ಬೆಂಗಳೂರು( ನ. 18) ಕೊರೋನಾ ವೈರಸ್ ಎಂಬ ಮಹಾಮಾರಿ ಪ್ರಪಂಚಕ್ಕೆ ಅಪ್ಪಳಿಸಿ ಒಂದು ವರ್ಷವೇ ಕಳೆದು ಹೋಗಿದೆ. ಆದರೆ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಎಲ್ಲ ರಾಷ್ಟ್ರಗಳು ಲಸಿಕೆ ಕಂಡುಹಿಡಿಯಲು ನಿರಂತರ ಯತ್ನ ಮಾಡುತ್ತಲೇ ಇವೆ. ಕೆಲವೊಂದು ಕಡೆ ಪ್ರಯೋಗ ಅಂತಿಮ ಹಂತದಲ್ಲಿಯೂ ಇದೆ. ಇದೆಲ್ಲದರ ನಡುವೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಕೊರೋನಾ ಲಸಿಕೆ ಬಗ್ಗೆ ಮಾತನಾಡಿದ್ದಾರೆ.