ವಿವಾದದ ಬೆನ್ನಲ್ಲೇ ಗರ್ಭಿಣಿ ನುಸ್ರತ್ ಜಹಾಂ ಫೋಟೋ ವೈರಲ್!

Published : Jun 12, 2021, 04:55 PM IST

ಟಿಎಂಸಿ ಸಂಸದೆ ಹಾಗೂ ನಟಿ ನುಸ್ರತ್ ಜಹಾಂ ಸದ್ಯ ತಮ್ಮ ಪ್ರೆಗ್ನೆನ್ಸಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಗರ್ಭಿಣಿಯಾಗಿರುವ ಅವರು ಶೀಘ್ರದಲ್ಲೇ ತಾಯಿಯಾಗಲಿದ್ದಾರೆನ್ನಲಾಗಿದೆ. ಹೀಗಿದ್ದರೂ ಈ ವಿಚಾರವಾಗಿ ನುಸ್ರತ್ ಅಥವಾ ಅವರ ಕುಟುಂಬ ಯಾವುದೇ ಹೇಳಿಕೆ ನೀಡಿಲ್ಲ. ಸದ್ಯ ನುಸ್ರತ್‌ರವರ ಫೋಟೋ ಒಂದು ಬಹಿರಂಗಗೊಂಡಿದ್ದು, ಎಲ್ಲರನ್ನೂ ಅಚ್ಚರಗೀಡು ಮಾಡಿದೆ. ಈ ಫೋಟೋದಲ್ಲಿ ನುಸ್ರತ್ ಬೇಬಿ ಬಂಪ್ ಫ್ಲಾಂಟ್ ಮಾಡುತ್ತಿರುವ ದೃಶ್ಯವಿದೆ. ಹೀಗಾಗಿ ಅವರು ಗರ್ಭಿಣಿ ಎಂಬ ವಿಚಾರ ನಿಜ ಎಂದು ಸಾಬೀತಾಗಿದೆ. ನುಸ್ರತ್ ಜೊತೆ ಬಂಗಾಳಿ ನಟಿ ಶ್ರವಂತಿ ಚಟರ್ಜಿ ಕೂಡಾ ಇದ್ದಾರೆ. ಇಷ್ಟೆಲ್ಲಾ ಆದರೂ ನುಸ್ರತ್ ಗಂಡ ನಿಖಿಲ್ ಜೈನ್ ಮಾತ್ರ ಈ ಮಗು ತನ್ನದಲ್ಲ, ನಾವಿಬ್ಬರೂ ಆರು ತಿಂಗಳಿನಿಂದ ದೂರ ಇದ್ದೇವೆ ಎಂದಿದ್ದಾರೆ.  

PREV
18
ವಿವಾದದ ಬೆನ್ನಲ್ಲೇ ಗರ್ಭಿಣಿ ನುಸ್ರತ್ ಜಹಾಂ ಫೋಟೋ ವೈರಲ್!

ತಮ್ಮ ಮದುವೆ ಬಗ್ಗೆ ಮಾತನಾಡಿಕೊಂಡಿರುವ ನುಸ್ರತ್ ವಿದೇಶೀ ನೆಲದಲ್ಲಿದ್ದ ಕಾರಣ, ಹಾಗೂ ಟರ್ಕಿ ಮ್ಯಾರೇಜ್ ರೆಗ್ಯುಲೇಷನ್ ಅನ್ವಯ ಈ ಮದುವೆ ಮಾನ್ಯವಲ್ಲ. ಅಲ್ಲದೇ ಇದೊಂದು ಅಪೂರ್ಣ(ಎರಡು ವಿಭಿನ್ನ ಧರ್ಮದವರ ನಡುವೆ ನಡೆದ) ಮದುವೆ. ಹೀಗಾಗಿ ಇದಕ್ಕೆ  ಭಾರತದಲ್ಲಿ ಶಾಸನಬದ್ಧ ಮಾನ್ಯತೆ ನೀಡಬೇಕಾದ ಅಗತ್ಯವಿತ್ತು. ಆದರೆ ಹಾಗಾಗಲಿಲ್ಲ ಎಂದಿದ್ದಾರೆ.
 
