ಮರಿ ಮೊಮ್ಮಗನ ಎತ್ತಿ ಮುದ್ದಾಡಿದ ಮುತ್ತಾತ...ಸಂತಸಕ್ಕೆ ಪಾರವೇ ಇಲ್ಲ! ಪೋಟೋಸ್

ಬೆಂಗಳೂರು(ಸೆ. 24) ನಿಖಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿ ಮಗನನ್ನು ಬರಮಾಡಿಕೊಂಡಿದ್ದಾರೆ, ಸಹಜವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ದೇವೇಗೌಡರ ಕುಟುಂಬದ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ. ಮುದ್ದು ಮಗುವನ್ನು ಮುತ್ತಾತ ದೇವೇಗೌಡ ಎತ್ತಿ ಆಡಿಸಿದ್ದಾರೆ.

ಸ್ಯಾಂಡಲ್‌ವುಡ್ ಯುವರಾಜ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಹಾಗೂ ಪತ್ನಿ ರೇವತಿ(Revathi) ಗಂಡು ಮಗುವನ್ನು  ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ.

ಜುಲೈ ತಿಂಗಳಿನಲ್ಲಿ ಮಾಜಿ ಸಿಎಂ ನಿವಾಸಕ್ಕೆ ಅವಧೂತ ವಿನಯ್ ಗುರೂಜಿ(Vinay Guruji) ಭೇಟಿ ನೀಡಿದಾಗ ಮನೆಗೆ ಗಂಡು ಮಗುವಿನ ಆಗಮನ ಆಗುತ್ತದೆ. ನಿಖಿಲ್‌ಗೆ ಒಳ್ಳೆಯ ಯೋಗ ಬರುತ್ತದೆ ಎಂದು ಆಶೀರ್ವಾದ ಮಾಡಿದ್ದರು. ಅಂದು ವಿನಯ್‌ ಗುರೂಜಿ ಆಡಿದ ಮಾತು ಇಂದು ಸತ್ಯವಾಗಿದೆ.



ತಾತ  ಮೊಮ್ಮಗ ಮತ್ತು ಮರಿಮಗ... ಮಾಜಿ ಪ್ರಧಾನಿ ದೇವೇಗೌಡರು ಹೊಸ ಸದಸ್ಯನ ಆಗಮನದಿಂದ ಸಂಭ್ರಮಕ್ಕೆ ಒಳಗಾಗಿದ್ದಾರೆ. ಅವರ ಮುಖದ ಮೇಲಿನ ಮಂದಹಾಸವೇ ಎಲ್ಲವನ್ನು ಹೇಳುತ್ತಿದೆ. 

ಮಗುವನ್ನು ಎತ್ತಿ ಮುದ್ದಾಡಿದ ತಾತ ಎಚ್‌ಡಿ ಕುಮಾರಸ್ವಾಮಿ ಮತ್ತು ಅಜ್ಜಿ ಅನಿತಾ ಕುಮಾರಸ್ವಾಮಿ.  ಸಂಭ್ರಮವನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. 

ಮಗುವಿನ ಪೋಟೋ ರಿವೀಲ್ ಮಾಡಲಾಗಿದ್ದು ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ. ನಿಖಿಲ್ ದಂಪತಿಗೆ ಶುಭಾಶಯ ಕೋರಿದ್ದಾರೆ.  ದೇವೇಗೌಡರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ

ಆಸ್ಪತ್ರೆಯಲ್ಲೇ ಇದ್ದ ನಿಖಿಲ್ ಪುತ್ರನ ಬರಮಾಡಿಕೊಂಡು ಎಲ್ಲರಿಗೂ ಸುದ್ದಿ ಮುಟ್ಟಿಸಿದರು. ಸಿಹಿ ಸುದ್ದಿಯನ್ನು ಮೊದಲು ಅಭಿಮಾನಿಗಳ ಜತೆ ಹಂಚಿಕೊಂಡರು.

ಮುದ್ದು ಮಗುವಿಗೆ ಅಪ್ಪನ ಪ್ರೀತಿ... ಮದುವನ್ನು ಕೈಗೆ ಎತ್ತಿಕೊಂಡ ನಿಖಿಲ್ ತಂದೆಯ ವಿಶೇಷ ಅನುಭೂತಿ ಪಡೆದುಕೊಂಡರು. ಶುಭ ಹಾರೈಕೆಗಳು ಹರಿದು ಬರುತ್ತಲೇ ಇವೆ. 
 

Latest Videos

click me!