ಮನ್‌ ಕೀ ಬಾತ್‌ನಲ್ಲಿ ಮೋದಿ ಮುಧೋಳ ಪ್ರಸ್ತಾಪ: ಏನೀ ಶ್ವಾನ ಸ್ಪೆಷಾಲಿಟಿ?

First Published Aug 31, 2020, 5:59 PM IST

68ನೇ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ದೇಸೀ ತಳಿ ನಾಯಿಗಳ ಸಂರಕ್ಷಣೆ ಹಾಗೂ ಸಾಕಲು ಕರೆ ನೀಡಿದರು. ದೇಸೀ ಶ್ವಾನಗಳ ಸಂರಕ್ಷಣೆ, ಪಾಲನೆ-ಪೋಷಣೆ ಕೂಡ ಆತ್ಮನಿರ್ಭರ ಭಾರತದ ಭಾಗ. ಮನೆಯಲ್ಲಿ ನಾಯಿಗಳನ್ನು ಸಾಕಬೇಕು ಎಂದು ಜನರು ಬಯಸಿದರೆ ಮುಧೋಳ ಸೇರಿ ಹಲು ದೇಶಿ ತಳಿ ನಾಯಿಯನ್ನೇ ತರಬೇಕು ಎಂದಿದ್ದಾರೆ. ಅಲ್ಲದೇ ಸೇನೆ ಹಾಗೂ ಇತರ ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಧೋಳ ನಾಯಿಗಳು ಹಾಗೂ ಇತರ ದೇಸೀ ತಳಿಯ ನಾಯಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೀ ಮಧೋಳ ನಾಯಿ? ಏನೀದರ ಸ್ಪೆಷಾಲಿಟಿ? ಇಲ್ಲಿದೆ ನೋಡಿ ಮಾಹಿತಿ.

ಮುಧೋಳ ನಾಯಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಪ್ರದೇಶದ ಮೂಲದವು. ಹದಿನೇಳನೇ ಶತಮಾನದ ಮರಾಠಾ ರಾಜ ಛತ್ರಪತಿ ಶಿವಾಜಿ ಈ ನಾಯಿಗಳನ್ನು ಸಾಕಿ ತನ್ನ ಸೈನ್ಯದಲ್ಲಿ ಬಳಸಿಕೊಂಡಿದ್ದನಂತೆ.
undefined
ರಾಜ್ಯದ ಬಾಗಲಕೋಟೆ ಜಿಲ್ಲೆಯ ಸಣ್ಣ ಪಟ್ಟಣ ಮುಧೋಳ ಎಂಬ ಊರಿನಹೆಸರನ್ನು ಈ ನಾಯಿಪಡೆದುಕೊಂಡಿದೆ. ಈ ತಳಿಯನ್ನು ದೇಶದ್ಯಾಂತವಿವಿಧ ಹೆಸರನಿಂದ ಕರೆಯಲಾಗುತ್ತದೆ.
undefined

