ಗರಿಷ್ಠ ಫಾಲೋವರ್ಸ್ ಪಡೆದ ವಿಶ್ವನಾಯಕ, ವ್ಯಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಮೋದಿಗೆ 5 ಮಿಲಿಯನ್ ಹಿಂಬಾಲಕರು!

First Published | Sep 25, 2023, 3:22 PM IST

ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನ ಪಡೆದಿರುವ ಪ್ರಧಾನಿ ಮೋದಿ ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ಮೊನ್ನೆ ಮೊನ್ನೆ ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ ಪ್ರಧಾನಿ ಮೋದಿ ಒಂದೇ ವಾರದಲ್ಲಿ 5.2 ಮಿಲಿಯನ್ ಫಾಲೋವರ್ಸ್ ಪಡೆಯುವ ಮೂಲಕ ವ್ಯಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಗರಿಷ್ಠ ಹಿಂಬಾಲಕರ ಪಡೆದ ವಿಶ್ವದ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಬೆನ್ನಲ್ಲೇ ವ್ಯಾಟ್ಸ್ಆ್ಯಪ್ ಚಾನೆಲ್ ಮೂಲಕ ಮೋದಿ ಮಹತ್ವದ ಸಂದೇಶ ನೀಡಿದ್ದಾರೆ.
 

ಪ್ರಧಾನಿ ನರೇಂದ್ರ ಮೋದಿ ತಂತ್ರಜ್ಞಾನದ ಬಳಕೆಯಲ್ಲಿ ಸದಾ ಮುಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಮೋದಿ ಜನರೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಸಾಮಾನ್ಯ ಜನರಿಗೆ ಮತ್ತಷ್ಟು ಹತ್ತಿರವಾಗಲು ಪ್ರಧಾನಿ ಮೋದಿ ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ್ದರು.

ಪ್ರಧಾನಿ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಲಕ್ಷ ಲಕ್ಷ ಫಾಲೋವರ್ಸ್ ಪಡೆದಿದ್ದಾರೆ. ಇದೀಗ ಒಂದೇ ವಾರದಲ್ಲಿ ಪ್ರಧಾನಿ ಮೋದಿ ಹೊಸ ದಾಖಲೆ ಬರೆದಿದ್ದಾರೆ. ಇದೀಗ ಮೋದಿ 5.2 ಮಿಲಿಯನ್ ಫಾಲೋವರ್ಸ್ ಪಡೆದಿದ್ದಾರೆ. 

Tap to resize

Modi

ಪ್ರಧಾನಿ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಒಂದು ವಾರದಲ್ಲಿ 5.2 ಮಿಲಿಯನ್ ಫಾಲೋವರ್ಸ್ ಪಡೆದಿದ್ದಾರೆ. ಈ ಮೂಲಕ ವ್ಯಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಫಾಲೋವರ್ಸ್ ಪಡೆದ ವಿಶ್ವದ ನಾಯಕ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ.
 

5 ಮಿಲಿಯನ್ ಫಾಲೋವರ್ಸ್ ಪಡೆಯುತ್ತಿದ್ದಂತೆ ಪ್ರಧಾನಿ ಮೋದಿ ಕಮ್ಯೂನಿಟಿ ಬಳಕೆದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಾವೀಗ 50 ಲಕ್ಷ ಬಳಗ ಸೇರಿದ್ದೇವೆ. ವ್ಯಾಟ್ಸ್ಆ್ಯಪ್ ಚಾನೆಲ್ ಮೂಲಕ ಸಂಪರ್ಕದಲ್ಲಿರುವ ಎಲ್ಲರಿಗೂ ಧನ್ಯವಾದ ಎಂದು ಮೋದಿ ಹೇಳಿದ್ದಾರೆ.

ನಿಮ್ಮ ಬೆಂಬಲ, ಸಹಕಾರಕ್ಕೆ ನಾನು ಋಣಿಯಾಗಿದ್ದೇನೆ. ಈ ಸಂವಹನ ಮುಂದುವರಿಯುತ್ತದೆ. ಈ ಅದ್ಭುತ ತಾಣದಲ್ಲಿ ಇದೇ ರೀತಿ ಸಂಪರ್ಕದಲ್ಲಿರಿ ಎಂದು ಮೋದಿ ಮನವಿ ಮಾಡಿದ್ದಾರೆ.

ಮೋದಿ ವ್ಯಾಟ್ಸ್ಆ್ಯಪ್ ಕಮ್ಯೂನಿಟಿ ಚಾನೆಲ್ ಗ್ರೂಪ್ ಸೇರಲು ಲಿಂಕ್ ನೀಡಲಾಗಿದೆ. ಈ ಲಿಂಕ್ ಕ್ಲಿಕ್ ಮಾಡಿ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್ ಸೇರಿಕೊಳ್ಳಬಹುದು.
https://whatsapp.com/channel/0029Va8IaebCMY0C8oOkQT1F

ಲಿಂಕ್ ಓಪನ್ ಆಗದೇ ಇದ್ದಲ್ಲಿ, ನಿಮ್ಮ ವ್ಯಾಟ್ಸ್ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ, ಬಳಿಕ ಮೇಲಿನ ಲಿಂಕ್ ಕ್ಲಿಕ್ ಮಾಡಿ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್ ಸೇರಿ, ಮೋದಿ ಜೊತೆಗೆ ಸಂಪರ್ಕದಲ್ಲಿರಲು ಸಾಧ್ಯವಿದೆ. 
 

Latest Videos

click me!