ಆಫಿಸ್ ಲ್ಯಾಪ್‌ಟಾಪ್‌ನಲ್ಲಿ ಈ ವಿಷಯಗಳನ್ನು ಎಂದಿಗೂ ಸರ್ಚ್ ಮಾಡಬೇಡಿ!

Published : Jan 28, 2025, 07:02 PM IST

Work Ethics: ಕಂಪನಿ ಲ್ಯಾಪ್‌ಟಾಪ್‌ಗಳಲ್ಲಿ ವೈಯಕ್ತಿಕ ವಿಷಯಗಳನ್ನು ಸರ್ಚ್ ಮಾಡುವುದರಿಂದಾಗುವ ಸಮಸ್ಯೆಗಳನ್ನು ಈ ಲೇಖನ ತಿಳಿಸುತ್ತದೆ. ಫೋಟೋ, ವಿಡಿಯೋ ಸ್ಟೋರ್ ಮಾಡುವುದು, ಸೋಶಿಯಲ್ ಮೀಡಿಯಾ ಬಳಕೆ ಮತ್ತು ಪಾರ್ಟ್ ಟೈಮ್ ಜಾಬ್ ಸರ್ಚ್ ಮಾಡುವುದರಿಂದಾಗುವ ಅಪಾಯಗಳ ಬಗ್ಗೆ ಲೇಖನದಲ್ಲಿ ತಿಳಿಸಲಾಗಿದೆ.

PREV
16
ಆಫಿಸ್ ಲ್ಯಾಪ್‌ಟಾಪ್‌ನಲ್ಲಿ ಈ ವಿಷಯಗಳನ್ನು ಎಂದಿಗೂ ಸರ್ಚ್ ಮಾಡಬೇಡಿ!

ಕೋವಿಡ್ ಕಾಲಘಟ್ಟದ ಬಳಿಕ ಬಹುತೇಕ ಎಲ್ಲಾ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲ್ಯಾಪ್‌ಟಾಪ್ ನೀಡುತ್ತಿವೆ. ಕಂಪನಿಗಳು ನೀಡಿರುವ ಲ್ಯಾಪ್‌ಟಾಪ್ ಸುರಕ್ಷಿತವಾಗಿ ನೋಡಿಕೊಳ್ಳುವುದು ಉದ್ಯೋಗಿಗಳ ಜವಾಬ್ದಾರಿಯಾಗಿರುತ್ತದೆ.

26

ನಿಮ್ಮ ಬಳಿಯಲ್ಲಿಯೂ ಕಂಪನಿ ನೀಡಿರುವ ಲ್ಯಾಪ್‌ಟಾಪ್ ಇದೆಯಾ? ಕೆಲಸದ ಬಳಿಕ ವೈಯಕ್ತಿಕ ವಿಷಯಗಳಿಗಾಗಿ ಆ ಲ್ಯಾಪ್‌ಟಾಪ್ ಬಳಕೆ ಮಾಡುತ್ತೀರಾ? ಹಾಗಿದ್ರೆ ನೀವು ಕೆಲವೊಂದು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. 

36

ಆಫಿಸ್/ಕಂಪನಿ ನೀಡಿರುವ ಲ್ಯಾಪ್‌ಟಾಪ್‌ನಲ್ಲಿ ಅಪ್ಪಿತಪ್ಪಿಯೂ ಈ ವಿಷಯಗಳನ್ನು ಸರ್ಚ್ ಮಾಡಬೇಡಿ. ಒಂದು ವೇಳೆ ಸರ್ಚ್ ಮಾಡಿದ್ದೇ ಆದ್ರೆ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ ಸರ್ಚ್  ಮಾಡಬಾರದಾ ಆ ವಿಷಯಗಳೇನು ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ. 

46

ಎಂದಿಗೂ ಆಫಿಸ್‌ ಲ್ಯಾಪ್‌ಟಾಪ್ ಪರ್ಸನಲ್ ಕೆಲಸಗಳನ್ನು ಮಾಡಬಾರದು. ಉದಾಹರಣೆಗೆ ಪರ್ಸನಲ್ ಫೋಟೋ ಮತ್ತು ವಿಡಿಯೋಗಳನ್ನು ಸ್ಟೋರ್ ಮಾಡಬಾರದು. ಕಾರಣ ಕಂಪನಿ ಬಿಡುವಾಗ ಲ್ಯಾಪ್‌ಟಾಪ್ ಹಿಂದಿರುಗಿಸಬೇಕಾಗುತ್ತದೆ. ಡಿಲೀಟ್ ಮಾಡಿದ್ರೂ ಫೋಟೋ, ವಿಡಿಯೋಗಳನ್ನು ರಿಟ್ರೀವ್ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ.  ಒಂದು ವೇಳೆ ಆಕ್ಷೇಪಾರ್ಹ ಫೋಟೋ/ವಿಡಿಯೋ ಇದ್ರೆ ನಿಮ್ಮ ವಿರುದ್ಧ ಕಠಿಣ ಕ್ರಮ ಜರುಗಿಸಬಹುದು. 

56

ಆಫಿಸ್ ನೀಡಿರುವ ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ವೈಯಕ್ತಿಕ ಸೋಶಿಯಲ್ ಮೀಡಿಯಾ ಅಕೌಂಟ್‌ ಲಾಗಿನ್ ಮಾಡಬಾರದು. ಇದು ನಿಮ್ಮ ಕೆಲಸದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ವೃತ್ತಿ ಜೀವನ ಅಸ್ತವ್ಯಸ್ಥ ಉಂಟಾಗಬಹುದು.

66

ಕಂಪನಿ ನೀಡಿರುವ ಲ್ಯಾಪ್‌ಟಾಪ್‌ನಲ್ಲಿ ಬೇರೆ ಕೆಲಸಗಳನ್ನು ಸರ್ಚ್ ಮಾಡಬಾರದು. ಅದೇ ರೀತಿ ಪಾರ್ಟ್ ಟೈಮ್ ಜಾಬ್ ಮಾಡಿಕೊಳ್ಳಲು ಸಹ ಕಂಪನಿ ಲ್ಯಾಪ್‌ಟಾಪ್ ಬಳಕೆ ಮಾಡಬಾರದು. ಕಂಪನಿಯ ಟೆಕ್ ಟೀ ಪರಿಶೀಲನೆ ನಡೆಸಿದಾಗ ಸಿಕ್ಕರೆ ನಿಮ್ಮ ಕೆಲಸವೇ ಹೋಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ.

Read more Photos on
click me!

Recommended Stories