ಹವಾಯಿಯ ಅಲೋಹಾ ಏರ್‌ಲೈನ್ಸ್‌ನ ಫ್ಲೈಟ್ 243ರ ಛಾವಣಿ 24,000 ಅಡಿ ಎತ್ತರದಲ್ಲಿ ಹಾರಿಹೋಗಿತ್ತು. 89 ಪ್ರಯಾಣಿಕರ ಪ್ರಾಣ ಅಪಾಯದಲ್ಲಿತ್ತು. ಪೈಲಟ್‌ನ ಸಮಯಪ್ರಜ್ಞೆಯಿಂದ ಎಲ್ಲರೂ ಬದುಕುಳಿದಿದ್ದರು.
ಹಲವರಿಗೆ ವಿಮಾನ ಪ್ರಯಾಣ ತುಂಬಾ ರೋಮಾಂಚನಕಾರಿ. ಆಕಾಶದಲ್ಲಿ ಹಾರಲು ಅವರಿಗೆ ತುಂಬಾ ಇಷ್ಟ. ಹಾಗಾಗಿ ಪ್ರತಿ ವಿಮಾನಯಾನ ಆನಂದಿಸುತ್ತಾರೆ.
213
ಜನರಿಗೆ ವಿಮಾನದ ಮೇಲೆ ಭರವಸೆ ಇದ್ದರೂ, ನೀವು 24,000 ಅಡಿ ಎತ್ತರದಲ್ಲಿದ್ದಾಗ ನಿಮ್ಮ ವಿಮಾನದ ಛಾವಣಿ ಹಾರಿಹೋದರೆ ಏನಾಗುತ್ತದೆ ಎಂದು ಯೋಚಿಸಿ? ಅಷ್ಟು ಎತ್ತರದಲ್ಲಿದ್ದಾಗ ವಿಮಾನದ ಛಾವಣಿ ಹಾರಿ ಹೋಗಿದೆ ಎಂಬುದನ್ನು ಊಹಿಸಿಕೊಳ್ಳಲು ಸಹ ಭಯವಾಗುತ್ತದೆ.
313
ನೀವು ಊಹಿಸಲು ಸಾಧ್ಯವಿಲ್ಲ! ಆದರೆ ಇದು ಕಥೆಯಲ್ಲ, ನಿಜಕ್ಕೂ ಇಂಥದ್ದೊಂದು ಘಟನೆ ನಡೆದಿದೆ. ಹೌದು, ವಿಮಾನದ ಮೇಲ್ಛಾವಣಿ 24 ಸಾವಿರ ಅಡಿ ಎತ್ತರದಲ್ಲಿದ್ದಾಗ ಹಾರಿ ಹೋಗಿತ್ತು.
413
ಚಲಿಸುತ್ತಿದ್ದ ವಿಮಾನದಿಂದ ಛಾವಣಿ ಹಾರಿಹೋದಾಗ
ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಏಪ್ರಿಲ್ 28, 1988ರಂದು, ಹವಾಯಿಯ ಹಿಲೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊನೊಲುಲುಗೆ ಹೊರಟಿದ್ದ ಅಲೋಹಾ ಏರ್‌ಲೈನ್ಸ್‌ನ ಫ್ಲೈಟ್ 243, ಜಗತ್ತನ್ನೇ ಬೆಚ್ಚಿಬೀಳಿಸುವ ಘಟನೆಗೆ ಸಾಕ್ಷಿಯಾಗಿತ್ತು.
513
24,000 ಅಡಿ ಎತ್ತರದಲ್ಲಿ ವಿಮಾನದ ಛಾವಣಿಯ ದೊಡ್ಡ ಭಾಗ ಹಾರಿಹೋಯಿತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಘಟನೆ ತುಂಬಾ ಭಯಾನಕ ಮತ್ತು ನಂಬಲಾಗದಂತಿತ್ತು. ಆದ್ರೆ ಈ ರೀತಿಯ ಘಟನೆಯೊಂದು ನಡೆದಿತ್ತು.
