ಇಂಜಿನಿಯರಿಂಗ್‌ವರೆಗೂ ಶಿಕ್ಷಣ, ಅಂತರ್ಜಾತಿ ವಿವಾಹ: 7 ಬಾರಿ ಸಿಎಂ ಆದ 'ಮುನ್ನಾ'!

First Published Nov 16, 2020, 5:44 PM IST

ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೇರಿದೆ. ನಿತೀಶ್ ಕುಮಾರ್ ಏಳನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಸತತ ನಾಲ್ಕು ಬಾರಿ ಸಿಎಂ ಆದ ದಾಖಲೆಯನ್ನೂ ಅವರು ಬಿಹಾರದಲ್ಲಿ ರಚಿಸಿದ್ದಾರೆ. ಇಲ್ಲಿದೆ ನೋಡಿ ನಿತೀಶ್ ಕುಮಾರ್ ಬಗ್ಗೆ ನಿಮಗೆ ತಿಳಿದಿರದ ಕೆಲ ಇಂಟರೆಸ್ಟಿಂಗ್ ವಿಚಾರ

ನಿತೀಶ್ ಕುಮಾರ್ 1 ಮಾರ್ಚ್ 1951ರಂದು ಪಾಟ್ನಾದ ಭಿಕ್ತಿಯಾರ್ಪುರ್‌ನಲ್ಲಿ ಕವಿರಾಜ್ ರಾಮ್ ಲಖನ್ ಹಾಗೂ ಪರಮೇಶ್ವರೀ ದೇವಿ ಮಗನಾಗಿ ಜನಿಸಿದರು. ಕುಟುಂಬ ಮಂದಿ ಅವರನ್ನು ಮುನ್ನಾ ಎಂದೇ ಕರೆಯುತ್ತಿದ್ದರು.
undefined
ನಿತೀಶ್ ಕುಮಾರ್ 1 ಮಾರ್ಚ್ 1951ರಂದು ಪಾಟ್ನಾದ ಭಿಕ್ತಿಯಾರ್ಪುರ್‌ನಲ್ಲಿ ಕವಿರಾಜ್ ರಾಮ್ ಲಖನ್ ಹಾಗೂ ಪರಮೇಶ್ವರೀ ದೇವಿ ಮಗನಾಗಿ ಜನಿಸಿದರು. ಕುಟುಂಬ ಮಂದಿ ಅವರನ್ನು ಮುನ್ನಾ ಎಂದೇ ಕರೆಯುತ್ತಿದ್ದರು.
undefined
ನಿತೀಶ್ ಕುಮಾರ್ 1973ರಲ್ಲಿ ಅಂತರ್ಜಾತಿ ವಿವಾಹವಾದರು. ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದ ನಿತೀಶ್ ಕುಮಾರ್ ಪತ್ನಿ ಮಂಜೂ ಕುಮಾರಿ 2007ರಲ್ಲಿ ಮೃತಪಟ್ಟರು.
undefined
ನಿತೀಶ್ ಕುಮಾರ್ ಏಕೈಕ ಪುತ್ರ ನಿಶಾಂತ್ ಕುಮಾರ್ 20 ಜುಲೈ 1975ರಂದು ಜನಿಸಿದರು. ನಿಶಾಂತ್‌ಗೆ ವಿವಾಹವಾಗಿದ್ದು, ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೆಸ್ರಾದಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಹೀಗಿದ್ದರೂ ಇಂದಿಗೂ ಇವರು ತನ್ನ ತಂದೆಯೊಂದಿಗೇ ವಾಸಿಸುತ್ತಿದ್ದಾರೆ.
