ಪ್ರಮುಖ ತಾಣಗಳ ಭೇಟಿಗೆ ಭಾರತ ನೇಪಾಳ ಹೊಸ ರೈಲು ಘೋಷಣೆ, ಇಲ್ಲಿದೆ ಟಿಕೆಟ್ ದರ,ಮಾರ್ಗ ವಿವರ

Published : May 17, 2026, 04:26 PM IST

ಪ್ರವಾಸಿ ತಾಣ ದೇವಸ್ಥಾನ ಸೇರಿದಂತೆ ಪ್ರಮುಖ ತಾಣಗಳ ಭೇಟಿ, ಸಂದರ್ಶನಕ್ಕಾಗಿ ಭಾರತೀಯ ರೈಲ್ವೇ ಹೊಸ ಭಾರತ ನೇಪಾಳ ಗೌರವ್ ರೈಲು ಘೋಷಣೆ ಮಾಡಿದೆ. ರೈಲು ಟಿಕೆಟ್ ದರ, ಮಾರ್ಗ, ಸಮಯದ ವಿವರ ಇಲ್ಲಿದೆ.

PREV
16
ಭಾರತ ನೇಪಾಳ ಪ್ರಮುಖ ತಾಣಗಳಿಗೆ ಹೊಸ ರೈಲು

ಭಾರತೀಯ ರೈಲ್ವೇ ಟೂರಿಸಂ ಕಾರ್ಪೋರೇಶನ್ ಹೊಸ ರೈಲು ಸೇವೆ ಘೋಷಣೆ ಮಾಡಿದೆ. ಭಾರತ್ ಗೌರವ್ ಟೂರ್ ರೈಲು ಇದಾಗಿದೆ. ಹೊಸ ರೈಲು ಭಾರತ ಹಾಗೂ ನೇಪಾಳದ ಪ್ರಮುಖ ತಾಣಗಳಿಂದ ಸಾಗಲಿದೆ. ವಿಶೇಷ ಅಂದರೆ ಪ್ರಮುಖ ತಾಣಗಳನ್ನು, ದೇವಸ್ಥಾನ, ದರ್ಶನ ಪಡೆಯಲು ಪ್ರಯಾಣದಲ್ಲಿ ಸಾಧ್ಯವಿದೆ.

26
ಪಶುಪತಿನಾಥ ದೇವಸ್ಥಾನ ಸೇರಿ ಹಲವು ತಾಣಗಳಿಗೆ ಭೇಟಿ

ನೇಪಾಳದ ಅತ್ಯಂತ ಜನಪ್ರಿಯ ಪಶುಪತಿನಾಥ ದೇವಸ್ಥಾನ ಸೇರಿದಂತೆ ಹಲವು ಪ್ರಮುಖ ತಾಣಗಳಿಗೆ ಈ ರೈಲಿನ ಮೂಲಕ ಭೇಟಿ ನೀಡಲು ಸಾಧ್ಯವಿದೆ. ವಿಶೇಷ ಅಂದರೆ ಹೊಟೆಲ್ ವಾಸ್ತವ್ಯ, ಊಟ, ತಿಂಡಿ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ಭಾರತೀಯ ರೈಲ್ವೇ ನೋಡಿಕೊಳ್ಳಲಿದೆ. ಕೇವಲ ಟಿಕೆಟ್ ಬುಕ್ ಮಾಡಿ ರೈಲಿನಲ್ಲಿ ಕುಳಿತರೇ ಭಾರತ ಹಾಗೂ ನೇಪಾಳದ ಪ್ರಮುಖ ತಾಣಗಳ ದರ್ಶನ ಮಾಡಲಾಗುತ್ತದೆ.

36
10 ದಿನದ ಪ್ರವಾಸ

ಈ ವಿಶೇಷ ಟೂರ್ ರೈಲು 10 ದಿನ ಪ್ರವಾಸವಾಗಿದೆ. 9 ರಾತ್ರಿ ಹಾಗೂ 10 ದಿನಗಳ ಪ್ರಯಾಣ. ಜೂನ್ 12 ರಂದು ಮಧ್ಯಪ್ರದೇಶದ ಇಂದೋರ್ ರೈಲು ನಿಲ್ದಾಣದಿಂದ ಹೊರಡಲಿದೆ. ಮಧ್ಯ ಪ್ರದೇಶಧ ಹಲವು ನಿಲ್ದಾಣಗಳಿಂದ ಈ ರೈಲು ಹತ್ತಬಹುದು. ಇಂದೋರ್, ಉಜ್ಜೈನಿ, ಭೋಪಾಲ್, ಶುಜಾಲ್‌ಪುರ್, ನರಸಿಂಗಪುರ್ ಸೇರಿದಂತೆ 10 ರೈಲು ನಿಲ್ದಾಣದಿಂದ ಬೋರ್ಡಿಂಗ್ ಅವಕಾಶವಿದೆ.

