ವಾರಂಗಲ್‌ನ ಭದ್ರಕಾಳಿ ಮಂದಿರದಲ್ಲಿ ಪ್ರಧಾನಿ ವಿಶೇಷ ಪೂಜೆ, ಮತ್ತೆ ಮುನ್ನಲೆಗೆ ಬಂತು ಕೊಹಿನೂರ್ ವಜ್ರ!

First Published Jul 8, 2023, 4:28 PM IST

ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ತೆಲಂಗಾಣಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ವಾರಂಗಲ್‌ನಲ್ಲಿರುವ ಪವಿತ್ರ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಗೋ ಮಾತೆಗೆ ಪೂಜೆ ಸಲ್ಲಿಸಿ ಮೇವು ತಿನ್ನಿಸಿದ್ದಾರೆ. ಈ ದೇವಸ್ಥಾನಕ್ಕೂ ಇಂಗ್ಲೆಂಡ್ ರಾಣಿ ಕಿರೀಟ ಮೇಲಿರುವ ಕೊಹಿನೂರ್ ವಜ್ರಕ್ಕೂ ಇದೆ ಸಂಬಂಧ.

ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ತೆಲಂಗಾಣಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ವಾರಂಗಲ್‌ನಲ್ಲಿರುವ ಅತ್ಯಂತ ಐತಿಹಾಸಿಕ ಹಾಗೂ ಪವಿತ್ರ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಪ್ರಧಾನಿ ಮೋದಿಗೆ ನೂತನವಾಗಿ ತೆಲಂಗಾಣ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ ಕಿಶನ್ ರೆಡ್ಡಿ ಹಾಗೂ ಇತರ ಬಿಜೆಪಿ ನಾಯಕರು ಸಾಥ್ ನೀಡಿದರು. ಇದೇ ವೇಳೆ ಪ್ರಧಾನಿ ಮೋದಿಗೆ ಭದ್ರಕಾಳಿ ದೇವಸ್ಥಾನದ ಇತಿಹಾಸ ಹಾಗೂ ದೇವಸ್ಥಾನದ ಆಚರಣೆಗಳ ಕುರಿತು ಮಾಹಿತಿ ನೀಡಲಾಯಿತು.

Latest Videos


ವಾರಂಗಲ್‌ನಲ್ಲಿ ಬರೋಬ್ಬರಿ 6,100 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಮೋದಿ ತೆಲಂಗಾಣಕ್ಕೆ ಆಗಮಿಸಿದ್ದರು. ಬೆಳಗ್ಗೆ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ, ಬಳಿಕ ಹೆಲಿಕಾಪ್ಟರ್ ಮೂಲಕ ವಾರಂಗಲ್‌ಗೆ ತೆರಳಿದರು.  

ಭದ್ರಕಾಳಿ ಮಂದಿರಕ್ಕೆ ತೆರಳಿದ ಮೋದಿ 10 ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ನೆರವೇರಿಸಿ ಮೋದಿಗೆ ಪ್ರಸಾದ ನೀಡಿದ್ದಾರೆ.

ಭದ್ರಕಾಳಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಟನೆಗೆ ತೆರಳಿದರು.ಬಳಿಕ ಪ್ರಧಾನಿ ಮೋದಿ ಗೋ ಮಾತೆಗೂ ಪೂಜೆ ಸಲ್ಲಿಸಿದರು. ಬಳಿಕ ಗೋ ಮಾತೆಗೆ ಮೇವು ತಿನ್ನಿಸಿದರು. ಭದ್ರಕಾಳಿ ದೇವಸ್ಥಾನ ಭೇಟಿ ಬಳಿಕ ಮೋದಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳಿದರು.

ಭದ್ರಕಾಳಿ ದೇವಸ್ಥಾನ ಹನುಮಕೊಂಡ ಹಾಗೂ ವಾರಂಗಲ್ ನಗರದ ನಡುವೆ ಅತ್ಯಂತ ಸುಂದರ ಪ್ರದೇಶದಲ್ಲಿದೆ. ಕ್ರಿ.ಶ. 625ರಲ್ಲಿ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ಇತಿಹಾಸ ಹೇಳುತ್ತಿದೆ.  
 

ರಾಜ ಇಮ್ಮಡಿ ಪುಲಕೇಶಿ ಈ ದೇವಸ್ಥಾನ ಕಟ್ಟಿಸಿದ ಎಂದು ದೇವಸ್ಥಾನದ ಕಲ್ಲುಗಳಲ್ಲಿರುವ ಶಾಸನಗಳು ಹೇಳುತ್ತದೆ. ರಾಜಾ ಕಾಕತೀಯ ಈ ದೇವಸ್ಥಾನವನ್ನು ಮತ್ತಷ್ಟು ಜೀರ್ಣೋದ್ಧಾರ ಮಾಡಿ, ತನ್ನ ಕುಲದೇವತೆ ಎಂದು ಘೋಷಿಸಿದ್ದ.
 

ಬ್ರಿಟಿಷ್ ರಾಣಿ ತೊಡುವ ಕೊಹಿನೂರ್ ವಜ್ರ ಇದೇ ದೇವಸ್ಥಾನದ ಭದ್ರಕಾಳಿ ಮೂರ್ತಿಯಲ್ಲಿದ್ದ ವಜ್ರವಾಗಿದೆ. ಕಾಕತೀಯ ರಾಜವಂಶಸ್ಥ ಈ ಕೊಹಿನೂರ್ ವಜ್ರವನ್ನು ದೇವಸ್ತಾನಕ್ಕೆ ನೀಡಿತ್ತು. 
 

ಅತೀ ಹೆಚ್ಚು ಚಿನ್ನ, ವಜ್ರ, ಬೆಳ್ಳಿಯಿಂದ ತುಂಬಿದ್ದ ಈ ದೇವಸ್ಥಾನದ ಮೇಲೆ ಹಲವು ದಾಳಿಕೋರರು ದಾಳಿ ಮಾಡಿದ್ದಾರೆ. ಇಲ್ಲಿನ ಸಂಪೂರ್ಣ ವಜ್ರಾಭರಣಗಳನ್ನು ದೋಚಿಸಿದ್ದಾರೆ. ಹೀಗೆ ದೋಚಿದ ಆಭರಣಗಳಲ್ಲಿ ಇದೀಗ ಇಂಗ್ಲೆಂಡ್ ರಾಣಿ ತೊಡುವ ಕೊಹಿನೂರ್ ವಜ್ರವೂ ಸೇರಿದೆ.
 

click me!