ಮಳೆ ಬ್ರೇಕ್ ನೀಡಿದ ಬೆನ್ನಲ್ಲೇ ಭಾರತೀಯ ರೈತರಿಗೆ ಗುಡ್ ನ್ಯೂಸ್ ನೀಡಿದ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅಧಿಕ ಇಳುವರಿ, ವ್ಯತಿರಿಕ್ತ ಹವಾಮಾನದಲ್ಲೂ ಕೈಹಿಡಿಯಬಲ್ಲ 109 ಬೀಜ ತಳಿಗಳನ್ನು ಮೋದಿ ಬಿಡುಗಡೆ ಮಾಡಿದ್ದಾರೆ. 

ಭಾರಿ ಮಳೆ ಕೊಂಚ ವಿರಾಮ ನೀಡಿದ ಬೆನ್ನಲ್ಲೇ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಭಾರತದ ರೈತರು ಹಾಗೂ ಕೃಷಿಗೆ ಉತ್ತೇಜನಕಾರಿ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. 

ಇಂದು ನರೇಂದ್ರ ಮೋದಿ 109 ಬೀಜ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ರೈತರಿಗೆ ಅತ್ಯಧಿಕ ಇಳುವರಿ ಹಾಗೂ ಹವಾಮಾನ ನಿರೋಧಕ ಶಕ್ತಿ ಹೊಂದಿರುವ ಬೀಜ ತಳಿಗಳಾಗಿವೆ. ಇದರಿಂದ ರೈತರ ಕೃಷಿ ಉತ್ಪಾದಕತೆ ಪ್ರಮಾಣವೂ ಹೆಚ್ಚಾಗಲಿದೆ.


34 ಕ್ಷೇತ್ರ ಬೆಳೆ, 27 ತೋಟಗಾರಿಕಾ ಬೆಳೆ ಹಾಗೂ ಇತರ 61 ಬೆಳೆಗಳನ್ನೊಳಗೊಂಡ 109 ಬೀಜ ತಳಿ ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. 
 

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಕೇಂದ್ರ ಈ ಬೀಜ ತಳಿಗಳನ್ನು ಅಭಿವೃದ್ಧಿಪಡಿಸಿದೆ. ದೆಹಲಿಯ ಪುಸಾ ಕ್ಯಾಂಪಸ್‌ನಲ್ಲಿ ಮೋದಿ ಈ ಬೀಜ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಹೊಸ ಬೀಜ ತಳಿಗಳು ಕಡಿಮೆ ಮೆಚ್ಚದಲ್ಲಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಲಿದೆ. ಜೊತೆಗೆ ಇಳುವರಿಯೂ ಹೆಚ್ಚಾಗಿರುವ ಕಾರಣ ರೈತರ ಆದಾಯ ದ್ವಿಗುಣವಾಗಲಿದೆ ಎಂದಿದ್ದಾರೆ.

ಪೌಷ್ಠಿಕಾಂಶಯುಕ್ತ ಬೆಳೆಗಳ ಬೇಡಿಕೆ ಹೆಚ್ಚಾಗುತ್ತಿದೆ. ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಹೀಗಾಗಿ ಬಹುತೇಕರು ಆರ್ಗಾನಿಕ್ ಆಹಾರದತ್ತ ವಾಲುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಸಿರಿ ಧಾನ್ಯ ಸೇರಿದಂತೆ ಪೌಷ್ಠಿಕಾಂಶಯುಕ್ತ ಆಹಾರಗಳಿಗೆ ಬಾರಿ ಬೇಡಿಕೆ ಇದೆ. ಇದೀಗ ಹೊಸ ಬೀಜ ತಳಿಗಳು ಪೌಷ್ಠಿಕಾಂಶಯುಕ್ತ ಹಾಗೂ ರೈತರ ಆದಾಯವನ್ನೂ ಹೆಚ್ಚಿಸಲಿದೆ ಎಂದಿದ್ದಾರೆ. 

ನೈಸರ್ಗಿಕ ಹಾಗೂ ಆರ್ಗಾನಿಕ್ ಉತ್ಪಾದನೆಗಳಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಇದರ ನಡುವೆ ಹೊಸ ಬೀಜ ತಳಿಗಳ ಬಿಡುಗಡೆ ರೈತರ ಕೃಷಿ ಪದ್ಧತಿ ಹಾಗೂ ಉತ್ಪಾದನೆ ವೇಗವನ್ನು ಹೆಚ್ಚಸಲಿದೆ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ಬೀಜ ತಳಿಗಳನ್ನು ಅಭಿವೃದ್ಧಿಪಡಿಸಿರುವ ಸಂಶೋಧಕರು,ವಿಜ್ಞಾನಿಗಳು ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ತರಕಾರಿ, ಸಿರಿಧಾನ್ಯ, ಹತ್ತಿ, ಧಾನ್ಯ ಸೇರಿದಂತೆ 109 ಬಗೆಯ ಬೀಜಗಳು ಲಭ್ಯವಿದೆ.

Latest Videos

click me!