ಪ್ರತಿಭಟನಾ ನಿರತ ರೈತರಿಂದ ತಲ್ವಾರ್ ದಾಳಿ; ಒರ್ವ ಪೊಲೀಸ್ ಗಂಭೀರ!

First Published Jan 29, 2021, 6:04 PM IST

ಕಳೆದೆರಡು ತಿಂಗಳಿನಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆ ಟ್ರಾಕ್ಟರ್ ರ್ಯಾಲಿಯಿಂದ ಹಿಂಸಾ ರೂಪ ಪಡೆದುಕೊಂಡಿದೆ. ಸತತವಾಗಿ ಪೋಲೀಸರ ಮೇಲೆ ದಾಳಿ ಮಾಡುತ್ತಿದ್ದಾರೆ. ಇದೀಗ ಸಿಂಘು ಗಡಿಯಲ್ಲಿ ಪೊಲೀಸರ ಮೇಲೆ ರೈತರು ತಲ್ವಾರ್‌ನಿಂದ ದಾಳಿ ಮಾಡಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

ದೆಹಲಿ ಗಡಿ ಭಾಗದಲ್ಲಿ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಇದೀ ಸಿಂಘು, ಗಾಝಿಪುರ್ ಸೇರಿದಂತೆ ಟಿಕ್ರಿ ಗಡಿಗಳಲ್ಲಿ ರೈತರ ಪ್ರತಿಭಟನೆ ಹಿಂಸಾ ರೂಪ ಪಡೆದಿದೆ.
undefined
ಗಡಿಯಿಂದ ಹಿಂದೆ ಸರಿಯಲು ರೈತರು ಹಿಂದೇಟು ಹಾಕಿದ್ದಾರೆ. ರೈತರ ಪ್ರತಿಭಟನೆ ಉಗ್ರಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ನಿಯಂತ್ರಿಸಲು ಪೊಲೀಸರು ಮುಂದಾಗಿದ್ದಾರೆ.
undefined

Latest Videos


ಆಕ್ರೋಶಗೊಂಡಿರುವ ರೈತನೋರ್ವ ಖಡ್ಗದಿಂದ ಪೊಲೀಸರ ಮೇಲೆ ಹಿಗ್ಗಾ ಮುಗ್ಗ ದಾಳಿ ನಡೆಸಿದ್ದಾನೆ. ಈ ವೇಳೆ ತಲ್ವಾರ್ ಏಟಿನಿಂದ ಓರ್ವ ಪೊಲೀಸ್ ಗಂಭೀರ ಗಾಯಗೊಂಡಿದ್ದಾರೆ
undefined
ಪೊಲೀಸರ ಮೇಲೆ ಕಲ್ಲು ತೂರಟ ಮಾಡಲಾಗಿದೆ. ಜನವರಿ 26 ರಂದು ದೆಹಲಿಯಲ್ಲಿ ಟ್ರಾಕ್ಟರ್ ರ್ಯಾಲಿಯಲ್ಲಿ ಪೊಲೀಸರ ಮೇಲೆ ಇದೇ ರೀತಿ ದಾಳಿ ನಡೆದಿತ್ತು.
undefined
ತಲ್ವಾರ್ ಹಿಡಿದ ರೈತರ ಗುಂಪು ಪೊಲೀಸರ ಮೇಲೆ ದಾಳಿ ಮಾಡಿದ್ದಲ್ಲದೇ, ಸ್ಥಳೀಯರ ಮೇಲೂ ದಾಳಿಗೆ ಮುಂದಾಗಿದೆ. ಇತ್ತ ಪೊಲೀಸರು ಸುತ್ತುವರೆದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
undefined
ಜನವರಿ 26 ರಂದು ರೈತರ ಟ್ರಾಕ್ಟರ್ ರ್ಯಾಲಿ ಹಿಂಸಾ ರೂಪ ಪಡೆದಿತ್ತು. ಈ ರ್ಯಾಲಿಯಲ್ಲಿ 300ಕ್ಕೂ ಹೆಚ್ಚಿನ ಪೊಲೀಸರು ಗಾಯಗೊಂಡಿದ್ದರು.
undefined
ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದ ರೈತ ಸಂಘಟನೆಗಳು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ, ಸಿಖ್ ಧ್ವಜ ಹಾರಿಸಿದ್ದಾರೆ. ಇಷ್ಟೇ ಅಲ್ಲ ಕೆಂಪು ಕೋಟೆಯೊಳಗೆ ಎಲ್ಲಾ ವಸ್ತುಗಳನ್ನು ಪುಡಿ ಪುಡಿ ಮಾಡಿದ್ದರು.
undefined
ಸಾರಿಗೆ ವಾಹನಗಳು, ಪೊಲೀಸ್ ವಾಹನಗಳನ್ನು ಜಖಂ ಗೊಳಿಸಿದ್ದರು. ಟ್ರಾಕ್ಟರ್ ಮೂಲಕ ಪುಂಡಾಟ ನಡೆಸಿದ್ದರೆ, ಇತ್ತ ಜೇಸಿಬಿ, ಕ್ರೇನ್ ಮೂಲಕ ರಸ್ತೆಗೆ ಹಾಕಿದ್ದ ತಡೆಯನ್ನು ತೆರುವುಗೊಳಿಸಿದ್ದರು.
undefined
click me!