undefined
2018ರಲ್ಲಿ ನಿತೀಶ್ ಕುಮಾರ್ ಘೋಷಿಸಿಕೊಂಡಂತೆ ಅವರ ಬಳಿ ಒಟ್ಟು 56.23 ಲಕ್ಷ ಮೌಲ್ಯದ ಆಸ್ತಿ ಇದೆ. ಇದರಲ್ಲಿ ಚರಾಸ್ತಿ 16.23 ಲಕ್ಷ ರೂ ಮೌಲ್ಯದ್ದಾಗಿದೆ. ಇನ್ನು 1000 ಸ್ಕ್ವೇರ್ ಫೀಟ್‌ನ ಫ್ಲಾಟ್‌ ಒಂದು ದೆಹಲಿಯಲ್ಲಿದೆ. ಇದು ಬರೋಬ್ಬರಿ ನಲ್ವತ್ತು ಲಕ್ಷ ಮೌಲ್ಯ ಬೆಲೆ ಬಾಳುತ್ತದೆ.
undefined
ನಿತೀಶ್ ಕುಮಾರ್ ಮಗ ನಿಶಾಂತ್‌ಗೆ ಅಧ್ಯಾತ್ಮದ ಕಡೆ ಹೆಚ್ಚು ಒಲವಿದೆ. ಹೀಗಾಗಿ ಇವರು ತನ್ನ ತಂದೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಹೀಗಿದ್ದರೂ ಅವರ ಬಳಿ ಒಟ್ಟು 2.43ಕೋಟಿ ಮೌಲ್ಯದ ಚರಾಸ್ತಿ ಹಾಗೂ 1.18 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ 1.25 ರೂ ಹಣವಿದೆ.
undefined
ತಮ್ಮ 26 ನೇ ವಯಸ್ಸಿನಲ್ಲಿ ನಿತೀಶ್ ಕುಮಾರ್ ಮೊದಲ ಬಾರಿ 1977ರ ಚುನಾವಣೆಯಲ್ಲಿ ಹರ್‌ನೌತ್ ಸೀಟ್‌ನಿಂದ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದರು, ಆದರೆ ಸೋಲನುಭವಿಸಿದ್ದರು. 1980ರಲ್ಲಿ ಜನತಾ ಪಾರ್ಟಿ(ಸೆಕ್ಯುಲರ್)ನಿಂದ ಮತ್ತೆ ಕಣಕ್ಕಿಳಿದಿದ್ದರು, ಆದರೆ ಅಲ್ಲೂ ಸೋಲನುಭವಿಸಿದ್ದರು. ಸತತ ಎರಡು ಬಾರಿ ಸೋಲನುಭವಿಸಿದ್ದ ನಿತೀಶ್ ಕುಮಾರ್ ರಾಜಕೀಯದಿಂದ ದೂರವುಳಿಯಲು ನಿರ್ಧರಿಸಿದ್ದರು.
undefined
ಇದಾದ ಬಳಿಕ ಸರ್ಕಾರಿ ನೌಕರನಾಗಲು ಮನಸ್ಸು ಮಾಡಿದ್ದ ನಿತೀಶ್ ಕುಮಾರ್ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯನ್ನೂ ಆರಂಭಿಸಿದ್ದರು. ಆದರೆ ಹೀಗಾಗಲಿಲ್ಲ. 1985 ರಲ್ಲಿ ಮತ್ತೆ ಹರ್‌ನೌತ್ ಕ್ಷೇತ್ರದಿಂದ ಕಣಕ್ಕಿಳಿಯಲು ಲೋಕದಳ ಪಕ್ಷ ಅವರಿಗೆ ಟಿಕೆಟ್ ನೀಡಿತು. ಮೂರನೇ ಬಾರಿ ಅವರು ಬರೋಬ್ಬರಿ 21 ಸಾವಿರ ಮತಗಳ ಅಂತರದಿಂದ ಗೆಲುವು ಪಡೆದುಕೊಂಡರು.
undefined
1985ರಲ್ಲಿ ಮೊದಲ ಬಾರಿ ಶಾಸಕರಾದ ಬಳಿಕ 1989ರಲ್ಲಿ ನಿತೀಶ್ ಕುಮಾರ್ ಲೋಕಸಭೆಗೆ ಪ್ರವೇಶಿಸಿದ್ದರು. ಆರು ಬಾರಿ ಲೋಕಸಭಾ ಸಂಸದರಾಗಿಯೂ ಆಯ್ಕೆಯಾಗಿದ್ದರು.
