ಈ ಘಟನೆ ಶುಕ್ರವಾರ ನಡೆದಿದ್ದೆನ್ನಲಾಗಿದೆ. ಆದರೀಗ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಾಧ ಬಳಿಕ ಶಿವರಾಜ್ ಸರ್ಕಾರ ಭಾರೀ ವಿವಾದಕ್ಕೀಡಾಗಿದೆ. ಇದಾದ ಬಳಿಕ ಸಿಎಂ ನಿರ್ದೇಶನದಂತೆ ಆರೋಪಿಗಳನ್ನು ಪದಚ್ಯುತಿಗೊಳಿಸಲಾಗಿದೆ. ನಡೆದಾಡಲೂ ಆಗದವರನ್ನು ನಿರ್ದಯಿಗಳಂತೆ ರಸ್ತೆಗೆಸೆದಿರುವ ಅಧಿಕಾರಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇಂಧೋರ್ ನಗರದ ಹೊರಗ, ಇಂಧೋರ್-ದೇವಾಸ್ ಹೈವೇ ಬಳಿ ನಗರ ಪಾಲಿಕೆಯ ಕಸದ ಗಾಡಿಯಲ್ಲಿ ಕೆಲ ಅನಾಥ ಹಾಗೂ ನಿರ್ಗತಿಕ ವೃದ್ಧರನ್ನು ಕರೆತಂದಿದೆ. ವೃದ್ಧರು ದಯವಿಟ್ಟು ನಮ್ಮನ್ನು ಇಲ್ಲಿ ಬಿಟ್ಟು ಬಿಡಬೇಡಿ, ಚಳಿಯಿಂದ ಸಾಯುತ್ತೇವೆಂದು ಬೇಡಿಕೊಂಡರೂ ಕೇಳದೆ ಕಸವೆಸೆದಂತೆ ಗಾಡಿಯಿಂದ ಹೊರಗೆ ದೂಡಿದ್ದಾರೆ. ಈ ಘಟನೆ ಕಂಡು ಅಲ್ಲಿನ ಸ್ಥಳೀಯರ ಮನ ಕರಗಿದೆ. ವೃದ್ಧರ ಬಳಿ ತೆರಳಿ ಅಧಿಕಾರಿಗಗಳ ಈ ವರ್ತನೆಗೇನು ಕಾರಣ ಎಂದು ಪ್ರಶ್ನಿಸಿದ್ದಾರೆ. ಆದರೆ ವೃದ್ಧರಿಗೆ ಏನು ಹೇಳುವುದೆಂದೇ ತೋಚದಾಗಿದೆ. ಅಧಿಕಾರಿಗಳ ಈ ನಡೆಯಿಂದ ಆಕ್ರೋಶಿತರಾದ ಸ್ಥಳೀಯರು ಇದೆಲ್ಲವನ್ನೂ ತಮ್ಮ ಫೋನ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಫೋಟೊ ಹಾಗೂ ವಿಡಿಯೋ ಸೆರೆ ಹಿಡಿಯುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ವೃದ್ಧರನ್ನು ಮತ್ತೆ ಗಾಡಿಗೇರಿಸಿ ಕರೆದೊಯ್ದಿದ್ದಾರೆ.
ಇಲ್ಲಿ ಮೈಕೊರೆಯುವ ಚಳಿ ಮಧ್ಯೆಯೂ ನಿರ್ಗತಿಕರು ಹಾಗೂ ಅನಾಥರು ರಸ್ತೆ ಬದಿಯಲ್ಲೇ ದಿನ ಕಳೆಯುವಂತಾಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚುತ್ತಿದ್ದಂತೆಯೇ ಅಲ್ಲಿ ಮಲಗಲು ಧಾವಿಸುತ್ತಾರೆ.
ಇನ್ನು ಘಟನೆ ಮಾಹಿತಿ ಲಭಿಸುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ನಗರ ಪಾಲಿಕೆ ವೃದ್ಧರನ್ನು ನಡೆಸಿಕೊಂಡ ಬಗ್ಗೆ ನನಗೆ ವರದಿ ಲಭಭಿಸಿದೆ. ಹೀಗಾಗಿ ವೃದ್ಧರನ್ನು ಹೀನಾಯವಾಗಿ ನಡೆಸಿಕೊಂಡವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಪದಚ್ಯುತಿಗೊಳಿಸಲಾಗಿದೆ. ಅಲ್ಲದೇ ಸಂತ್ರಸ್ತರ ಆರೈಕೆ ಮಾಡುವಂತೆ ಸೂಚಿಸಿದ್ದೇನೆ ಎಂದಿದ್ದಾರೆ. ವೃದ್ಧರ ವಿರುದ್ಧ ಇಂತಹ ನಡೆ ಸರ್ಕಾರ ಯಾವತ್ತಿಗೂ ಸಹಿಸಲ್ಲ ಎಂದಿದ್ದಾರೆ. ಪ್ರತಿಯೊಬಬ್ಬ ಹಿರಿ ಜೀವಕ್ಕೂ ಗೌರವ ಸಿಗಬೇಕು. ಇದೇ ನಮ್ಮ ಸಂಸ್ಕೃತಿ ಎಂದೂ ಸಿಎಂ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪಾಲಿಕೆ ಆಯುಕ್ತೆ ಪ್ರತಿಭಾ ಈ ಬಗ್ಗೆ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಅತ್ತ ಕಾಂಗ್ರೆಸ್ ಕೂಡಾ ಈ ಘಟನೆಯನ್ನು ಕಂಡಿಸಿfದೆ.