ದೂರವಾಣಿ ಮೂಲಕ ಸೌರವ್ ಗಂಗೂಲಿ ಜೊತೆ ಮೋದಿ ಮಾತು; ಶೀಘ್ರ ಚೇತರಿಕೆಗೆ ಹಾರೈಕೆ!

First Published Jan 3, 2021, 9:38 PM IST

ಲಘು ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಆ್ಯಂಜಿಪ್ಲಾಸ್ಟಿ ಸರ್ಜರಿ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಕ್ರಿಕೆಟಿಗರು, ದಿಗ್ಗಜರು ಗಂಗೂಲಿ ಚೇತರಿಕೆಗೆ ಶುಭ ಹಾರೈಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಸೌರವ್ ಗಂಗೂಲಿ ಜೊತೆ ಮಾತನಾಡಿದ್ದಾರೆ. ಮೋದಿ ಹಾಗೂ ಗಂಗೂಲಿ ಮಾತುಕತೆ ವಿವರ ಇಲ್ಲಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಲಘು ಹೃದಯಾಘಾತದಿಂದ ನಿನ್ನೆ(ಜ.02) ಕೋಲ್ಕತಾದ ವುಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಬಳಿಕ ಗಂಗೂಲಿ ಆರೋಗ್ಯ ಚೇತರಿಸಿಕೊಂಡಿದೆ.
undefined
ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ಹಲವು ದಿಗ್ಗಜರು ಸೌರವ್ ಗಂಗೂಲಿ ಅದಷ್ಟು ಬೇಗ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಸೌರವ್ ಗಂಗೂಲಿ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
undefined
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಸೌರವ್ ಗಂಗೂಲಿ ಜೊತೆ, ಮೋದಿ ಫೋನ್ ಮೂಲಕ ಮಾತನಾಡಿದ್ದಾರೆ. ಆರೋಗ್ಯ ಕುರಿತು ಗಂಗೂಲಿಯಿಂದ ಮಾಹಿತಿ ಪಡೆದ ಮೋದಿ ಶೀಘ್ರ ಚೇತರಿಸಿಕೆಗೆ ಹಾರೈಸಿದ್ದಾರೆ.
undefined
ಆಸ್ಪತ್ರೆ ವೈದ್ಯರ ತಂಡ ಸತತ ನಿಗಾ ಇರಿಸಿದೆ. ಸದ್ಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದೇನೆ. ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವುದಾಗಿ ಗಂಗೂಲಿ ಮೋದಿ ಬಳಿ ಹೇಳಿದ್ದಾರೆ.
undefined
ಗಂಗೂಲಿ ಬಳಿಕ ಪತ್ನಿ ಡೋನಾ ಗಂಗೂಲಿ ಜೊತೆಗೂ ಮೋದಿ ಮಾತನಾಡಿದ್ದಾರೆ. ಡೋನಾ ಗಂಗೂಲಿಗೆ ಧೈರ್ಯ ತುಂಬಿದ ಮೋದಿ, ನಾವೆಲ್ಲ ಜೊತೆಗಿದ್ದೇವೆ ಎಂದಿದ್ದಾರೆ.
undefined
ಗಂಗೂಲಿ ಆರೋಗ್ಯ ಕುರಿತು ವುಡ್‌ಲ್ಯಾಂಡ್ ಆಸ್ಪತ್ರೆ ವೈದ್ಯರು ಮಾಹಿತಿ ಬಹಿರಂಗ ಪಡಿಸಿದ್ದಾರೆ. ಗಂಗೂಲಿ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
undefined
49 ವರ್ಷದ ಗಂಗೂಲಿಗೆ ಸರ್ಜರಿ ಉತ್ತಮವಲ್ಲ ಎಂದು ವೈದ್ಯರು ಹೇಳಿದ್ದಾರೆ. ಕಾರಣ ಸಣ್ಣ ವಯಸ್ಸಿನಲ್ಲಿ ಸರ್ಜರಿ ಮಾಡುವುದು ಉತ್ತಮವಲ್ಲ. ಹೀಗಾಗಿ ಗಂಗೂಲಿ ಆರೋಗ್ಯ ಕುರಿತು ತೀವ್ರ ನಿಘಾ ವಹಿಸಲಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.
undefined
ಜನವರಿ 2 ರಂದು ಮನೆಯಲ್ಲಿ ಜಿಮ್ ಅಭ್ಯಾಸ ಮಾಡುತ್ತಿದ್ದ ವೇಳೆ ಗಂಗೂಲಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸುದ್ದಿ ಆತಂಕಕ್ಕೆ ಕಾರಣವಾಗಿತ್ತು
undefined
click me!