613
ವಿಮಾನದಲ್ಲಿದ್ದ 89 ಜನರ ಪ್ರಾಣ ಅಪಾಯದಲ್ಲಿತ್ತು, ಆದರೆ ಪೈಲಟ್ ಮತ್ತು ಸಿಬ್ಬಂದಿಯ ಧೈರ್ಯ ಮತ್ತು ಕ್ಷಿಪ್ರ ನಿರ್ಧಾರ ಈ ದುರಂತದಲ್ಲಿ ಅನೇಕ ಜನರನ್ನು ಬದುಕಿಸಿತು. ಇಷ್ಟು ದೊಡ್ಡ ದುರಂತ ಸಂಭವಿಸಿದರೂ ಪ್ರಯಾಣಿಕರು ಬದುಕುಳಿದಿದ್ದರು.
713
ಚಲಿಸುತ್ತಿದ್ದ ವಿಮಾನದ ಛಾವಣಿ ಹೇಗೆ ಹಾರಿಹೋಯಿತು?
ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪೈಲಟ್ ಬಲವಾದ ಶಬ್ದ ಕೇಳಿದೆ. ನಂತರ ವಿಮಾನ ಕಂಪಿಸಲು ಪ್ರಾರಂಭಿಸಿತು.
813
ಸ್ವಲ್ಪ ಸಮಯದಲ್ಲೇ ವಿಮಾನದ ಛಾವಣಿಯ ದೊಡ್ಡ ಭಾಗ ಸಿಡಿದು ಗಾಳಿಯಲ್ಲಿ ಹಾರಿಹೋಯಿತು. ಕ್ಯಾಬಿನ್‌ನಲ್ಲಿ ಒತ್ತಡ ಇಳಿಯಿತು ಮತ್ತು ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಳಿಯಲ್ಲಿ ತೇಲಾಡಲು ಪ್ರಾರಂಭಿಸಿದರು.
913
ಆ ಸಮಯದಲ್ಲಿ, ಪೈಲಟ್ ರಾಬರ್ಟ್ ಶೋರ್ನ್‌ಸ್ಟೈಮರ್ ಈ ಕಠಿಣ ಪರಿಸ್ಥಿತಿಯಲ್ಲಿಯೂ ತಮ್ಮ ಸ್ಥಿತಪ್ರಜ್ಞೆ ಕಳೆದುಕೊಳ್ಳಲಿಲ್ಲ. ತಕ್ಷಣ ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವನ್ನು ತಿರುಗಿಸಿದರು.
1013
ಪ್ರಯಾಣಿಕರನ್ನು ಶಾಂತಗೊಳಿಸಲು ಮತ್ತು ಅವರನ್ನು ಸುರಕ್ಷಿತವಾಗಿರಿಸಲು ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದರು. ವಿಮಾನಯಾನದ ಸಿಬ್ಬಂದಿ ಎಲ್ಲರಿಗೂ ಧೈರ್ಯವಾಗಿರುವಂತೆ ಹೇಳಿದ್ದರು.
1113
ವಿಮಾನಯಾನ ಸಂಸ್ಥೆಯ ಸಿಬ್ಬಂದಿ, ಪ್ರಯಾಣಿಕರಿಗೆ ಆಮ್ಲಜನಕ ಮಾಸ್ಕ್ ಧರಿಸಲು ಮತ್ತು ಸೀಟ್ ಬೆಲ್ಟ್ ಕಟ್ಟಿಕೊಳ್ಳಲು ಹೇಳಿದರು. ವಿಮಾನದ ಛಾವಣಿ ಹಾರಿಹೋದರೂ, ವಿಮಾನದ ಉಳಿದ ಭಾಗ ಸುರಕ್ಷಿತವಾಗಿತ್ತು.
1213
ಇದರಿಂದ ವಿಮಾನ ಗಾಳಿಯಲ್ಲಿ ಒಡೆಯುವುದನ್ನು ತಪ್ಪಿಸಿ ಪೈಲಟ್‌ಗೆ ತುರ್ತು ಲ್ಯಾಂಡಿಂಗ್ ಮಾಡಲು ಅವಕಾಶ ಸಿಕ್ಕಿತು. ಹಾಗಾಗಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
1313
ಅದೇ ಸಮಯದಲ್ಲಿ, ಪ್ರಯಾಣಿಕರು ಶಾಂತವಾಗಿದ್ದರು ಮತ್ತು ಈ ಕಠಿಣ ಸಮಯದಲ್ಲಿ ಪೈಲಟ್ ಮತ್ತು ಸಿಬ್ಬಂದಿಗೆ ಸಂಪೂರ್ಣ ಬೆಂಬಲ ನೀಡಿದರು. ಅಂತಿಮವಾಗಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯ್ತು.