ರಾಂಚಿಯಲ್ಲಿ ಇಟಲಿಯಂತಹ ಪರಿಸ್ಥಿತಿ: ಸ್ಮಶಾನದಲ್ಲಿ ಜಾಗವಿಲ್ಲ, ರಸ್ತೆಯಲ್ಲೇ ಚಿತೆ!

Published : Apr 12, 2021, 04:31 PM IST

ದೇಶಾದ್ಯಂತ ಕೊರೋನಾ ಮಹಾಮಾರಿ ಮತ್ತೊಮ್ಮೆ ಅಟ್ಟಹಾಸ ಬೀರುತ್ತಿದ್ದು, ಸದ್ಯದ ಪರಿಸ್ಥಿತಿ ಮೊದಲನೇ ಅಲೆಗಿಂತಲೂ ಗಂಭೀರವಾಗಿದೆ. ಮಹಾಮಾರಿಯ ಎರಡನೇ ಅಲೆ ಅನೇಕ ಜೀವಗಳನ್ನು ಬಲಿ ಪಡೆಯುತ್ತಿದೆ. ಹೀಗಿರುವಾಗ ಝಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಭಾನುವಾರ ಇಟಲಿಯಂತಹ ಪರಿಸ್ಥಿತಿ ಕಂಡು ಬಂದಿದೆ. ಇಲ್ಲಿ ಎಲ್ಲಾ ಸ್ಮಶಾನ ಹಾಗೂ ರುದ್ಧಭೂಮಿ ಶವಗಳಿಂದ ಭರ್ತಿಯಾಗಿದ್ದು, ಅಂತಿಮ ಸಂಸ್ಕಾರ ನೆರವೇರಿಸಲು ಬಂದ ಜನರಿಗೆ ತಮ್ಮ ಪ್ರೀತಿ ಪಾತ್ರರನ್ನು ಸುಡಲೂ ಮುಕ್ತಿಧಾಮದಲ್ಲಿ ಸ್ಥಳ ಸಿಗಲಿಲ್ಲ. ಹಲವಾರು ತಾಸು ಕಾದ ಬಳಿಕ ಬೇರೆ ವಿಧಿ ಇಲ್ಲದೇ, ಶವದೊಂದಿಗೆ ಮರಳಿದ್ದಾರೆ. ಇದಾದ ಬಳಿಕ ಕಂಡು ಬಂದ ದರಶ್ದಯವೊಂದು ಬಹಳ ಭಯಾನಕವಾಗಿತ್ತು. ಹೌದು ಕೆಲ ಮಂದಿ ರಸ್ತೆಯಲ್ಲೇ ಚಿತೆ ನಿರ್ಮಿಸಿ ಶವ ಸುಡಲಾರಂಭಿಸಿದ್ದಾರೆ.

PREV
14
ರಾಂಚಿಯಲ್ಲಿ ಇಟಲಿಯಂತಹ ಪರಿಸ್ಥಿತಿ: ಸ್ಮಶಾನದಲ್ಲಿ ಜಾಗವಿಲ್ಲ, ರಸ್ತೆಯಲ್ಲೇ ಚಿತೆ!

ಹೌದು ಭಾನುವಾರ ರಾಂಚಿಯಲ್ಲಿ ಅರವತ್ತು ಶವಗಳ ಅಂತಿಮ ಸಂಸ್ಕಾರ ನೆರವೇರಿದೆ. ನಗರದ ವಿವಿಧ ಚಿತಾಗಾರದಲ್ಲಿ ಈ ಸಂತಿಮ ಸಂಸ್ಕಾರ ನೆರವೇರಿದೆ. ಹೀಗಿದ್ದರೂ ಸ್ಥಳದ ಅಭಾವ ಕಂಡು ಬಂದಿದೆ.ಇನ್ನು ಹನ್ನೆರಡು ಕೊರೋನಾ ಸೋಂಕಿತರ ಶವವಾಗಿದ್ದು, ಇವುಗಳನ್ನು ಗಾಗ್ರಾದಲ್ಲಿ ಸಾಮೂಹಿಕ ಚಿತೆ ಮೂಲಕ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ. ಇನ್ನು ಮೂವತ್ತೈದು ಶವಗಳನ್ನು ಐದು ರುದ್ರಭೂಮಿಯಲ್ಲಿ ಸುಡಲಾಗಿದೆ. ಇನ್ನು ಹದಿಮೂರು ಶವಗಳನ್ನು ಸ್ಮಶಾನದಲ್ಲಿ ಧಫನ್ ಮಾಡಲಾಗಿದೆ. ಇನ್ನೂ ಅತೀ ಹೆಚ್ಚು ಅಂತಿಮ ಸಂಸ್ಕಾರ ಹರಮೂ ಮುಕ್ತಿಧಾಮದಲ್ಲಿ ನೆರವೇರಿದೆ.

