಿದುಕೊಂಡಿರುತ್ತಾರೆ. ಅವರ ಮಲ, ಮೂತ್ರಕ್ಕೆ ಹೋದಾಗ ಅದನ್ನು ಸಂಗ್ರಹಿಸಿ ಸೂಟ್‌ಕೇಸ್‌ನಲ್ಲಿ ಇರಿಸಲಾಗುತ್ತದೆ ಎನ್ನಲಾಗಿದೆ.

Read more Photos on
click me!

Recommended Stories