46
ನೇಪಾಳದ ಯಾವೆಲ್ಲಾ ಪ್ರಮುಖ ತಾಣಗಳ ದರ್ಶನ

ಈ ಧಾರ್ಮಿಕ ಟೂರ್ ರೈಲು ನೇಪಾಳದ ಪ್ರಮುಖ ತಾಣಗಳ ಸಂದರ್ಶಿಸಲಿದೆ. ಈ ತಾಣಗಳಲ್ಲಿ ದೇವಸ್ಥಾನಗಳ ದರ್ಶನ, ಪ್ರವಾಸಿ ತಾಣಗಳಲ್ಲಿ ರೋಪ್‌ವೇ ರೈಡ್, ಸಫಾರಿ ಸೇರಿದಂತೆ ಒಂದಷ್ಟು ಸಮಯ ಕಳೆಯಲು ಅವಕಾಶವೂ ಸಿಗಲಿದೆ. ಈ ಪೈಕಿ ನೇಪಾಳದ ಪ್ರಮುಖ ತಾಣಗಳ ವಿವರ ಇಲ್ಲಿದೆ.

  • ಕಾಠ್ಮಂಡು
  • ಪಶುಪತಿನಾಥ ದೇವಸ್ಥಾನ
  • ಪೋಖರಾ
  • ಚಿತ್ವಾನ್ ರಾಷ್ಟ್ರೀಯ ಉದ್ಯಾನವನ
  • ಮನಕಾಮನ ದೇವಸ್ಥಾನ
56
ಪ್ರಯಾಣಿಕರಿಗೆ ವಿಶೇಷ ರೈಲು ನೀಡುವ ಸೌಲಭ್ಯ
  • ಆರಾಮದಾಯಕ ರೈಲು ಪ್ರಯಾಣ
  • ತಂಗಲು ಹೊಟೆಲ್ ವ್ಯವಸ್ಥೆ (3 ಸ್ಟಾರ್ ಹೊಟೆಲ್)
  • ಸಸ್ಯಾಹಾರಿ ಆಹಾರ
  • ಸ್ಥಳೀಯ ಕೆಲ ಪ್ರವಾಸಿ ತಾಣಗಳಿಗೆ ಎಸಿ ಬಸ್ ಮೂಲಕ ಪ್ರಯಾಣ
  • ಪ್ರಯಾಣ ವಿಮೆ
  • ಟೂರ್ ಮಾರ್ಗದರ್ಶಿ
  • ಆಹಾರ, ಊಟ, ತಿಂಡಿ
  • ಭದ್ರತೆ
66
ಭಾರತ ನೇಪಾಳ ಗೌರವ್ ರೈಲು ಟಿಕೆಟ್ ದರ

ಭಾರತ ನೇಪಾಳ ಗೌರವ್ ರೈಲು ಸೇವೆಯಲ್ಲಿ ಮೂರು ಸ್ತರದ ಟಿಕೆಟ್ ಲಭ್ಯವಿದೆ. 14 ಕೋಚ್‌ಗಳಿರುವ ಫಸ್ಟ್ ಎಸಿ, ಸೆಕೆಂಡ್ ಎಸಿ ಹಾಗೂ ಥರ್ಡ್ ಎಸಿ ಕೋಚ್‌ಗಳಿವೆ.

  • ಥರ್ಡ್ ಎಸಿ ಕಂಫರ್ಟ್ : 62,710 ರೂಪಾಯಿ
  • ಸೆಕೆಂಡ್ ಎಸಿ ಡಿಲಕ್ಸ್: 76,550 ರೂಪಾಯಿ
  • ಫಸ್ಟ್ ಎಸಿ ಸೂಪಿರಿಯರ್: 90,400 ರೂಪಾಯಿ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories