ಫೀವ್ ರಿಸರ್ಚ್ ಸೆಂಟರ್ (Pew Research Center) ಜಗತ್ತಿನಲ್ಲಿ ಮುಸ್ಲಿಂ ಜನಸಂಖ್ಯೆ ಬೆಳೆಯುತ್ತಿರುವ ಬಗ್ಗೆ ವರದಿ ನೀಡಿದೆ. ಇದರ ಪ್ರಕಾರ ಇಂದು ವಿಶ್ವದ ಜನಸಂಖ್ಯೆಯ ಶೇ. 25 ರಷ್ಟು ಮುಸ್ಲಿಂ ಜನಸಂಖ್ಯೆ ಆಗಿದ್ದರೆ, ಉಳಿದವು ಇತರ ಧರ್ಮದ ಜನಸಂಖ್ಯೆ ಇದೆ ಎಂದು ತಿಳಿಸಿದೆ.
1800ರಲ್ಲಿ ಇಡೀ ವಿಶ್ವದಲ್ಲಿ 100 ಕೋಟಿ ಜನಸಂಖ್ಯೆ ಇದ್ದರೆ, ಇದರಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು ಶೇ. 9.1 ರಷ್ಟು ಆಗಿತ್ತು. ಅಂದರೆ, 9.1 ಕೋಟಿ ಮಂದಿ ಮುಸ್ಲಿಂ ಆಗಿದ್ದರು.
ಇದಾದ 100 ವರ್ಷಗಳ ಬಳಿಕ ಅಂದರೆ 1900ರಲ್ಲಿ ಜಗತ್ತಿನಲ್ಲಿ ಇಸ್ಲಾಂ ಪಾಲನೆ ಮಾಡುವವರ ಸಂಖ್ಯೆ 20 ಕೋಟಿ ಆಗಿದ್ದರೆ ಆಗಿದ್ದರೆ, ಇಡೀ ವಿಶ್ವದ ಜನಸಂಖ್ಯೆ 165 ಕೋಟಿ ಆಗಿತ್ತು. ಅಂದರೆ, ವಿಶ್ವದ ಜನಸಂಖ್ಯೆಯಲ್ಲಿ ಶೇ. 12.1ರಷ್ಟು ಮಂದಿ ಮುಸ್ಲಿಂ ಆಗಿದ್ದರು.
ಅದಾದ 70 ವರ್ಷಗಳ ಬಳಿಕ ಅಂದರೆ 1970ರಲ್ಲಿ ವಿಶ್ವದ ಜನಸಂಖ್ಯೆ 370 ಕೋಟಿ ಆಗಿದ್ದರೆ, ಆಗಿದ್ದರೆ, ಮುಸ್ಲಿಮರ ಜನಸಂಖ್ಯೆ 57.7 ಕೋಟಿ ಆಗಿತ್ತು. ಅಂದರೆ, ವಿಶ್ವದ ಜನಸಂಖ್ಯೆಯ ಶೇ. 15.6 ಮಂದಿ ಮುಸ್ಲಿಮರಾಗಿದ್ದರು.
ಆ ನಂತರ 30 ವರ್ಷಗಳ ಬಳಿಕ ಬಂದ ರಿಪೋರ್ಟ್‌ನಲ್ಲಿ ವಿಶ್ವದ ಜನಸಂಖ್ಯೆ 600 ಕೋಟಿ ಆಗಿತ್ತು. ಇದರಲ್ಲಿ 129 ಕೋಟಿ ಮಂದಿ ಮುಸ್ಲಿಮರಾಗಿದ್ದರು. ಅಂದರೆ, ಇಡೀ ವಿಶ್ವದ ಶೇ. 21.5 ರಷ್ಟು ಮಂದಿ ಮುಸ್ಲಿಮರಾಗಿದ್ದರು.
ಅದಾಗಿ 13 ವರ್ಷಗಳ ಬಳಿಕ ಬಂದ ವರದಿಯಲ್ಲಿ ಅಂದರೆ 2013ರಲ್ಲಿ ವಿಶ್ವದಲ್ಲಿ 163 ಕೋಟಿ ಮುಸ್ಲಿಮರಿದ್ದರು. ಇಡೀ ವಿಶ್ವದಲ್ಲಿ 710 ಕೋಟಿ ಜನಸಂಖ್ಯೆ ಇತ್ತು. ಅಂದರೆ, ಇಡೀ ವಿಶ್ವದ ಶೇ. 22.9 ರಷ್ಟು ಮಂದಿ ಮುಸ್ಲಿಮರಾಗಿದ್ದರು.
ಆ ನಂತರದ ಮೂರೇ ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆ ವಿಶ್ವದಲ್ಲಿ 17 ಕೋಟಿ ಹೆಚ್ಚಾಯಿತು. 2016ರಲ್ಲಿ ಇಡೀ ವಿಶ್ವದ ಜನಸಂಖ್ಯೆ 740 ಕೋಟಿಯಾಗಿತ್ತು. 2013ಕ್ಕೂ 2016ಕ್ಕೂ ಹೋಲಿಸಿದರೆ, 30 ಕೋಟಿ ಜನಸಂಖ್ಯೆ ಏರಿಯಾಗಿತ್ತು. ಇದರಲ್ಲಿ 17 ಕೋಟಿ ಮಂದಿ ಮುಸ್ಲಿಮರೇ ಆಗಿದ್ದರು. 2013ರಲ್ಲಿ ಮುಸ್ಲಿಂ ಜನಸಂಖ್ಯೆ 163 ಕೋಟಿ ಆಗಿದ್ದರೆ, 2016ರಲ್ಲಿ 180 ಕೋಟಿ ಆಗಿತ್ತು.
2024ರಲ್ಲಿ ಅಂದರೆ, ಈ ವರ್ಷದಲ್ಲಿ ವಿಶ್ವದ ಜನಸಂಖ್ಯೆ 8.2 ಬಿಲಿಯನ್ ಅಂದರೆ 820 ಕೋಟಿ ಎಂದು ಹೇಳಲಾಗಿದೆ. ಇದರಲ್ಲಿ ಮುಸ್ಲಿಂ ಜನಸಂಖ್ಯೆಯೇ ಅಂದಾಜು 2 ಬಿಲಿಯನ್ ಅಂದರೆ 200 ಕೋಟಿ ಎನ್ನಲಾಗಿದೆ. ಒಟ್ಟಾರೆ ವಿಶ್ವದ ಜನಸಂಖ್ಯೆ ಶೇ. 24.4ರಷ್ಟು ಮುಸ್ಲಿಂ ಜನಸಂಖ್ಯೆ ಇದೆ.