9 ವರ್ಷದ ಮಗನಿಂದ ನಿರ್ಭಯಾ ದೋಷಿ ಅಕ್ಷಯ್ ಅಂತ್ಯ ಸಂಸ್ಕಾರ!

First Published Mar 21, 2020, 4:06 PM IST

ನಿರ್ಣಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 20ರ ಬೆಳಗ್ಗೆ 05.30ಕ್ಕೆ ಗಲ್ಲಿಗೇರಿಸಲಾಗಿದೆ. ಗಲ್ಲು ಶಿಕ್ಷೆ ಬಳಿಕ ಅಪರಾಧಿಗಳಲ್ಲೊಬ್ಬನಾದ ಅಕ್ಷಯ್ ಠಾಕೂರ್ ಶವದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಾಧ್ಯಮಗಲ ವರದಿಯನ್ವಯ ಅಕ್ಷಯ್ ಠಾಕೂರ್ ಶವವನ್ನು ಪೋಸ್ಟ್ ಮಾರ್ಟಂ ಬಳಿಕ ಆತನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಬೆಳಗ್ಗೆ ಔರಂಗಾಬಾದ್ ನಲ್ಲಿರುವ ಅಕ್ಷಯ್ ಊರಿಗೆ ಮೃತದೇಹ ತಲುಪಿದ್ದು, ಆತನ ಒಂಭತ್ತು ವರ್ಷದ ಪುತ್ರ ಮುಖಾಗ್ನಿ ಕೊಟ್ಟಿದ್ದಾನೆ.

ಪತ್ನಿ ಹಾಗೂ ತಮ್ಮ ಶವ ಪಡೆಯಲು ದೆಹಲಿಗೆ ಆಗಮಿಸಿದ್ದರು: ಗಲ್ಲು ಶಿಕ್ಷೆ ಬಳಿಕ ಶವ ಪಡೆಯಲು ಅಕ್ಷಯ್ ಪತ್ನಿ ಹಾಗೂ ತಮ್ಮ ಆಗಮಿಸಿದ್ದರು. ಬಳಿಕ ಅಕ್ಷಯ್ ಮೃತದೇಹವನ್ನು ಊರಿಗೊಯ್ದು ಅಲ್ಲೇ ಸಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
undefined
ಅಕ್ಷಯ್ ನನ್ನು ಗಲ್ಲಿಗೇರಿಸಲಾಗಿದೆ ಎಂಬ ಸುದ್ದಿ ಬಂದೆರಗಿದ ಬಳಿಕ ಆತ ಹುಟ್ಟಿ ಬೆಳೆದಿದ್ದ ಹಳ್ಳಿಯ ಹಲವಾರು ಮನೆಗಳಲ್ಲಿ ಆಹಾರವನ್ನು ತಯಾರಿಸಿಲ್ಲ.
undefined
ಯಾರು ಈ ಅಕ್ಷಯ್ ಠಾಕೂರ್? ಅಕ್ಷಯ್ ಬಿಹಾರ್ ನಿವಾಸಿ. ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ್ದ ಅಕ್ಷಯ್ ಅಲ್ಲಿಂದ ದೆಲಿಗೆ ತೆರಳಿದ್ದ. ಮದುವೆ ಬಳಿಕವೇ ಅಂದರೆ 2011 ರಲ್ಲಿ ಈತ ರಾಷ್ಟ್ರರಾಜಧಾನಿಗೆ ತೆರಳಿದ್ದ. ಅಲ್ಲಿ ಈತ ರಾಮ್ ಸಿಂಗ್ ನನ್ನು ಭೇಟಿಯಾಗುತ್ತಾನೆ. ಈತನಿಗೆ ಪತ್ನಿ ಹಾಗೂ ಓರ್ವ ಮಗನಿದ್ದ.
undefined
ಗಲ್ಲಿಗೇರಿಸುವುದಕ್ಕೂ ಮುನ್ನ ನಾಲ್ವರಿಗೂ ಪರಸ್ಪರ ಭೇಟಿಯಾಗುವ ಅವಕಾಶ ನೀಡಲಿಲ್ಲ: ನಾಲ್ವರೂ ದೋಷಿಗಳು ಗಲ್ಲಿಗೇರುವುದಕ್ಕೂ ಮುನ್ನ ಪರಸ್ಪರ ಭೇಟಿಯಾಗಲು ಇಚ್ಛಿಸಿದ್ದರು. ಆದರೆ ತಿಹಾರ್ ಜೈಲು ಅಧಿಕಾರಿಗಳು ಇದಕ್ಕೆ ಅವಕಾಶ ನೀಡಲಿಲ್ಲ.
undefined
ಗಲ್ಲಿಗೇರಿಸುವುದಕ್ಕೂ ಮುನ್ನ ಅಕ್ಷಯ್ ಅಂತಿಮ ಇಚ್ಛೆ: ಗಲ್ಲಿಗೇರಿಸುವುದಕ್ಕೂ ಮುನ್ನ ಪವನ್ ಹಾಗೂ ಅಕ್ಷಯ್ ಕೊನೆ ಆಸೆಯನ್ನು ಹೇಳಿಕೊಂಡಿರಲಿಲ್ಲ. ಇಬ್ಬರೂ ಮೌನ ವಹಿಸಿದ್ದರು.
undefined
ನಿರ್ಭಯಾ ದೋಷಿ ಮುಕೇಶ್ ಅಂಗಾಂಗ ದಾನ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದು, ಇದನ್ನಾತ ಲಿಖಿತ ರೂಪದಲ್ಲೂ ತಿಳಿಸಿದ್ದ.
undefined
ದೋಷಿ ವಿನಯ್ ಜೈಲಿನಲ್ಲಿ ಪೇಂಟಿಂಗ್ ಮಾಡಿದ್ದು, ಇದನ್ನಾತ ಜೈಲು ಅಧಿಕಾರಿಗಳಿಗೆ ನೀಡಿದ್ದಾನೆ. ವಿನಯ್ ತನ್ನ ಕೊನೆ ಇಚ್ಛೆಯನ್ನು ತಿಳಿಸಿದ್ದು, ತನ್ನ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವಾಗ ಅದರೊಂದಿಗೆ ಹನುಮಾನ್ ಚಾಲಿಸಾ ಹಾಗೂ ಒಂದು ಫೋಟೋ ಇಟ್ಟು ಕೊಡುವಂತೆ ಹೇಳಿದ್ದ.
undefined
ಇನ್ನು ದೋಷಿಗಳನ್ನು ನೇಣಿಗೇರಿಸಿದ ಬಳಿಕ ತಿಹಾರ್ ಜೈಲು ಆವರಣದಲ್ಲಿ ಸಾರ್ವಜನಿಕರ ಸಂಭ್ರಮ ಮುಗಿಲು ಮುಟ್ಟಿತ್ತು. ಗಲ್ಲಿಗೇರಿಸುವ ದಿನದಂದೇ ತಿಹಾರ್ ಜೈಲು ಆವರಣದಲ್ಲಿ ನೆರೆದಿದ್ದ ಜನರು ನ್ಯಾಯಾಂಗಕ್ಕೆ ಧನ್ಯವಾದ ತಿಳಿಸಿದ್ದರು.
undefined
click me!