ಖಲಿಸ್ತಾನ ಉಗ್ರರ ಪರ ನಿಂತಿರುವ ಕೆನಡಾಕ್ಕೆ ಶಾಕ್ ಕೊಟ್ಟ ಮಹೀಂದ್ರಾ!

Published : Sep 24, 2023, 01:20 PM ISTUpdated : Sep 24, 2023, 01:35 PM IST

ಭಾರತದ ವಿರುದ್ಧ ದ್ವೇಷ ಕಾರುತ್ತಿರುವ ಖಲಿಸ್ತಾನಿ ಉಗ್ರರ ಬೆನ್ನಿಗೆ ನಿಂತಿರುವ ಕೆನಡಾಕ್ಕೆ ಭಾರತೀಯ ಕಂಪನಿಗಳು ಶಾಕ್ ನೀಡುತ್ತಿವೆ. ಯಾವ್ಯಾವ ಕಂಪನಿಗಳು ವ್ಯವಹಾರಿಕ ಒಪ್ಪಂದ ನಿಧಾನಗೊಳಿಸಿವೆ ಇಲ್ಲಿ ನೋಡಿ.

PREV
18
ಖಲಿಸ್ತಾನ ಉಗ್ರರ ಪರ ನಿಂತಿರುವ ಕೆನಡಾಕ್ಕೆ ಶಾಕ್ ಕೊಟ್ಟ ಮಹೀಂದ್ರಾ!

ಖಲಿಸ್ತಾನಿಗಳ ಮತ ಬ್ಯಾಂಕ್‌ಗಾಗಿ ಭಾರತದೊಂದಿಗೆ ಸಂಬಂಧ ಹಾಳುಗೆಡವಿಕೊಂಡಿರುವ ಕೆನಡಾಗೆ ಶಾಕ್ ಮೇಲೆ ಶಾಕ್ ಕೊಡುತ್ತಿರುವ ಭಾರತ. ಭಯೋತ್ಪಾದಕ ಖಲಿಸ್ತಾನ ಪರ ಹೇಳಿಕೆ ನೀಡಿದ ನಂತರ ಕೆನಡಾದಲ್ಲಿನ ಒಂದೊಂದೇ ಭಾರತೀಯ ಕಂಪನಿಗಳು ಆ ದೇಶದೊಂದಿಗಿನ ವ್ಯವಹಾರ ನಿಧಾನವಾಗಿ ನಿಲ್ಲಿಸುತ್ತಿವೆ. ಇದೀಗ ಅಂತದ್ದೊಂದು ಮಹೀಂದ್ರಾ ಅಂಡ ಮಹೀಂದ್ರ ಕಂಪನಿ ಮುಂದಡಿ ಇಟ್ಟಿದೆ.

28

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಖಲಿಸ್ತಾನ್ ವಿಷಯದ ಕುರಿತು ಹೇಳಿಕೆ ನೀಡಿದ ನಂತರ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿದೆ, ಎರಡೂ ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಎರಡೂ ದೇಶಗಳ ನಡುವಿನ ಹದಗೆಡುತ್ತಿರುವ ಸಂಬಂಧವು ಇದೀಗ ಭಾರತೀಯ ಆಟೋಮೊಬೈಲ್ ದೈತ್ಯ ಮಹೀಂದ್ರಾ ಮತ್ತು ಮಹೀಂದ್ರಾ ಕೆನಡಾದಲ್ಲಿ ತನ್ನ ವ್ಯವಹಾರವನ್ನು ಮುಚ್ಚಲು ನಿರ್ಧರಿಸಿದೆ ಇದು ಕೆನಡಾ ದೇಶದ ಆರ್ಥಿಕತೆಗೆ ಹೊಡೆತ ನೀಡಲಿದೆ.

