ಪ್ರಸಿದ್ಧ ಚೆಫ್ ವಿಕಾಸ್ ಖನ್ನಾರ ನ್ಯೂಯಾರ್ಕ್ ರೆಸ್ಟೋರೆಂಟ್‌ಗೆ ನೀತಾ ಅಂಬಾನಿ ಭೇಟಿ, ಮೊಮ್ಮಗಳೊಂದಿಗೆ ನೃತ್ಯ!

Published : Jun 29, 2025, 11:21 AM IST

NMACC ಇಂಡಿಯಾ ವೀಕೆಂಡ್‌ಗಾಗಿ ನೀತಾ ಅಂಬಾನಿ ಶೆಫ್ ವಿಕಾಸ್ ಖನ್ನಾ ಅವರೊಂದಿಗೆ ವಿಶೇಷ ಭಾರತೀಯ ಖಾದ್ಯಗಳನ್ನು ಸವಿದರು. ಬಂಗಲೋ ರೆಸ್ಟೋರೆಂಟ್‌ನಲ್ಲಿ ನೀತಾ ಅವರು ಕಲಾವಿದರೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಈ ಕಾರ್ಯಕ್ರಮವು ನ್ಯೂಯಾರ್ಕ್‌ನಲ್ಲಿ ಸೆಪ್ಟೆಂಬರ್ 12 ರಿಂದ 14 ರವರೆಗೆ ನಡೆಯಲಿದೆ.

PREV
15

ನ್ಯೂಯಾರ್ಕ್‌ನಲ್ಲಿ ನಡೆಯಲಿರುವ NMACC ಇಂಡಿಯಾ ವೀಕೆಂಡ್ ಕಾರ್ಯಕ್ರಮಕ್ಕಾಗಿ ವಿಶೇಷ ಪಾಕಶಾಲಾ ಅನುಭವವನ್ನು ರೂಪಿಸುವ ಸಲುವಾಗಿ, ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ, ಪ್ರಸಿದ್ಧ ಸೆಲೆಬ್ರಿಟಿ ಶೆಫ್ ವಿಕಾಸ್ ಖನ್ನಾ ಅವರ ಬಂಗಲೋ ರೆಸ್ಟೋರೆಂಟ್‌ಗೆ ಭೇಟಿ ನೀಡಿದರು. ಅವರೊಂದಿಗೆ ಮಗಳು ಇಶಾ ಅಂಬಾನಿ ಪಿರಾಮಲ್ ಹಾಗೂ ಮೊಮ್ಮಗಳು ಆದಿಯಾ ಶಕ್ತಿ ಕೂಡ ಭಾಗವಹಿಸಿ, ಮೈಕೆಲಿನ್ ಸ್ಟಾರ್ ಪಡೆದ ಖನ್ನಾ ತಯಾರಿಸಿದ ವಿಭಿನ್ನ ಭಾರತೀಯ ಖಾದ್ಯಗಳ ಆಸ್ವಾಧಿಸಿದರು

25

ಬಂಗಲೋದಲ್ಲಿ ನೀತಾ ಅಂಬಾನಿಯ ನೃತ್ಯದ ಮೋಡಿ

ನೀತಾ ಅಂಬಾನಿ ಅವರನ್ನು ಬಂಗಲೋ ರೆಸ್ಟೋರೆಂಟ್‌ ಬಳಿ ರಂಗಿನ ವೇಷ ತೊಟ್ಟ ತಂಡಗಳು ನೃತ್ಯ ಮತ್ತು ಗಾಯನದೊಂದಿಗೆ ಉತ್ಸಾಹಪೂರ್ಣವಾಗಿ ಸ್ವಾಗತಿಸಿದವು. ಪ್ರದರ್ಶನದ ನಂತರ, ನೃತ್ಯಕಲಾವಿದರು ನೀತಾ ಅಂಬಾನಿ ಅವರನ್ನು ತಮ್ಮ ಜೊತೆಯಲ್ಲಿ ನೃತ್ಯ ಮಾಡಲು ಆಹ್ವಾನಿಸಿದರು. ನುರಿತ ಡ್ಯಾನ್ಸರ್ ಆಗಿರುವ ನೀತಾ ಅಂಬಾನಿ, ಸಂತೋಷದಿಂದ ಅವರ ಕರೆಗೆ ಓಗೊಟ್ಟು ತಾವೂ ಕೂಡ ಹೆಜ್ಜೆ ಹಾಕಿದರು. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ದೃಶ್ಯಗಳಲ್ಲಿ, ತಮ್ಮ ಮೊಮ್ಮಗಳನ್ನು ಹೊತ್ತುಕೊಂಡು ಅವರು ಡ್ಯಾನ್ಸ್ ಅನ್ನು ಆನಂದಿಸುತ್ತಿದ್ದಾರೆ. ನಂತರ, ಮೊಮ್ಮಗಳನ್ನು ಮಗಳು ಇಶಾಗೆ ಹಸ್ತಾಂತರಿಸಿದ ನೀತಾ ಅಂಬಾನಿ, ಕಲಾವಿದರು ಜೊತೆಗೂಡಿ ಸಣ್ಣ ನೃತ್ಯಪ್ರದರ್ಶನ ನೀಡಿದರು.

