ಭಾರತದಲ್ಲಿ ಹೊಸ ಡಬಲ್ ರೂಪಾಂತರಿ ವೈರಸ್ ಪತ್ತೆ; ಅಪಾಯದ ಪ್ರಮಾಣ ಮತ್ತಷ್ಟು ಹೆಚ್ಚು!

First Published Apr 11, 2021, 5:23 PM IST

ಕೊರೋನಾ 2ನೇ ಅಲೆಗೆ  ಭಾರತ ಹೈರಾಣಾಗಿದೆ. ಇದುವರೆಗೆ ದಾಖಲಾಗದ ಗರಿಷ್ಠ ಪ್ರಮಾಣದ ಕೊರೋನಾ ಪ್ರಕರಣಗಳು ವರದಿಯಾಗುತ್ತಿದೆ. ಇದರ ನಡುವೆ ಭಾರತದಲ್ಲಿ ಹೊಸ ರೂಪಾಂತರಿ ವೈರಸ್ ಪ್ರಕರಣ ಪತ್ತೆಯಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಖಚಿತಪಡಿಸಿದ್ದು, ಈ ವೈರಸ್ ಬ್ರೆಜಿಲ್, ಸೌತ್ ಆಫ್ರಿಕಾ, ಯುಕೆ ವೈರಸ್‌ಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೊರೋನಾ ವೈರಸ್ 2ನೇ ಅಲೆಯ ಭೀಕರತೆ ಇದೀಗ ದೇಶದ ಬಹುತೇಕ ರಾಜ್ಯಗಳಿಗೆ ವಿಸ್ತರಿಸಿದೆ. ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಕೆಲ ರಾಜ್ಯದಳಲ್ಲಿ ಹೆಚ್ಚಾಗಿದ್ದ ಪ್ರಕರಣಗಳು ಇದೀಗ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಗರಿಷ್ಠ ಪ್ರಕರಣ ವರದಿಯಾಗುತ್ತಿದೆ.
undefined
ಈ ಆತಂಕ ನಡವೆ ಇದೀಗ ಭಾರತದಲ್ಲಿ ಹೊಸ ಡಬಲ್ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇದು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
undefined
ಬ್ರಿಜಿಲ್, ಸೌತ್ ಆಫ್ರಿಕಾ, ಯುಕೆಯಲ್ಲಿ ಕಾಣಿಸಿಕೊಂಡ ರೂಪಾಂತರಿ ವೈರಸ್‌ಗಿಂತ ಭಾರತದಲ್ಲಿ ಕಾಣಿಸಿಕೊಂಡ ಡಬಲ್ ಮ್ಯೂಟೇಶನ್ ವೈರಸ್ ಪರಿಣಾಮಕಾರಿಯಾಗಿದೆ ಎಂದು ಇಲಾಖೆ ಹೇಳಿದೆ.
undefined
ಎರಡು ರೂಪಾಂತರಗಳನ್ನು ಹೊಂದಿರುವ ಹೊಸ ವೈರಸ್ ತಳಿ ದೇಹದದಲ್ಲಿನ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸಬಲ್ಲ ಸಾಮರ್ಥ್ಯ ಹೊಂದಿದೆ.
undefined
ಈ ಡಬಲ್ ಮ್ಯೂಟೇಶನ್ ವೈರಸ್ ಅತೀ ವೇಗದಲ್ಲಿ ಹರಡುತ್ತಿದೆ. ಇದರಿಂದ ಅಪಾಯ ಹೆಚ್ಚು. ಹೀಗಾಗಿ ಮೊದಲ ಕೊರೋನಾ ಅಲೆಗಿಂತ 2ನೇ ಅಲೆ ಹೆಚ್ಚು ಭೀಕರವಾಗಿದೆ.
undefined
ಮಹಾರಾಷ್ಟ್ರದಲ್ಲಿ ಮಾಡಲಾಗಿರುವ ಕೊರೋನಾ ವೈರಸ್ ಮಾದರಿ ಪರೀಕ್ಷೆಯಲ್ಲಿ ಡಬಲ್ ಮ್ಯೂಟೇಶನ್ ವೈರಸ್ ಹೆಚ್ಚಾಗಿ ಪತ್ತೆಯಾಗಿದೆ. ದೇಶದ ಸೋಂಕಿತರ 15ರಿಂದ 20 ಶೇಕಡಾ ಮಂದಿಯಲ್ಲಿ ಈ ಡಬಲ್ ಮ್ಯೂಟೇಶನ್ ವೈರಸ್ ಕಾಣಿಸಿಕೊಂಡಿದೆ.
undefined
ಡಬಲ್ ಮ್ಯೂಟೇಶನ್ ವೈರಸ್ ಕುರಿತು ಅಧ್ಯಯನ ನಡೆಯುತ್ತಿದೆ. ಆದರೆ ಸದ್ಯ ಕೊರೋನಾ ಮಾರ್ಗಸೂಚಿ ಪಾಲನೆ ಅತೀ ಅಗತ್ಯವಾಗಿದೆ. ಈ ಮೂಲಕ ಕೊರೋನಾ 2ನೇ ಅಲೆ ಹಾಗೂ ಡಬಲ್ ಮ್ಯೂಟೇಶನ್ ವೈರಸ್ ತಡೆಯಬೇಕಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
undefined
click me!