undefined
ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದ ನಿತೀಶ್ ಕುಮಾರ್‌ರನ್ನು ಕೇಂದ್ರ ರಾಜ್ಯ ಖಾತೆ ಸಚಿವರನ್ನಾಗಿ ಮಾಡಿದ್ದರು. ಅವರಿಗೆ ಸಾರಿಗೆ ಮತ್ತು ರೈಲ್ವೆ ಸಚಿವಾಲಯದ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಗೈಸಲ್‌ನಲ್ಲಿ ಸಂಭವಿಸಿದ ದುರಂತದ ಬಳಿಕ ಅವರು ತಮ್ಮ ಹುದ್ದೆಗೆ ರಾಜೀನಾಮೆಬ ನೀಡಿದ್ದರು. ಬಳಿಕ ಕೃಷಿ ಸಚಿವರಾದರು.
undefined
ನಿತೀಶ್ ಕುಮಾರ್ 2004 ರಲ್ಲಿ ತಮ್ಮ ಕೊನೆಯ ಲೋಕಸಭಾ ಚುನಾವಣೆ ಎದುರಿಸಿದ್ದರು. ಆ ಚುನಾವಣೆಯಲ್ಲಿ ಅವರು ಭಾಢ್ ಹಾಗೂ ನಳಂದಾ ಹೀಗೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಆದರೆ ಭಾಢ್‌ನಲ್ಲಿ ಸವರು ಸೋಲನುಭವಿಸಿ, ನಳಂದಾ ಕ್ಷೇತ್ರದಲ್ಲಿ ಗೆದ್ದಿದ್ದರು. ಇದು ಅವರು ಸ್ಪರ್ಧಿಸಿದ್ದ ಕೊನೆಯ ಲೋಕಸಭಾ ಚುನಾವಣೆಯಾಗಿತ್ತು.
undefined
ನಿತೀಶ್ ಕುಮಾರ್ ಬಿಜೆಪಿ ಬೆಂಬಲದೊಂದಿಗೆ 2000ನೇ ಇಸವಿಯ ಮಾರ್ಚ್ 3 ರಂದು ಮೊದಲ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಬಹುಮತವಿಲ್ಲದೇ ಏಳು ದಿನದಲ್ಲೇ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ರಾವ್ಡೀ ದೇವಿ ಸಿಎಂ ಆಗಿದ್ದರು.
undefined
2006ರಲ್ಲಿ ನಿತೀಶ್ ಕುಮಾರ್ ಮೊದಲ ಬಾರಿ ವಿಧಾನ ಪರಿಷತ್ ಸದಸ್ಯರಾದರು. 2005 ರಿಂದ ಈವರೆಗೆ ನಿತೀಶ್ ಕುಮಾರ್ ನಿರಂತರವಾಗಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ನಡುವೆ ಮೇ 2014 ರಿಂದ ಫೆಬ್ರವರಿ 2015 ರವರೆಗೆ ರಾಮ್ ಮಾಂಜಿ ಮುಖ್ಯಮಂತ್ರಿಯಾಗಿದ್ದಾರೆ.
undefined
2018ರಲ್ಲಿ ನಿತೀಶ್ ಕುಮಾರ್ ಮೂರನೇ ಬಾರಿ ವಿಧಾನ ಪರಿಷತ್ ಸದಸ್ಯರಾದರು ಹಾಗೂ 2024ರವರೆಗೆ ಅವರು ಈ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. 1995ರ ಬಳಿಕ ನಿತೀಶ್ ಕುಮಾರ್ ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಸರ್ಧಿಸಿಲ್ಲ.
undefined
2016ರಲ್ಲಿ ನಿಧನರಾದ ಜಯಲಲಿತಾ ವಿಭಿನ್ನ ಸಮಯದಲ್ಲಿ ಸುಮಾರು ಆರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಅವರ ಈ ದಾಖಲೆಯನ್ನು ಇಂದು ನಿತೀಶ್ ಕುಮಾರ್ ಏಳನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಮುರಿದಿದ್ದಾರೆ.
undefined
click me!