ಕೃಷಿ ಕಾಯ್ದೆ ವಿರುದ್ಧ ಅನ್ನದಾತನ ಸಮರ, ರಾಷ್ಟ್ರ ರಾಜಧಾನಿ ತಲುಪಲು ಇಷ್ಟೆಲ್ಲಾ ಸಂಕಷ್ಟ!
First Published | Nov 26, 2020, 2:28 PM ISTಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೀರ್ಘ ಕಾಲದಿಂದ ಪ್ರತಿಭಟನೆ ನಡೆಸುತ್ತಲೇ ಬಂದಿರುವ ಪಂಜಾಬ್‌ನ ರೈತರು 26ರಿಂದ 28ವರೆಗೆ ದೆಹಲಿಯಲ್ಲಿ ಕೇಂದ್ರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಲು ತಯಾರಿ ನಡೆಸಿದ್ದಾರೆ. ಆದರೀಗ ಅವರನ್ನು ಹರ್ಯಾಣದಲ್ಲೇ ತಡೆ ಹಿಡಿಯಲಾಗಿದೆ. ಹೀಗಿರುವಾಗ ರೈತರು ಹಾಗೂ ಪೊಲೀಸರ ನಡುವೆ ಸಂಘರ್ಷಷ ನಡೆದಿದೆ. ಅತ್ತ ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತು ನದಿಗೆಸೆದಿದ್ದಾರೆ. ಹೀಗಿರುವಾಗ ಪೊಲೀಸರು ರೈತರ ಮೇಲೆ ಅಶ್ರುವಾಯು ಪ್ರಯೋಗ, ತಣ್ಣೀರು ಹಾಗೂ ಲಾಠಿಚಾರ್ಜ್ ಪ್ರಯೋಗಿಸಿದ್ದಾರೆ. ಇಲ್ಲಿದೆ ನೋಡಿ ರೈತರನ್ನು ತಡೆಯಲು ಪೊಲೀಸರು ಹೆಣೆದಿರುವ ಜಾಲ.