Latest Videos


ಬಾಂಬೆ ಪ್ರೆಸಿಡೆನ್ಸಿ ಕೊನೆಯ ರಾಜ, ಮಾಲೋಜಿರಾವ್ ಘೋರ್ಪಾಡೆ, ಯುಕೆಗೆ ಭೇಟಿ ನೀಡಿದಾಗ ಕಿಂಗ್ ಜಾರ್ಜ್ Vಗೆ ಉಡುಗೆರೆಯಾಗಿ ಕೊಟ್ಟಿ ಎರಡು ನಾಯಿಮರಿಗಳಿಗೆ ಮುಧೋಲ್ ಹೌಂಡ್ಸ್ ಎಂದು ನಾಮಕರಣ ಮಾಡಿದ್ದರಂತೆ.
undefined
12-13 ವರ್ಷಗಳಷ್ಷು ಅಯಸ್ಸು ಹೊಂದಿರುವ ಈ ತಳಿಯ ನಾಯಿಗಳು ಭಾರತೀಯ ಹವಾಮಾನಕ್ಕಾಗಿ ಹೇಳಿ ಮಾಡಿಸಿದಂತಿದೆ.
undefined
ಸಣ್ಣ ತಲೆ, ಸಪೂರ ದೇಹ ಹೊಂದಿದ್ದು ಎತ್ತರವಾಗಿರುವುದು ಈ ನಾಯಿಗಳು ವಿಶಿಷ್ಟತೆ.
undefined
ತನ್ನ ಮಾಲೀಕರಿಗೆ ತೀವ್ರ ನಿಷ್ಠ ತೋರಿಸುವ ಮುಧೋಳ ನಾಯಿಗಳು ಮಾಲೀಕ ಅಪಾಯದಲ್ಲಿದ್ದಾನೆ ಎಂದು ಭಾವಿಸಿದರೆ ಅಪರಿಚಿತರ ಮೇಲೆ ದಾಳಿ ಸಹ ಮಾಡಲು ಹಿಂಜರಿಯೋಲ್ಲ.
undefined
ಮುಧೋಳ ಬ್ರೀಡ್‌ ನಾಯಿಗಳಲ್ಲಿ ಕಂಡುಬರುವ ಸಾಮಾನ್ಯ ರೋಗವೆಂದರೆ ಚರ್ಮಕ್ಕೆ ಸಂಬಂಧಿಸಿದ್ದು. ತೆಳು ಚರ್ಮದ ಈ ತಳಿಚಳಿಗೆ ಚಿಲ್‌ ಬೈಟ್‌ಗೆ ಗುರಿಯಾಗುವಂತೆ, ಸುಡು ಬೇಸಿಗೆಯಲ್ಲಿ ಸನ್‌ ಬರ್ನ್‌‌ಗೆ ಸಹ ಗುರಿಯಾಗುಬಹುದು.
undefined
ಏಷ್ಯಾದ ವಿವಿಧ ಭಾಗಗಳ ಅಲೆಮಾರಿ ಜನಾಂಗಗಳ ಜೊತೆ ಕಾಣಿಸಿಕೊಳ್ಳುವ ಈ ನಾಯಿಗಳನ್ನು ಕಾರವಾನ್ ಹೌಂಡ್ಸ್ ಎಂದೂ ಕರೆಯುತ್ತಾರೆ.
undefined
ಕರ್ನಾಟಕದ ಮುಧೋಳ ಮತ್ತು ಸುತ್ತಮುತ್ತಲಿನಪಟ್ಟಣದಲ್ಲಿ ಸುಮಾರು 750 ಕುಟುಂಬಗಳುಮಾರಾಟ ಮಾಡಲು ಈ ತಳಿಯನ್ನು ಬೆಳೆಸುತ್ತಿವೆ.
undefined
surveillance ಮತ್ತು ಬಾರ್ಡರ್‌ ಪ್ರೋಟೆಕ್ಷನ್‌ಗಾಗಿ ಮುಧೋಳ ನಾಯಿಗಳನ್ನು ಬಳಸುವ ಇಚ್ಛೆಯನ್ನು ಭಾರತೀಯ ಸೇನೆ ವ್ಯಕ್ತಪಡಿಸಿದೆ.
undefined
ಮೀರತ್‌ನಲ್ಲಿರುವ ಸೈನ್ಯದ ರಿಮೌಂಟ್ ಪಶುವೈದ್ಯಕೀಯ ದಳದಲ್ಲಿ ಪರೀಕ್ಷೆಗೆ ಆರು ಮುಧೋಳ ನಾಯಿಗಳನ್ನು ಪಡೆದುಕೊಂಡಿದೆ.
undefined
ಕರ್ನಾಟಕದ ಬಾಗಲಕೋಟೆಯ ಮುಧೋಳ ಬಳಿಯ ತಿಮ್ಮಾಪುರದ ಕೇನನ್‌ ರಿಸರ್ಚ್‌ ಆಂಡ್‌ ಇನ್ಫಾರ್ಮೇ‍ಶನ್‌‌ ಸೆಂಟರ್‌ ನಾಯಿಗಳನ್ನು ಆಯ್ಕೆ ಮಾಡಿತ್ತು.
undefined
ಇದೀಗ ಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಈ ನಾಯಿಯ ಪ್ರಸ್ತಾಪ ಮಾಡಿದ ನಂತರ ಮತ್ತೆ ನಮ್ಮ ಕರ್ನಾಟಕದ ವಿಶೇಷ ಶ್ವಾನ ತಳಿ ಸುದ್ದಿಯಲ್ಲಿದೆ.
undefined
click me!