38

 ಕೆನಡಾದ ಸಂಸ್ಥೆಯಾದ ರೇಸನ್ ಏರೋಸ್ಪೇಸ್ ಕಾರ್ಪೊರೇಶನ್‌(Resson Aerospace Corporation)ನೊಂದಿಗಿನ ಪಾಲುದಾರಿಕೆಯನ್ನ ಹೊಂದಿದ್ದ ಮಹೀಂದ್ರಾ, ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿದ ಬಳಿಕ ಆ ಸಂಸ್ಥೆಯೊಂದಿಗೆ ಪಾಲುದಾರಿಕೆ ಕೊನೆಗೊಳಿಸಿದ ಮಹೀಂದ್ರಾ ಮತ್ತು ಮಹೀಂದ್ರಾ. ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿರುವ ಖಲಿಸ್ತಾನಿ ಉಗ್ರರ ಬೆಂಬಲಕ್ಕೆ ನಿಂತಿರುವ ಕೆನಡಾಗೆ ಭಾರತೀಯ ಕಂಪನಿಗಳು ಶಾಕ್ ನೀಡುತ್ತಿವೆ. ಕೆನಡಾ ದೇಶದೊಂದಿಗೆ ವ್ಯವಹಾರ ಕಡಿದುಕೊಳ್ಳುತ್ತಿರುವುದು ಮಹೀಂದ್ರಾ ಕಂಪನಿ ಮಾತ್ರವಲ್ಲ. ಇನ್ನು ಹಲವು ಕಂಪನಿಗಳು  ತೊರೆಯಲು ನಿರ್ಧರಿಸಿವೆ.

48

ಮಹೀಂದ್ರಾ ಕಂಪನಿ ಬಳಿಕ ಮತ್ತೊಂದು ಭಾರತೀಯ ಸಂಸ್ಥೆ JSW ಸ್ಟೀಲ್ ಲಿಮಿಟೆಡ್ ಸಹ ಕೆನಡಾದ ಕಂಪನಿ ಟೆಕ್ ರಿಸೋರ್ಸಸ್ ನೊಂದಿಗೆ ತನ್ನ ಒಪ್ಪಂದವನ್ನು ನಿಧಾನಗೊಳಿಸಿದೆ.  ಕೆನಡಾದ ಕಂಪನಿ ಟೆಕ್ ರಿಸೋರ್ಸಸ್‌ನ ಉಕ್ಕಿನ ಉತ್ಪಾದನಾ ಘಟಕ ಮತ್ತು ಕಲ್ಲಿದ್ದಲು ಘಟಕದಲ್ಲಿ ಪಾಲುದಾರ ಆಗಲು ಜೆಎಸ್‌ಡಬ್ಲ್ಯೂ ಇಚ್ಛಿಸಿತ್ತು. ಆದರೆ ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ವಿವಾದದ ನಡುವೆ ಒಪ್ಪಂದ ಕಡಿತಗೊಳಿಸಲು ಮುಂದಾಗಿದೆ ಎಂದು ನವಭಾರತ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿದೆ. ಅದ್ಯಾಗೂ ಎರಡು ದೇಶಗಳ ನಡುವಿನ  ನಡುವಿನ ಉದ್ವಿಗ್ನತೆಯನ್ನು ಶಾಂತವಾಗುವುದನ್ನು ಕಾಯುತ್ತಿದೆ.

58

ಕೆನಡಾದಲ್ಲಿಯೇ ಗಣನೀಯ ಸಂಖ್ಯೆಯಲ್ಲಿ ಭಾರತೀಯ ಮೂಲದ ವಲಸೆ ಬಂದ ಜನರು ಇದ್ದಾರೆ. ವಿದೇಶಾಂಗ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 3,21,00,340 ಸಾಗರೋತ್ತರ ಭಾರತೀಯ ನಾಗರಿಕರಲ್ಲಿ 5.26 ಪ್ರತಿಶತ ಕೆನಡಾದಲ್ಲಿದ್ದಾರೆ ಮತ್ತು ಕೆನಡಾದ ಆರ್ಥಿಕತೆಯ ಹೆಚ್ಚಿನ ಭಾಗವು ಅಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಮೇಲೆ ಅವಲಂಬಿತವಾಗಿದೆ. ಬಹುತೇಕ ಜನರಿಗೆ ಭಾರತೀಯ ಮೂಲದ ಕಂಪನಿಗಳು ಉದ್ಯೋಗ ಒದಗಿಸಿವೆ. ಇದೀಗ ಎರಡು ದೇಶಗಳ ನಡುವಿನ ಹದಗೆಟ್ಟ ಸಂಬಂಧಿಂದ ಭಾರತೀಯ ಕಂಪನಿಗಳು ಕೆನಡಾದೊಂದಿಗೆ ವ್ಯವಹಾರ ಸಂಬಂದ ಕಡಿದುಕೊಂಡರೆ ಕೆನಡಾ ದೇಶದ ಆರ್ಥಿಕ ಸ್ಥಿತಿ ಹದಗೆಡುವುದಂತೂ ದಿಟ. ಹೀಗಾಗಿ ಖಲಿಸ್ತಾನಿಗಳ ವೋಟು ಬ್ಯಾಂಕ್‌ಗಾಗಿ ದೇಶದ ಆರ್ಥಿಕತೆ ಬಲಿಕೊಡುತ್ತಿರುವ ಪ್ರಧಾನಿ ಬಗ್ಗೆ ವಿರೋಧ ಪಕ್ಷಗಳೇ ಹರಿಹಾಯ್ದಿವೆ.  