24

ಇನ್ನು ಕೆಲವರಿಗೆ ಸ್ಮಶಾನ ಹಾಗೂ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಜಾಗ ಸಿಗದಾಗ ಅವರು ಮುಕ್ತಿಧಾಮದ ಎದುರಿಗಿದ್ದ ರಸ್ತೆಯಲ್ಲೇ, ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಚಿತೆ ನಿರ್ಮಿಸಿ ಶವ ಸಂಸ್ಕಾರ ನೆರವೇರಿಸಿದ್ದಾರೆ. ಯಾಕೆಂದರೆ ಮೃತರ ಸಂಖ್ಯೆ ಎಷ್ಟು ಹೆಚ್ಚಿತ್ತೆಂದರೆ ರುದ್ರಭೂಮಿಯಲ್ಲಿ ಸುಡಲು ಸ್ಥಳವಿರಲಿಲ್ಲ.

34

ಹರಮೂ ರುದ್ರಭೂಮಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಶವಗಳ ಅಂತಿಮ ಸಂಸ್ಕಾರ ನಡೆಸುವ ರಾಜು ರಾಮು ಈ ಬಗ್ಗೆ ಮಾತನಾಡುತ್ತಾ ನಾನು ಇಂತಹ ಭಯಾನಕ ಸನ್ನಿವೇಶ  ನನ್ನ ಜೀವನದಲ್ಲಿ ಕಂಡಿಲ್ಲ ಎಂದಿದ್ದಾರೆ. ಜನರು ತಮ್ಮ ಆಪ್ತರ ಅಂತ್ಯ ಸಂಸ್ಕಾರ ನೆರವೇರಿಸಲು ಗೋಳಾಡುತ್ತಿದ್ದಾರೆ. ಬೂದಿ ಕೊಳ್ಳಲು ಜನರು ಸಾಲು ಸಾಲಾಗಿ ನಿಂತಿದ್ದರು. ಕೆಲ ಶವಗಳನ್ನು ರಸ್ತೆಯಲ್ಲೇ ಇಟ್ಟಿದ್ದರು. ಜನರು ವಾಹನಗಳನ್ನು ನಿಲ್ಲಿಸುವಲ್ಲೂ ಶವಗಳನ್ನಿಟ್ಟಿದ್ದರು ಎಂದಿದ್ದಾರೆ.
 
44

ನಗರದ ಜನ ನಗರ ಪಾಲಿಕೆ ಹಾಗೂ ಸರ್ಕಾರದ ಅವ್ಯವಸ್ಥೆ ಬಗ್ಗೆ ಕೋಪಗೊಂಡಿದ್ದಾರೆ. ಮೊದಲು ಆಸ್ಪತ್ರೆಗಳಲ್ಲಿ ಬೆಡ್‌ ಇಲ್ಲದೇ ಪರದಾಟ, ಈಗ ಅಂತ್ಯಸಂಸ್ಕಾರ ನಡೆಸಲು ಸಾಲಿನಲ್ಲಿ ನಿಲ್ಲಬೇಕಾಗುತ್ತದೆ ಎಂದು ಊಹಿಸಿರಲಿಲ್ಲ. ಮುಕ್ತಿಧಾಮಕ್ಕೆ ತಲುಪಿದಾಗ ಅಲ್ಲಿ ವಿದ್ಯುತ್ ಚಿತಾಗಾರ ಮಷೀನ್ ಹಾಳಾಗಿದೆ ಎಂದು ತಿಳಿದು ಕಾಯಬೇಕಾಯ್ತು. ಅನೇಕ ಮಂದಿ ಸಾಲಿನಲ್ಲಿ ನಿಂತಿದ್ದರು. ಇಂತಹ ಸಂದರ್ಭದಲ್ಲಿ ಜನ ಬೇರಾವುದಾದರೂ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ. 

click me!

Recommended Stories