28

ನುಸ್ರತ್ ಅನ್ವಯ ಕಾನೂನಾತ್ಮಕವಾಗಿ ಈ ಮದುವೆ ಮಾನ್ಯವಲ್ಲ. ಇದನ್ನು ಕೇವಲ ರಿಲೇಷನ್‌ಶಿಪ್‌ ಅಥವಾ ಲಿವ್‌ ಇನ್‌ ರಿಲೇಷನ್‌ಶಿಪ್ ಎನ್ನಬಹುದು. ಹೀಗಾಗಿ ಡೈವೋರ್ಸ್‌ ಪ್ರಶ್ನೆಯೇ ಉದ್ಭವಿಸಲ್ಲ. ನಾವು ತುಂಬಾ ಸಮಯದ ಹಿಂದೆಯೇ ಪ್ರತ್ಯೇಕವಾಗಿದ್ದೇವೆ. ನಾನು ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ ಯಾಕೆಂದರೆ ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳುವುದಿಲ್ಲ. ನಮ್ಮ ಸೋ ಕಾಲ್ಡ್ ಮದುವೆ ಕಾನೂನಿನ ಪ್ರಕಾರ ಮಾನ್ಯವಲ್ಲ ಎಂದಿದ್ದಾರೆ.

38

ಅತ್ತ ನಿಖಿಲ್ ಕೂಡಾ ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ನುಸ್ರತ್ ಮಾಡಿರುವ ಆರೋಪಗಳ ಬಗ್ಗೆ ಸ್ಟೇಟ್ಮೆಂಟ್ ಜಾರಿ ಮಾಡಿದ್ದಾರೆ. ಪ್ರೀತಿ ಇರಲಿಲ್ಲ. ಆದ್ರೂ ನುಸ್ರತ್‌ಗೆ ನಾನು ಮದುವೆಯಾಗುವಂತೆ ಪ್ರೊಪೋಸ್‌ ಮಾಡಿದಾಗ ಖುಷಿಯಿಂದ ಒಪ್ಪಿಕೊಂಡಿದ್ದರು. ನಾವು ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಟರ್ಕಿಗೆ ತೆರಳಿದೆವು. 2019 ರಲ್ಲಿ ಮದುವೆಯಾದೆವು, ಬಳಿಕ ಕೋಲ್ಕತ್ತಾದಲ್ಲಿ ರಿಸೆಪ್ಶನ್ ನಡೆಯಿತು ಎಂದಿದ್ದಾರೆ.
 
48

ನಾವಿಬ್ಬರೂ ಗಂಡ ಹೆಂಡತಿಯಂತೆ ವಾಸಿಸುತ್ತಿದ್ದೆವು. ಸಮಾಜಕ್ಕೂ ಹೀಗೇ ಪರಿಚಯಿಸಿಕೊಂಡೆವು. ನಾನು ನನ್ನಿಡೀ ಸಮಯವನ್ನು, ಎಲ್ಲಾ ಕರ್ತವ್ಯವನ್ನು ಗಂಡನಂತೆ ನಿಭಾಯಿಸಿದೆ. ಗೆಳೆಯರು, ಕುಟುಂಬಸ್ಥರು ಹಾಗೂ ಆತ್ಮೀಯರೆಲ್ಲರೂ ನಾನು ನುಸ್ರತ್‌ಗಾಗಿ ಏನೆಲ್ಲಾ ಮಾಡಿದ್ದೇನೆ ಎಂದು ಬಲ್ಲರು. ಯಾವೊಂದು ಷರತ್ತು ಹಾಕದೇ ನುಸ್ರತ್‌ಗೆ ಸಪೋರ್ಟ್‌ ಮಾಡಿದ್ದೇನೆ. ಆದರೆ ಮದುವೆಯಾದ ಕೆಲ ಸಮಯದಲ್ಲೇ ನುಸ್ರತ್ ಬದಲಾಗತೊಡಗಿದರು.
 