68

ನವಭಾರತ್ ಟೈಮ್ಸ್ ವರದಿಯ ಪ್ರಕಾರ, ಪ್ರತಿ ವರ್ಷ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಕೆನಡಾದ ಆರ್ಥಿಕತೆಗೆ $ 30 ಬಿಲಿಯನ್ ಕೊಡುಗೆ ನೀಡುತ್ತಾರೆ. ಇದರಲ್ಲಿ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಪಾಲನ್ನು ಹೊಂದಿದ್ದಾರೆ.  ಕೆನಡಾದಲ್ಲಿ ಉನ್ನತ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳು ಭಾರಿ ಹಣವನ್ನು ಪಾವತಿಸುತ್ತಾರೆ. ಆದ್ದರಿಂದ, ಭಾರತೀಯ ವಿದ್ಯಾರ್ಥಿಗಳು ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದರೆ ಕೆನಡಾದ ಆರ್ಥಿಕತೆಯು ದೊಡ್ಡ ಹೊಡೆತವನ್ನು ಅನುಭವಿಸುತ್ತದೆ.

78

 TCS, Infosys, Wipro ನಂತಹ 30 ಭಾರತೀಯ ಕಂಪನಿಗಳು ಕೆನಡಾದಲ್ಲಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿವೆ ಮತ್ತು ಈ ಕಂಪನಿಗಳಿಂದಾಗಿ ಕೆನಡಾದ ಹೆಚ್ಚಿನ ಜನಸಂಖ್ಯೆಗೆ ಉದ್ಯೋಗ ಒದಗಿಸಿವೆ. ಪ್ರಸ್ತುತ ಉದ್ವಿಗ್ನತೆ ಉಭಯ ದೇಶಗಳ ನಡುವಿನ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇನ್ವೆಸ್ಟ್ ಇಂಡಿಯಾ ಪ್ರಕಾರ, ಏಪ್ರಿಲ್ 2000 ರಿಂದ ಮಾರ್ಚ್ 2023 ರವರೆಗೆ, ಕೆನಡಾ ಭಾರತದಲ್ಲಿ ಸುಮಾರು $3306 ಮಿಲಿಯನ್ ಹೂಡಿಕೆ ಮಾಡಿದೆ. ಭಾರತವು ಕೆನಡಾದ ಒಂಬತ್ತನೇ ಅತಿದೊಡ್ಡ ವ್ಯಾಪಾರ ಪಾಲುದಾರ. ಆದ್ದರಿಂದ, ಸಂಬಂಧಗಳು ಹದಗೆಟ್ಟರೆ, ಕೆನಡಾ ನಷ್ಟವನ್ನು ಅನುಭವಿಸಬೇಕಾಗುತ್ತದೆ. 

88

ಕೆನಡಾದ ಆರ್ಥಿಕತೆಗೆ ಭಾರತವೇ ಮೂಲವಾಗಿರುವಾಗ ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ಖಲಿಸ್ತಾನ ಉಗ್ರರ ಪರವಾಗಿ ನಿಂತು ತನ್ನ ದೇಶದ ಆರ್ಥಿಕತೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಳ್ಳುವ ಮುಠ್ಠಾಳತನ ಪ್ರದರ್ಶಿಸುತ್ತಿದೆ. ಕೆನಡಾ ಪ್ರಧಾನಿ ವಿರುದ್ಧ ಅಲ್ಲಿನ ವಿರೋಧ ಪಕ್ಷಗಳೇ ತೀವ್ರ ತರಾಟೆಗೆ ತೆಗೆದುಕೊಂಡಿವೆ. ಎರಡು ದೇಶಗಳ ನಡುವಿನ ಸಂಬಂಧ ಹೀಗೆ ಮುಂದುವರಿದರೆ ಕೆನಡಾ ಆರ್ಥಿಕವಾಗಿ ದಿವಾಳಿಯಾಗುವುದಂತೂ ಯಾರಿಂದಲೂ ತಪ್ಪಿಸಲಾಗುವುದಿಲ್ಲ.

click me!

Recommended Stories