ಸುಲಭ, ಕೈಗೆಟುಕುವ ಏಕೈಕ ಸಾರಿಗೆ ಭಾರತೀಯ ರೈಲ್ವೆ. ಪ್ರತಿದಿನ ರೈಲಿನಲ್ಲಿ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ಈಗಾಗಲೇ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿರುವ ರೈಲ್ವೆ, ಬುಕ್ ಮಾಡಿದ ಟಿಕೆಟ್‌ಗಳನ್ನು ರದ್ದುಗೊಳಿಸದೆಯೇ ಬೇರೆ ದಿನಾಂಕಕ್ಕೆ ಬದಲಾಯಿಸುವ ಆಯ್ಕೆಯನ್ನು ಸಹ ನೀಡುತ್ತದೆ. ಅನೇಕ ಪ್ರಯಾಣಿಕರಿಗೆ ಇದರ ಬಗ್ಗೆ ತಿಳಿದಿಲ್ಲ. ಹೀಗಾಗಿ ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸುತ್ತಾರೆ, ಬಳಿಕ ಹೊಸದಾಗಿ ಟಿಕೆಟ್ ಬುಕ್ ಮಾಡುತ್ತಾರೆ.
ಬಹುತೇಕರು ಪ್ರಯಾಣಕ್ಕಾಗಿ ಮೊದಲೇ ಪ್ಲಾನ್ ಮಾಡಿ ಟಿಕೆಟ್ ಬುಕ್ ಮಾಡುತ್ತಾರೆ. ಆದರೆ ಪ್ರಯಾಣ ದಿನಾಂಕ ಸಮೀಪಿಸುತ್ತಿದ್ದಂತೆ ಅನಿರೀಕ್ಷಿತ ಕಾರಣಗಳು, ತುರ್ತು ಅಗತ್ಯತೆಗಳಿಂದ ಪ್ರಯಾಣ ದಿನಾಂಕ ಮುಂದೂಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ವೇಳೆ ಟಿಕೆಟ್ ರದ್ದುಗೊಳಿಸಿ ಮತ್ತೊಂದು ದಿನಾಂಕಕ್ಕೆ ಟಿಕೆಟ್ ಬುಕ್ ಮಾಡುವ ಬದಲು, ಈಗಾಗಲೇ ಬುಕ್ ಮಾಡಿರುವ ರೈಲು ಪ್ರಯಾಣ ದಿನಾಂಕ ಮುಂದೂಡಲು ಸಾಧ್ಯವಿದೆ.
ಟಿಕೆಟ್ ದಿನಾಂಕ ಬದಲಾವಣೆ
ರೈಲು ಹೊರಡುವ ಕನಿಷ್ಠ48 ಗಂಟೆಗಳ ಮೊದಲು ಪ್ರಯಾಣ ದಿನಾಂಕ ಬದಲಾಯಿಸಲು ಸಾಧ್ಯವಿದೆ. ಬುಕಿಂಗ್ ಖಚಿತಗೊಂಡ ಟಿಕೆಟ್ ಮುಂಗಡ ಬುಕಿಂಗ್ ಕೌಂಟರ್‌ನಲ್ಲಿ ಸಲ್ಲಿಸಿ. ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದರೂ ಸಹ, ನೀವು ಪ್ರತಿಯೊಂದಿಗೆ ಕೌಂಟರ್‌ಗೆ ಭೇಟಿ ನೀಡಬೇಕು. ಕೌಂಟರ್‌ನಲ್ಲಿ ಕೆಲ ಪ್ರಕ್ರಿಯೆ ಪೂರ್ಣಗೊಳಿಸದರೆ ಸುಲಭವಾಗಿ ರಿಶೆಡ್ಯೂಲ್ ಆಗಲಿದೆ.
ಟಿಕೆಟ್ ಮರುನಿಗದಿ
ಸರ್ಕಾರಿ ನೌಕರರು ಹೊರಡುವ 24 ಗಂಟೆಗಳ ಮೊದಲು ತಮ್ಮ ಪ್ರಯಾಣದ ದಿನಾಂಕವನ್ನು ಬದಲಾಯಿಸಬಹುದು ಎಂದು ವರದಿಯಾಗಿದೆ. ಆದಾಗ್ಯೂ, ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದರೂ ಸಹ, ಈ ಬದಲಾವಣೆಯನ್ನು ನೇರವಾಗಿ ರೈಲು ನಿಲ್ದಾಣದಲ್ಲಿರುವ ಟಿಕೆಟ್ ಕೌಂಟರ್‌ಗಳಿಗೆ ಭೇಟಿ ನೀಡುವ ಮೂಲಕ ಮಾತ್ರ ಮಾಡಬಹುದು.
ಟಿಕೆಟ್ ರೀಶೆಡ್ಯೂಲ್ ಮಾಡುವಾಗ ನೀವು ಬುಕ್ ಮಾಡಿದ್ದಕ್ಕಿಂತ ಹೆಚ್ಚಿನ ದರ್ಜೆಯ ಟಿಕೆಟ್ ಅನ್ನು ನೀವು ಆರಿಸಿದರೆ, ದರದಲ್ಲಿ ಬದಲಾವಣೆಯಾಗುತ್ತದೆ. ಸಮಯ ಹಾಗೂ ರೈಲಿನ ಬದಲಾವಣೆಯಿಂದ ದರದಲ್ಲೂ ಕೆಲ ವ್ಯತ್ಯಾಸಗಳಾಗುವ ಸಾಧ್ಯತೆ ಇದೆ. ಆದರೆ ಕ್ಯಾನ್ಸಲ್ ಮಾಡಿ ಮತ್ತೊಂದು ಟಿಕೆಟ್ ಬುಕ್ ಮಾಡಿ ಹಣ ಕಳೆದಕೊಳ್ಳುವ ಬದಲು ರಿ ಶೆಡ್ಯೂಲ್ ಮಾಡಿದರೆ ಆರ್ಥಿಕ ನಷ್ಟ ತಪ್ಪಿಸಲು ಸಾಧ್ಯವಿದೆ