ಭದ್ರತೆ ಇಲ್ಲದೆ ಹೊಸ ಸಂಸತ್ ಭವನ ಜಾಗಕ್ಕೆ ಪ್ರಧಾನಿ ಮೋದಿ ವಿಸಿಟ್! ಪೋಟೋಗಳು

First Published | Sep 27, 2021, 12:37 AM IST

ನವದೆಹಲಿ(ಸೆ. 27) ಅಮೆರಿಕ ಪ್ರವಾಸ ಮುಗಿಸಿ ಬಂದಿರುವ ಪ್ರಧಾನಿ ಮೋದಿ ತಮ್ಮ ಚಟುವಟಿಕೆಯನ್ನು ಹಾಗೆ ಮುಂದುವರಿಸಿದ್ದಾರೆ.  ಭದ್ರತೆ ಇಲ್ಲದೆ ಪ್ರಧಾನಿ ಮೋದಿ ದಿಢೀರ್  ಎಂದು ಹೊಸ ಸಂಸತ್ ಭವನ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 ರಾತ್ರಿ 8.45ಕ್ಕೆ ಪ್ರಧಾನಿ ಮೋದಿ ಹೊಸ ಸಂಸತ್ ಭವನ ನಿರ್ಮಾಣ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಭದ್ರತೆಗೆ ಯಾವುದೇ ಪೂರ್ವ ಸೂಚನೆ ನೀಡದೆ ದಿಢೀರ್ ಭೇಟಿ ನೀಡಿದ್ದಾರೆ.

ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು 2022ರಲ್ಲಿ ಹೊಸ ಸಂಸತ್‌ ಕಟ್ಟಡದಲ್ಲಿ ಆಚರಿಸಲು ಮುಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್‌ 10 ರಂದು ಹೊಸ ಸಂಸತ್‌ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು.

Tap to resize

64,500 ಚ.ಮೀಟರ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ಒಟ್ಟು 971 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿಯೊಂದು ಮಾಹಿತಿಯನ್ನು ನರೇಂದ್ರ ಮೋದಿ ಪಡೆದುಕೊಳ್ಳುತ್ತಿದ್ದಾರೆ.

ನಾಲ್ಕು ಮಹಡಿಗಳನ್ನು ಹೊಂದಿರಲಿದ್ದು, ಕೆಳ ಮಹಡಿ, ನೆಲ ಮಹಡಿ, ಮೊದಲ ಮತ್ತು ಎರಡನೇ ಮಹಡಿಗಳು ಇರಲಿವೆ. ಮೋದಿ ಭೇಟಿ ವೇಳೆ ಎಲ್ಲ ಮಾಹಿತಿ ಪಡೆದುಕೊಂಡರು.

ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಆಗಮಿಸಲು ಒಂದು ದ್ವಾರ, ಲೋಕಸಭೆಯ ಸ್ಪೀಕರ್, ರಾಜ್ಯಸಭೆಯ ಅಧ್ಯಕ್ಷರು ಮತ್ತು ಸಂಸದರು ಬರಲು ಒಂದು ದ್ವಾರ, ಸಾಮಾನ್ಯ ದ್ವಾರ, ಸಂಸದರಿಗಾಗಿ ಮತ್ತೊಂದು ಪ್ರವೇಶ ದ್ವಾರ ಹಾಗೂ ಎರಡು ಸಾರ್ವಜನಿಕ ಪ್ರವೇಶ ದ್ವಾರಗಳು ಹೊಸ ಕಟ್ಟಡದಲ್ಲಿ ಇರಲಿವೆ..

Latest Videos

click me!