35

ಅವರ ಭೇಟಿಯ ವೇಳೆ, NMACC ಸಂಸ್ಥಾಪಕಿ ನೀತಾ ಅಂಬಾನಿ, ಇಂಡಿಯಾ ವೀಕೆಂಡ್‌ನಲ್ಲಿ ಪರಿಚಯವಾಗುವ ವಿಶೇಷ ಮೆನು ರೂಪಿಸುವಲ್ಲಿ ಶೆಫ್ ಖನ್ನಾ ಅವರಿಗೆ ಸಲಹೆ ನೀಡಿದರು. ನ್ಯೂಯಾರ್ಕ್‌ನ ಖನ್ನಾ ಅವರ ಪ್ರಮುಖ ರೆಸ್ಟೋರೆಂಟ್‌ನಲ್ಲಿ ಅವರು ಹಲವಾರು ಭಾರತೀಯ ಸ್ಫೂರ್ತಿಯ ಖಾದ್ಯಗಳನ್ನು ಸವಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಾರಮೆಲೈಸ್ಡ್ ಅನಾನಸ್‌ನಿಂದ ತುಂಬಿದ ಪಾನೀಪುರಿ ತಿನ್ನುತ್ತಾ “ರುಚಿಕರವಾಗಿದೆ!” ಎಂಬ ಆಶ್ಚರ್ಯದ ಪ್ರತಿಕ್ರಿಯೆಯನ್ನು ನೀತಾ ಅಂಬಾನಿ ನೀಡಿದರು. ವಿಕಾಸ್ ಖನ್ನಾ ಅವರು, “ನೀತಾ ಅಂಬಾನಿ ಅವರನ್ನು ಬಂಗಲೋದಲ್ಲಿ ಆತಿಥ್ಯವಹಿಸುವುದು ನನಗೆ ಅತ್ಯಂತ ಗೌರವದ ವಿಷಯವಾಗಿದೆ” ಎಂದು ತಿಳಿಸಿದ್ದಾರೆ.

45

NMACC ಇಂಡಿಯಾ ವೀಕೆಂಡ್ ಎಂದರೇನು?

NMACC ಇಂಡಿಯಾ ವೀಕೆಂಡ್ ಮೂರು ದಿನಗಳ ವಿಶೇಷ ಸಾಂಸ್ಕೃತಿಕ ಉತ್ಸವವಾಗಿದ್ದು, ಮುಂಬೈನ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಶ್ರೇಷ್ಠತೆಯನ್ನು ನ್ಯೂಯಾರ್ಕ್ ನಗರಕ್ಕೆ ತರುವ ಸಾಹಸವಾಗಿದೆ. ಭಾರತೀಯ ಆಹಾರದ ಪಾಪ್-ಅಪ್‌ಗಳು, ಶ್ಯಾಮಕ್ ದಾವರ್ ಅವರ ನೃತ್ಯ ಕಾರ್ಯಾಗಾರಗಳು, ಯೋಗ ಸೆಷನ್ಗಳು, ಸಂಗೀತ ಕಾರ್ಯಕ್ರಮಗಳು ಮತ್ತು ಇನ್ನಷ್ಟು ಮನೋರಂಜನೆಯೊಂದಿಗೆ, ಭಾರತೀಯ ಸಾಂಸ್ಕೃತಿಕ ವೈಭವವನ್ನು ಪರಿಚಯಿಸಲಿದೆ. ನ್ಯೂಯಾರ್ಕ್‌ನ ಲಿಂಕನ್ ಸೆಂಟರ್‌ನಲ್ಲಿ ನಡೆಯುವ ಈ ಉತ್ಸವವು ಸೆಪ್ಟೆಂಬರ್ 12ರಿಂದ 14ರವರೆಗೆ ನಡೆಯಲಿದೆ.

55

NMACC ವೆಬ್‌ಸೈಟ್‌ನಲ್ಲಿ ಹಂಚಿಕೊಂಡ ಪ್ರಕಟಣೆಯಲ್ಲಿ ನೀತಾ ಅಂಬಾನಿ ಹೇಳಿಕೆ

“ಭಾರತದ ಸಾಂಸ್ಕೃತಿಕ ಪರಂಪರೆಯಾದ ಕಲೆ, ಕರಕುಶಲ ವಸ್ತುಗಳು, ಸಂಗೀತ, ನೃತ್ಯ, ಫ್ಯಾಷನ್ ಮತ್ತು ಆಹಾರವನ್ನು ಜಾಗತಿಕವಾಗಿ ಆಚರಿಸುವ ಉದ್ದೇಶದಿಂದ NMACC ಇಂಡಿಯಾ ವೀಕೆಂಡ್ ವಿನ್ಯಾಸಗೊಳಿಸಲಾಗಿದೆ. NMACCನಲ್ಲಿ ನಮ್ಮ ದೃಷ್ಟಿಕೋಣ ಯಾವಾಗಲೂ ವಿಶ್ವದ ಶ್ರೇಷ್ಠತೆಯನ್ನು ಭಾರತಕ್ಕೆ ತರುವುದೂ ಹಾಗೂ ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ತರುವುದೂ ಆಗಿದೆ. ಲಿಂಕನ್ ಸೆಂಟರ್‌ನಂತಹ ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತಾಚೈತನ್ಯವನ್ನು ಆಚರಿಸುವುದು ಈ ಪ್ರಯಾಣದಲ್ಲಿ ಮೊದಲ ಹೆಜ್ಜೆಯಾಗಿದೆ. ನಮ್ಮ ಶ್ರೀಮಂತ ಸಂಪ್ರದಾಯಗಳು ಮತ್ತು ಪರಂಪರೆಯನ್ನು ನ್ಯೂಯಾರ್ಕ್ ನಗರ ಹಾಗೂ ಜಗತ್ತಿನೊಂದಿಗೆ ಹಂಚಿಕೊಳ್ಳಲು ನಾನು ಬಹಳ ಉತ್ಸುಕಳಾಗಿದ್ದೇನೆ.”

Read more Photos on
click me!

Recommended Stories