ಏ ಮಿಸ್ಟರ್ ನನ್ನಪ್ಪ ಮಿನಿಸ್ಟರ್: ಹೆಲ್ಮೆಟ್ ಇಲ್ಲ ದಂಡ ಕಟ್ಟಿ ಅಂದ್ರೆ ನಡು ರಸ್ತೆಯಲ್ಲೇ ಕುಳಿತ್ಲು!
First Published | Nov 26, 2020, 12:41 PM ISTಟ್ರಾಫಿಕ್ ಪೊಲೀಸ್ ಚೆಕ್ಕಿಂಗ್ ವೇಳೆ ಸಾಮಾನ್ಯವಾಗಿ ಚಿತ್ರ ವಿಚಿತ್ರ ಪ್ರಕರಣಗಳನ್ನೆದುರಿಸುತ್ತಾರೆ. ಕೆಲವರು ಭಾವನಾತ್ಮಕವಾಗಿ ಮಾತನಾಡುತ್ತಾ ದಂಡದಿಂದ ಪಾರಾಗಲು ಯತ್ನಿಸಿದರೆ, ಇನ್ನು ಕೆಲವರು ಧಮ್ಕು ಹಾಕಿ ಪರಾರಿಯಾಗುತ್ತಾರೆ. ಇಲ್ಲೂ ನಡೆದದ್ದು ಇಂತಹುದೇ ಪ್ರಕರಣ. ಇಲ್ಲಿ ನಡುರಸ್ತೆಯಲ್ಲಿ ಧರಣಿ ನಡೆಸುತ್ತಿರುವುದುಸಅ ಬೇರಾರೂ ಅಲ್ಲ, ಝಾರ್ಖಂಡ್ ಸಾರಿಗೆ ಸಚಿವ ಚಂಪೈ ಸೊರೇನ್ ಮಗಳು ದುಖನಿ ಸೊರೇನ್. ಆದರೆ ಇವರು ಅದ್ಯಾವುದೋ ಸಮಸ್ಯೆಯನ್ನಿಟ್ಟುಕೊಂಡು ಧರಣಿ ನಡೆಸುತ್ತಿಲ್ಲ, ಬದಲಾಗಿ ಟ್ರಾಫಿಕ್ ಪೊಲೀಸ್ ಒಬ್ಬ ಮಿನಿಸ್ಟರ್ ಮಗಳನ್ನು ನಿಲ್ಲಿಸಿ ಹೆಲ್ಮೆಟ್ ಇಲ್ಲಮ್ಮ ದಂಡ ಕಟ್ಟು ಎಂದಿದ್ದಕ್ಕೆ ಕೋಪ ಬಂದು ಹೀಗ್ಮಾಡಿದ್ದಾಳೆ. ಇದಾದ ಬಳಿಕ ಟ್ರಾಫಿಕ್ ಪೊಪಲೀಸ್ ಮಾತ್ರ ಯಾಕೆ ಬೇಕು ಉಸಾಬರಿ ಎಂದು ಹೋಗಲು ಬಿಟ್ಟಿದ್ದಾರೆ. ಆದರೀಗ ಮಂತ್ರಿ ಮಾತ್ರ ಪೊಲೀಸರು ತನ್ನ ಮಗಳೊಂದಿಗೆ ಕೆಟ್ಟದದಾಗಿ ವ್ಯವಹರಿಸಿದರು ಎಂದು ದೂರಿ ಈ ವಿಚಾರವನ್ನು ಮುಖ್ಯಮಂತ್ರಿವರೆಗೆ ಕೊಂಡೊಯ್ದಿದ್ದಾರೆ.