ಹಾಲಿ ವರ್ಷ ದೇಶದ ಅತ್ಯಂತ ಪವರ್‌ಫುಲ್‌ ವ್ಯಕ್ತಿ ಯಾರು, ಇಲ್ಲಿದೆ ಟಾಪ್‌ 10 ಲಿಸ್ಟ್‌!

First Published | Apr 18, 2024, 1:24 PM IST

ಹಾಲಿ ವರ್ಷದಲ್ಲಿ ಅತ್ಯಂತ ಪವರ್‌ಫುಲ್‌ ಆಗಿರುವ ಭಾರತೀಯ ವ್ಯಕ್ತಿ ಯಾರು. ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ ಈ ವರ್ಷವೂ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

2024ರ ಭಾರತದ ಅತ್ಯಂತ ಪವರ್‌ಫುಲ್‌ ವ್ಯಕ್ತಿಗಳ ಪಟ್ಟಿಯನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಈ ವರ್ಷವೂ ಅಗ್ರಸ್ಥಾನದಲ್ಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಲಗೈ ಬಂಟ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Tap to resize

ಆರೆಸ್ಸೆಸ್‌ನ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ ವರ್ಷ ಎಸ್‌.ಜೈಶಂಕರ್‌ ಈ ಸ್ಥಾನದಲ್ಲಿದ್ದರು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನಾಲ್ಕನೇ ಸ್ಥಾನದಲ್ಲಿ ಈ ವರ್ಷವೂ ಮುಂದುವರಿದಿದ್ದಾರೆ. ಈ ವರ್ಷದ ನವೆಂಬರ್‌ವರೆಗೆ ಅವರು ಸಿಜೆಐ ಸ್ಥಾನದಲ್ಲಿ ಇರಲಿದ್ದಾರೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದರೆ, ಈ ವರ್ಷ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದೇಶದ 6ನೇ ಅತ್ಯಂತ ಪವರ್‌ಫುಲ್‌ ವ್ಯಕ್ತಿ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ಕೂಡ ಇವರು ಐದನೇ ಸ್ಥಾನದಲ್ಲಿದ್ದರು. 

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ ಈ ಪಟ್ಟಿಗೆ ಎಂಟ್ರಿಯಾದ ಹೊಸಬರಾಗಿದ್ದಾರೆ. ಕಳೆದ ವರ್ಷ ರಾಜನಾಥ್‌ ಸಿಂಗ್‌ ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ.

Nirmala sitharaman

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ದೇಶದ ಅತ್ಯಂತ ಪವರ್‌ ಫುಲ್‌ ವ್ಯಕ್ತಿಗಳ ಟಾಪ್‌ 10 ಪಟ್ಟಿಯಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ.ಕಳೆದ ವರ್ಷ ಕೂಡ ಇದೇ ಸ್ಥಾನದಲ್ಲಿದ್ದರು.

JP Nadda

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಈ ವರ್ಷ ಎರಡು ಸ್ಥಾನ ಕುಸಿದು 9ನೇ ಸ್ಥಾನಕ್ಕೆ ಬಂದಿದ್ದಾರೆ. ಈ ವರ್ಷದ ಜೂನ್‌ವರೆಗೆ ಅಧಿಕಾರ ಹೊಂದಿರುವ ಜೆಪಿ ನಡ್ಡಾ 2022ರಲ್ಲಿ 4ನೇ ಸ್ಥಾನದಲ್ಲಿದ್ದರು.

ಗೌತಮ್ ಅದಾನಿ ಈ ವರ್ಷ ಪಟ್ಟಿಯಲ್ಲಿರುವ ಏಕೈಕ ಉದ್ಯಮಿಯಾಗಿದ್ದಾರೆ. ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಮುಖೇಶ್‌ ಅಂಬಾನಿ ಈ ಬಾರಿ ಟಾಪ್‌ 10ನಿಂದ ಹೊರಬಿದ್ದಿದ್ದಾರೆ. 

Latest Videos

click me!