ಮಾನ, ಮರ್ಯಾದೆ ಮರೆತ ಬಿಜೆಪಿ ನಾಯಕ: ವೇದಿಕೆಯಲ್ಲಿ ಮಹಿಳೆ ಜೊತೆ ಅಶ್ಲೀಲ ವರ್ತನೆ!
First Published | Jan 28, 2021, 5:12 PM ISTರಾಜಕೀಯ ಹಾಗೂ ಗ್ಲಾಮರ್ ಜಗತ್ತಿನ ನಡುವಿನ ನಂಟು ಬಹಳ ಆಳವಾಗಿರುತ್ತದೆ. ರಾಜಕೀಯ ಪಕ್ಷದ ನಾಯಕರೆಂದರೆ ಸಮಾಜದಲ್ಲೂ ಒಳ್ಳೆಯ ಹೆಸರಿರುತ್ತದೆ. ಇನ್ನು ಬಿಜೆಪಿ ಪಕ್ಷ ಸಾಮಾನ್ಯವಾಗಿ ಸಂಸ್ಕೃತಿ ಬಗ್ಗೆ ಮಾತನಾಡುತ್ತದೆ. ಆದರೀಗ ಅದೇ ಪಕ್ಷದ ನಾಯಕನ ಅಶ್ಲೀಲ ವರ್ತನೆಯ ವಿಡಿಯೋ ಒಂದು ವೈರಲ್ ಆಗಿದ್ದು, ಪಕ್ಷಕ್ಕೆ ತೀವ್ರ ಮುಜುಗರವುಂಟು ಮಾಡಿದೆ. ಇದನ್ನು ನೋಡಿದ ಬಹುತೇಕ ಮಂದಿ ಪಕ್ಷದ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ. ಬಿಜೆಪಿಯ ಗ್ರಾಮೀಣ ಮಂಡಲ ಅಧ್ಯಕ್ಷ ಕೈಲಾಶ್ ಗುರ್ಜರ್ ಮಹಿಳೆಯೊಬ್ಬಳೊಂದಿಗೆ ವೇದಿಕೆಯಲ್ಲೇ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