ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಘಟಕದ ಅಧಿಕಾರಿ ಶ್ವೇತಾ ಪಾಂಡೆ.ಕೆಲ ದಿನಗಳ ಹಿಂದೆ ಭಾರತದ ರಕ್ಷಣಾ ಇಲಾಖೆ ಪ್ರಧಾನಿಗೆ ಗೌರವ ವಂದನೆ ನೀಡಿ ಧ್ವಜಾರೋಹಣಕ್ಕೆ ನೆರವು ನೀಡುವವರ ಹೆಸರು ಘೋಷಣೆ ಮಾಡಿತ್ತು.
undefined
ಶ್ವೇತಾ ಉತ್ತರ ಪ್ರದೇಶದ ಲಕ್ನೋದವರು. ರಷ್ಯಾದ ಮಾಸ್ಕೋದಲ್ಲಿ ನಡೆದ ಭಾರತೀಯ ಸೇನೆಯ ಪರೇಡ್ ನಲ್ಲಿ ಭಾಗವಹಿಸಿದ್ದರು.
undefined
ಈ ರೀತಿ ಪ್ರಧಾನಿಗೆ ನೆರವು ನೀಡಿದ ಮೊಟ್ಟ ಮೊದಲ ಮಹಿಳೆ ಎಂಬ ಶ್ರೇಯಕ್ಕೂ ಶ್ವೇತಾ ಪಾತ್ರವಾಗಿದ್ದಾರೆ.
undefined
ಭಾಷಣ, ಚರ್ಚಾ ಸ್ಪರ್ಧೆಯಲ್ಲೂ ಶ್ವೇತಾ ಗಳಿಸಿದ ಪದಕಗಳಿಗೆ ಲೆಕ್ಕವಿಲ್ಲ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿರುವ ಶ್ವೇತಾ 2012 ರಿಂದ ಸೇವೆಯಲ್ಲಿ ಇದ್ದಾರೆ.
undefined
ಚೆನ್ನೈ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಘರ್ವಾಲ್ ರೈಫಲ್ಸ್ ವಿಭಾಗದಲ್ಲಿಯೂ ಪದಕ ಸಂಪಾದನೆ ಮಾಡಿದ್ದರು.
undefined
ಶ್ವೇತಾ ತಾಯಿ ಅಮಿತಾ ಪಾಂಡೆ ಸಂಸ್ಕೃತ ಅಧ್ಯಾಪಕಿಯಾಗಿದ್ದರೆ ತಂದೆ ರಾಜ್ ರತನ್ ಪಾಂಡೆ ಉತ್ತರ ಪ್ರದೇಶ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರು.
undefined