ಸುದರ್ಶನ ಸೇತು ಉದ್ಘಾಟಿಸಿದ ನಮೋ; ಏನೀ ಕೇಬಲ್ ಸೇತುವೆಯ ವಿಶೇಷತೆ?

Published : Feb 25, 2024, 04:48 PM IST

ಸರಿಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 2.5 ಕಿಮೀ ಕೇಬಲ್ ಸೇತುವೆಯು ಭಾರತದಲ್ಲೇ ಅತಿ ಉದ್ದವಾದ ಈ ನಮೂನೆಯ ಸೇತುವೆಯಾಗಿದೆ.

PREV
110
ಸುದರ್ಶನ ಸೇತು ಉದ್ಘಾಟಿಸಿದ ನಮೋ; ಏನೀ ಕೇಬಲ್ ಸೇತುವೆಯ ವಿಶೇಷತೆ?

ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಓಖಾ ಮುಖ್ಯ ಭೂಭಾಗವನ್ನು ಬೇಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುವ ‘ಸುದರ್ಶನ ಸೇತು’ ಸೇತುವೆಯನ್ನು ಉದ್ಘಾಟಿಸಿದರು.
 

210

ಸರಿಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 2.5 ಕಿಮೀ ಕೇಬಲ್ ಸೇತುವೆಯು ಭಾರತದಲ್ಲೇ ಅತಿ ಉದ್ದವಾದ ಈ ನಮೂನೆಯ ಸೇತುವೆಯಾಗಿದೆ.

310

ಬೇಟ್ ದ್ವಾರಕಾ ಓಖಾ ಬಂದರಿನ ಸಮೀಪವಿರುವ ಒಂದು ದ್ವೀಪವಾಗಿದ್ದು, ಇದು ದ್ವಾರಕಾ ಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಅಲ್ಲಿ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯವಿದೆ. ಬೇಟ್ ದ್ವಾರಕಾದಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಹಗಲಿನಲ್ಲಿ ಮಾತ್ರ ದೋಣಿಯಲ್ಲಿ ಪ್ರಯಾಣಿಸಬಹುದು. 

410

ಆದರೆ ಇನ್ನು ಹೊಸ ಸೇತುವೆಯು ಸದಾ ಸಂಚರಿಸಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ದೇವಾಲಯಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾರೆ ಮತ್ತು ಅಲ್ಲಿನ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.

510

ಸುದರ್ಶನ ಸೇತುವಿನ ಕೆಲವು ಪ್ರಮುಖ ಲಕ್ಷಣಗಳು ಇಲ್ಲಿವೆ..
ನಾಲ್ಕು ಪಥದ 27.20-ಮೀ ಅಗಲದ ಸೇತುವೆಯು ಪ್ರತಿ ಬದಿಯಲ್ಲಿ 2.50-ಮೀ ಅಗಲದ ಕಾಲುದಾರಿಗಳನ್ನು ಹೊಂದಿದೆ.

610

ಸುದರ್ಶನ ಸೇತು ಭಾರತದ ಅತಿ ಉದ್ದದ ಕೇಬಲ್ ಸೇತುವೆಯಾಗಿದ್ದು, ಫುಟ್‌ಪಾತ್‌ನ ಮೇಲಿನ ಭಾಗಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಾಗಿದೆ. ಇದು ಒಂದು ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸುತ್ತದೆ.

710

ಸೇತುವೆಯು ಭಗವದ್ಗೀತೆಯ ಶ್ಲೋಕಗಳು ಮತ್ತು ಭಗವಾನ್ ಕೃಷ್ಣನ ಚಿತ್ರಣಗಳಿಂದ ಅಲಂಕರಿಸಲ್ಪಟ್ಟ ಪಾದಚಾರಿ ಮಾರ್ಗವನ್ನು ಒಳಗೊಂಡಿದೆ.
 

810

ಮೂಲತಃ 'ಸಿಗ್ನೇಚರ್ ಬ್ರಿಡ್ಜ್' ಎಂದು ಕರೆಯಲ್ಪಡುವ ಈ ರಚನೆಯನ್ನು 'ಸುದರ್ಶನ ಸೇತು' ಅಥವಾ ಸುದರ್ಶನ ಸೇತುವೆ ಎಂದು ಮರುನಾಮಕರಣ ಮಾಡಲಾಗಿದೆ.
 

910
Sudarshan Setu

ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 2017ರಲ್ಲಿ ಈ ಸೇತುವೆಗೆ ಅಡಿಪಾಯ ಹಾಕಿದರು. ಸುದರ್ಶನ ಸೇತುವನ್ನು ₹978 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
 

1010

ಓಖಾ- ಬೇಟ್ ದ್ವಾರಕಾ ಸಿಗ್ನೇಚರ್ ಸೇತುವೆಯು ಪ್ರವಾಸಿ ಆಕರ್ಷಣೆಯ ಸ್ಥಳವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಗುಜರಾತ್ ಪ್ರವಾಸಿಗರಿಗೆ ಇದು ಪ್ರಮುಖ ವೀಕ್ಷಣಾ ಸ್ಥಳವಾಗಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories