1956ರ ಫೆಬ್ರವರಿ 18ರಂದು, ಅಂದಿನ ಆರೋಗ್ಯ ಸಚಿವೆಯಾಗಿದ್ದ ರಾಜಕುಮಾರಿ ಅಮೃತ್ ಕೌರ್ ಲೋಕಸಭೆಯಲ್ಲಿ ನೂತನ ಮಸೂದೆಯಂದನ್ನು ಪ್ರಸ್ತುತಪಡಿಸಿದರು. ಅಂದು ಅವರು ಭಾಷಣ ಮಾಡಲು ಯಾವುದೇ ತಯಾರಿ ನಡೆಸಿರಲಿಲ್ಲ. ಹೀಗಿದ್ದರೂ ಅವರು ತಮ್ಮ ಹೃದಯ ಅಂತರಾಳದಿಂದ ಮಾತನಾಡುತ್ತಾ ಸ್ನಾತಕೋತ್ತರ ಪದವಿಗಾಗಿ ಹಾಗೂ ಗುಣಮಟ್ಟದ ವೈದ್ಯಕೀಯ ಶಿಕ್ಷಣ ದೇಶದಲ್ಲಿ ಒದಗಿಸುವ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಇಂತಹುದ್ದೊಂದು ಸಂಸ್ಥೆ ಇರಬೇಕು. ಈ ಮೂಲಕ ನಮ್ಮ ದೇಶದ ಯುವಜನರಿಗೆ ನಮ್ಮ ದೇಶದಲ್ಲೇ ವೈದ್ಯಕೀಯ ಶಿಕ್ಷಣ ಸಿಗುವಂತಾಗಬೇಕು ಎಂಬುವುದು ನನ್ನ ಕನಸಾಗಿದೆ ಎಂದಿದ್ದರು.