ಪ್ರಧಾನ ಮಂತ್ರಿ ಅವಾಸ್ ಯೋಜನೆ ಬಗ್ಗೆ ಎಲ್ಲರಿಗೂ ತಿಳಿದಿರುವ ಸಾಧ್ಯತೆ ಇದೆ. ಬಡವರಿಗೆ ಸೂರು ಒದಗಿಸುವ ಯೋಜನೆ ಇದಾಗಿದೆ. ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರ ಮನೆ ಕಲ್ಪಿಸಲಿದೆ. ಇದೀಗ ಅವಾಸ್ ಯೋಜನೆಯಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಆವಾಸ್ ಯೋಜನೆಯಲ್ಲಿ ಮನೆ ಕಟ್ಟಲು ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ. ಈ ಮೂಲಕ ಸ್ವಂತ ಮನೆ ಕಟ್ಟುವ ಕನಸು ನನಸು ಮಾಡಲು ಮೋದಿ ಸರ್ಕಾರ ಆರ್ಥಿಕ ನೆರವು ನೀಡಲಿದೆ.
ಹೊಸ ಯೋಜನೆ ಪ್ರಕಾರ, ಪ್ರಧಾನಿ ಮೋದಿ ಸರ್ಕಾರ ಅವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಿದೆ. ನಿಮ್ಮ ಮನೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ನಿಮ್ಮ ಸ್ವಂತ ಮನೆ ಕಟ್ಟಲು ಸರ್ಕಾರದಿಂದ 2.5 ಲಕ್ಷ ರೂ.ಗಳ ಸಹಾಯ ಧನ ನೀಡಲಾಗುತ್ತದೆ. ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಈ ಮೂಲಕ ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಬಹುದು.
ಈ ಹಿಂದೆ ಈ ಯೋಜನೆಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು, ಆದರೆ ಈಗ ಆವಾಸ್ ಯೋಜನೆಗಾಗಿ ಒಂದು ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಲು ಸಾಧ್ಯವಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿ ಅಡೆ ತಡೆ ಇಲ್ಲದೆ ಅರ್ಜಿ ಸಲ್ಲಿಕೆ ಮಾಡಬಹುದು.
ಈ ಅಪ್ಲಿಕೇಶನ್‌ನ ಹೆಸರು ಆವಾಸ್ ಪ್ಲಸ್ 2024. ಪ್ಲೇ ಸ್ಟೋರ್‌ನಿಂದ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಡೌನ್ಲೋಡ್ ಮಾಡುವ ಮುನ್ನ ಸರ್ಕಾರಿ ಅದಿಕೃತ ಆ್ಯಪ್ಲಿಕೇಶನ್ ಪರಿಶೀಲನೆ ಮಾಡಿಕೊಳ್ಳಿ. ನಕಲಿ ಆ್ಯಪ್ಲೀಕೇಶನ್ ಡೌನ್ಲೋಡ್ ಮಾಡಿಕೊಂಡು ಮೋಸ ಹೋಗಬೇಡಿ.
ಈ ಅಪ್ಲಿಕೇಶನ್ ಮೂಲಕ ಈ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು.ಆವಾಸ್ ಯೋಜನೆಯಲ್ಲಿ ಹಣ ಪಡೆಯಲು ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಿ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನೀವು ಈ ಯೋಜನೆಗೆ ಅರ್ಹರೇ ಎಂದು ತಿಳಿಸುತ್ತಾರೆ.ಆರಂಭದಲ್ಲಿ ಮಾಸಿಕ ಆದಾಯ 10,000 ರೂ.ಗಿಂತ ಕಡಿಮೆ ಇರುವವರು ಈ ಯೋಜನೆಗೆ ಅರ್ಹರು ಎಂದು ನಿರ್ಧರಿಸಲಾಗಿತ್ತು. ಇದೀಗ 15,000 ರೂ.ವರೆಗಿನ ಮಾಸಿಕ ಆದಾಯ ಇರುವವರನ್ನು ಈ ಯೋಜನೆಗೆ ಅರ್ಹರೆಂದು ಪರಿಗಣಿಸಲಾಗುತ್ತದೆ.
ಮನೆ ಕನಸು ನನಸು ಮಾಡಲು ಅವಾಸ್ ಪ್ಲಸ್ ಯೋಜನೆ ಮೂಲಕ ಸಾಧ್ಯವಿದೆ. ನಿಮ್ಮ ಸ್ವಂತ ಮನೆಗೆ ಕೇಂದ್ರ ಸರ್ಕಾರ ಅವಾಸ್ ಪ್ಲಸ್ ಯೋಜನೆ ಮೂಲಕ ಆರ್ಥಿಕ ಸಹಾಯ ಮಾಡಲಿದೆ. ಇಷ್ಟೇ ನಿಮ್ಮ ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದ ಹಣ ನೆರವಾಗಲಿದೆ. ಹೀಗಾಗಿ ಅರ್ಹರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.