ಆಳ ಸಮುದ್ರದಲ್ಲಿ ಪ್ರಧಾನಿ ಮೋದಿ ಶ್ರೀ ಕೃಷ್ಣನ ದ್ವಾರಕ ದರ್ಶನ, ಭಕ್ತಿಯಿಂದ ನವಿಲು ಗರಿ ಅರ್ಪಣೆ

Published : Feb 25, 2024, 04:17 PM ISTUpdated : Feb 25, 2024, 04:22 PM IST

ಕೃಷ್ಣನ ನಗರ ದ್ವಾರಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ 4,150 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಸುದರ್ಶನ ಸೇತು ಉದ್ಘಾಟನೆ ಮಾಡಿದ ಮೋದಿ, ಸಮುದ್ರದೊಳಗೆ ಮುಳುಗಿರುವ ಶ್ರೀ ಕೃಷ್ಣನ ದ್ವಾರಕಾ ನಗರದ ದರ್ಶನವನ್ನೂ ಮೋದಿ ಮಾಡಿದ್ದಾರೆ. ಇದಕ್ಕಾಗಿ ಮೋದಿ ಆಳ ಸಮುದ್ರದೊಳಗೆ ತೆರಳಿದ್ದಾರೆ.  

PREV
18
ಆಳ ಸಮುದ್ರದಲ್ಲಿ ಪ್ರಧಾನಿ ಮೋದಿ ಶ್ರೀ ಕೃಷ್ಣನ ದ್ವಾರಕ ದರ್ಶನ, ಭಕ್ತಿಯಿಂದ ನವಿಲು ಗರಿ ಅರ್ಪಣೆ

ದ್ವಾರಕದಲ್ಲಿನ ಹಲವು ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಇದೇ ವೇಳೆ ದ್ವಾರಕದಲ್ಲಿ ಭಾರತದ ಅತೀ ದೊಡ್ಡ ಕೇಬಲ್ ಸೇತುವೆ, ಸುದರ್ಶನ ಸೇತುವನ್ನು ಮೋದಿ ಉದ್ಘಾಟಿಸಿದ್ದಾರೆ.

28

ದ್ವಾರಕ ಶ್ರೀ ಕೃಷ್ಣನ ನಗರ. ಆದರೆ ಪ್ರಾಕೃತಿಕ ವಿಕೋಪಗಳಿಂದ ಶ್ರೀಕೃಷ್ಣನ ಅರಮನೆ, ನಗರ ಎಲ್ಲವೂ ಸಮುದ್ರಗೊಳಗೆ ಮುಳುಗಿ ಹೋಗಿದೆ. ಸಾಹಸಿಗಳು ಇಲ್ಲಿಗೆ ತೆರಳುತ್ತಾರೆ. ಇದೀಗ ದ್ವಾರಕದಲ್ಲಿ ಮೋದಿ ಆಳ ಸಮುದ್ರಕ್ಕಿಳಿದು ಶ್ರೀಕೃಷ್ಣನ ದ್ವಾರಕ ದರ್ಶನ ಮಾಡಿದ್ದಾರೆ.
 

38

ಸಮುದ್ರದೊಳಗಿರುವ ಶ್ರೀಕೃಷ್ಣನ ದ್ವಾರಕಾಗೆ ತೆರಳಿದ ಮೋದಿ, ವಿಶೇಷ ಪಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ನವಿಲು ಗರಿಗಳನ್ನು ಸಮುದ್ರದೊಳಕ್ಕೆ ಒಯ್ದು ಶ್ರೀಕೃಷ್ಣನಿಗೆ ಅರ್ಪಿಸಿದ್ದಾರೆ.

48

ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ದ್ವಾರಕ ಅತ್ಯಂತ ಪ್ರಮುಖ ಕ್ಷೇತ್ರವಾಗಿದೆ. ಇದೀಗ ಮೋದಿ ಅತ್ಯಂತ ಕಠಿಣ ಸಮುದ್ರೊಳಗೆ ಇಳಿದು ದ್ವಾರಕ ದರ್ಶನ ಮಾಡಿ ಪೂಜೆ ಸಲ್ಲಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

58

ಈ ಕುರಿತು ಟ್ವೀಟ್ ಮಾಡಿದ ಮೋದಿ, ನೀರಿನಲ್ಲಿ ಮುಳುಗಿ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ನನಗೆ ಒಲಿದ ಅತ್ಯಂತ ದಿವ್ಯ ಹಾಗೂ ಸುಂದರ ಅನುಭವವಾಗಿತ್ತು ಎಂದಿದ್ದಾರೆ.
 

68

ಸಮುದ್ರೊಳಗೆ ಇಳಿದು ಪ್ರಾರ್ಥನೆ ಸಲ್ಲಿಸುವದರೊಂದಿಗೆ ಆದ್ಯಾತ್ಮಿಕ ಭವ್ಯತೆ , ಪ್ರಾಚಿನ ಯುಗಕ್ಕೆ ಸಂಪರ್ಕ ಸೇತುವೆ ಭಕ್ತಿಯ ಭಾವ ಮೂಡಿಸಿದೆ. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು ಆಶೀವ್ರದಿಸಲಿ ಎಂದು ಮೋದಿ ಹೇಳಿದ್ದಾರೆ. 
 

78

ಹಳೇ ದ್ವಾರಕಾ ನಗರ ಹಾಗೂ ಹೊಸ ದ್ವಾರಕವನ್ನು ಸಂಪರ್ಕಿಸಲು ಇಂದ ಮೋದಿ ಸುದರ್ಶನ ಸೇತು ಕೇಬಲ್ ಸೇತುವೆಯನ್ನು ಮೋದಿ ಉದ್ಘಾಟಿಸಿದ್ದಾರೆ. ಇದು 2.3 ಕಿಲೋಮೀಟರ್ ಉದ್ದದ ಸೇತುವೆಯಾಗಿದೆ.
 

88

970 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೇತುವೆಗೆ 2017ರಲ್ಲಿ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಸೇತುವೆಯಲ್ಲಿರುವ ಕಾಲುದಾರಿಯಲ್ಲಿ ಭಗವದ್ಗೀತೆಯಲ್ಲಿನ ಶ್ಲೋಕಗಳನ್ನು ಮುದ್ರಿಸಲಾಗಿದೆ.

Read more Photos on
click me!

Recommended Stories