58

ನಾವಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾಗ ಹಲವಾರು ಬಾರಿ ಮದುವೆ ನೋಂದಾವಣೆ ಮಾಡಿಕೊಳ್ಳೋಣ ಎಂದು ಹೇಳಿದ್ದೆ, ಆದರೆ ಪ್ರತಿ ಬಾರಿಯೂ ನುಸ್ರತ್ ಈ ವಿಚಾರ ತಳ್ಳಿ ಹಾಕುತ್ತಿದ್ದರು. 2020ರ ನವೆಂಬರ್ 5 ರಂದು ನುಸ್ರತ್ ತನ್ನ ಬಟ್ಟೆಬರೆ ಪ್ಯಾಕ್ ಮಾಡಿ ತನ್ನದೇ ಆದ ಫ್ಲ್ಯಾಟ್‌ಗೆ ತೆರಳಿದಳು. ಅಂದಿನಿಂದ ನಾವಿಬ್ಬರೂ ಒಟ್ಟಿಗೆ ಇಲ್ಲ. ಆಕೆ ತನ್ನೆಲ್ಲಾ ಅಗತ್ಯ ಪತ್ರಗಳನ್ನು ಕೊಂಡೊಯ್ದಿದ್ದಾಳೆ ಎಂದಿದ್ದಾರೆ.
 
68

ಮಾಧ್ಯಮಗಳಲ್ಲಿ ಕಂಡು ಬರುತ್ತಿರುವ ವರದಿಗಳನ್ನು ಕಂಡು ಬಹಳ ದುಃಖವಾಗಿದೆ. ವರದಿಗಳನ್ನು ನೊಡಿದ್ರೆ ನಾನೇ ನುಸ್ರತ್‌ಗೆ ಮೋಸ ಮಾಡಿದಂತಿದೆ. ಮಾರ್ಚ್ ಎಂಟರಂದು ನಾನು ನುಸ್ರತ್ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದುಉ, ಈ ಮದುವೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದೇನೆ ಎಂದು ನಿಖಿಲ್ ಹೇಳಿದ್ದಾರೆ.

78

ಅತ್ತ ನುಸ್ರತ್ ತಮ್ಮೆಲ್ಲಾ ಮದುವೆ ಫೋಟೋಗಳನ್ನು ಇನ್ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದಾರೆ. ಅಲ್ಲದೇ ಈ ಎಲ್ಲಾ ವಿವಾದಗಳ ಮಧ್ಯೆ ತಮ್ಮ ಸುಂದರವಾದ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ನನ್ನ ಬಾಯಿ ಮುಚ್ಚಿಕೊಂಡಿರುವ ಮಹಿಳೆಯನ್ನಾಗಿ ಜನರು ನನ್ನನ್ನು ನೆನಪಿಟ್ಟುಕೊಳ್ಳುವುದು ನನಗಿಷ್ಟವಿಲ್ಲ. ನಾಣು ಹೀಗೇ ಖುಷಿಯಾಗಿದ್ದೇನೆ ಎಂದು ಬರೆದಿದ್ದಾರೆ.

88

ಮಾಧ್ಯಮಗಳ ವರದಿಯನ್ವಯ ನುಸ್ರತ್ ಕಳೆದ ಕೆಲ ಸಮಯದಿಂದ ಎಸ್‌ಒಎಸ್‌ ಕೋಲ್ಕತ್ತಾ ಸಿನಿಮಾದಲ್ಲಿ ತನ್ನ ಸಹ ನಟನಾಗಿದ್ದ ಯಶ್‌ ದಾಸ್‌ ಗುಪ್ತಾ ಜೊತೆ ರಿಲೇಚಷನ್‌ಶಿಪ್‌ನಲ್ಲಿದ್ದಾರೆನ್ನಲಾಗಿದೆ. ಇಬ್ಬರೂ ಕೆಲ ತಿಂಗಳ ಹಿಂದೆ ರಾಜಸ್ಥಾನಕ್ಕೆ ಟ್ರಿಪ್ ಕೂಡಾ ಹೋಗಿದ್ದರು. ಈ ವಿಚಾರವಾಗಿ ಯಶ್ ಹಾಗೂ ನುಸ್ರತ್ ಇಬ್ಬರೂ ಪ್ರತಿಕ್ರಿಯೆ ನೀಡಿದ್ದರು. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories