ಭಾರತೀಯ ರೈಲ್ವೇ ಪ್ರಯಾಣದ ವೇಳೆ ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೆಲ ವಸ್ತುಗಳನ್ನು ರೈಲಿನಲ್ಲಿ ಒಯ್ಯಲು ಅವಕಾಶವಿಲ್ಲ. ಈ ಪೈಕಿ ರೈಲಿನಲ್ಲಿ ಮದ್ಯ ಒಯ್ಯಲು ಅವಕಾಶವಿದೆಯಾ ಅನ್ನೋದು ಹಲವರ ಪ್ರಶ್ನೆ.
ಹಲವರು 1989ರ ಭಾರತೀಯ ರೈಲ್ವೇ ಆ್ಯಕ್ಟ್ ಮುಂದಿಟ್ಟು ರೈಲಿನಲ್ಲಿ ಗರಿಷ್ಠ 2 ಲೀಟರ್ ಮದ್ಯ ಒಯ್ಯಲು ಅವಕಾಶವಿದೆ ಅನ್ನೋ ವಾದ ಮುಂದಿಡುತ್ತಾರೆ. ಆದರೆ ನಿಜಕ್ಕೂ 2 ಲೀಟರ್ ಮದ್ಯ ಒಯ್ಯಲು ಅವಕಾಶವಿದೆಯಾ?
ಭಾರತೀಯ ರೈಲಿನಲ್ಲಿ ಮದ್ಯ ಒಯ್ಯಲು ಅವಕಾಶವಿಲ್ಲ. ಮದ್ಯಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ತೊಟ್ಟು ಹನಿ ಮದ್ಯವನ್ನು ಭಾರೀಯ ರೈಲಿನಲ್ಲಿ ಒಯ್ಯಲು ಅವಕಾಶವಿಲ್ಲ.
ಸೀಲ್ಡ್ ಬಾಟಲ್ ಇದ್ದರೂ ಭಾರತೀಯ ರೈಲಿನಲ್ಲಿ ಪ್ರಯಾಣಿಕರು ಮದ್ಯ ಒಯ್ಯಲು ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಹಾಗೂ ಜೈಲು ಶಿಕ್ಷೆಗೂ ಗುರಿಯಾಗುವ ಸಾಧ್ಯತೆ ಇದೆ.
ಮದ್ಯದ ಬಾಟಲಿ ಅಥವಾ ಮದ್ಯದ ಜೊತೆ ರೈಲಿನಲ್ಲಿ ಸಿಕ್ಕಿಬಿದ್ದರೆ ಕನಿಷ್ಠ 1,000 ರೂಪಾಯಿ ದಂಡ, ಗರಿಷ್ಠ 3 ವರ್ಷದ ವರೆಗೆ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಮದ್ಯ ಮಾತ್ರವಲ್ಲ, ಸ್ಟೌವ್, ಗ್ಯಾಸ್ ಸಿಲಿಂಡರ್, ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುವ ರಾಸಾಯನಿಕ ಪದಾರ್ಥಗಳು, ಆ್ಯಸಿಡ್, ಗ್ರೀಸ್ ಸೇರಿದಂತೆ ಇತರ ವಸ್ತುಗಳಿಗೂ ನಿರ್ಬಂಧವಿದೆ.
2 ಲೀಟರ್ ಮದ್ಯ ನಿಯಮ ಕೆಲ ಮೆಟ್ರೋ ರೈಲಿನಲ್ಲಿ ಅನ್ವಯವಾಗಲಿದೆ. ಮದ್ಯದ ಬಾಟಲಿ ಸೀಲ್ಡ್ ಆಗಿರಬೇಕು. ಸೇವಿಸಿರುವ, ಅಥವಾ ಸೀಲ್ಡ್ ಒಪನ್ ಮಾಡಿರುವ ಮದ್ಯ ಒಯ್ಯಲು ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಅವಕಾಶವಿಲ್ಲ.
ಕೆಲ ಮೆಟ್ರೋಗಳಲ್ಲಿ ಸೀಲ್ಡ್ 2 ಲೀಟರ್ ಮದ್ಯ ಒಯ್ಯಲು ಅವಕಾಶ ಮಾಡಿಕೊಡಲಾಗಿದೆ. ದೆಹಲಿ ಮೆಟ್ರೋದಲ್ಲಿ ಕಳೆದ ವರ್ಷ ಸೀಲ್ಡ್ ಅಲ್ಕೋಹಾಲ್ ಒಯ್ಯಲು ಅವಕಾಶ ಮಾಡಿಕೊಡಲಾಗಿತ್ತು.