93ರ ಹರೆಯದಲ್ಲಿ ರಾಮಲಲ್ಲಾಗೆ ಸುಪ್ರೀಂನಲ್ಲಿ ನ್ಯಾಯ ಒದಗಿಸಿದ ವಕೀಲ ಇವರೇ ನೋಡಿ!

Published : Aug 09, 2020, 05:50 PM IST

ಅಯೋಧ್ಯೆಯಲ್ಲಿ ಆಘಸ್ಟ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಮ ಮಂದಿರದ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದರಲ್ಲಿ ಸುಮಾರು 175 ಮಂದಿ ಭಾಗವಹಿಸಿದ್ದರು. ಆದರೆ ಕೊರೋನಾತಂಕವಿರುವುದರಿಂದ ಬಿಜೆಪಿ ಹಿರಿಯ ನಾಯಕ ಎಲ್‌. ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಸೇರಿದಂತೆ ಅನೇಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಇವರಲ್ಲೊಂದ ಹೆಸರು ಪರಶರನ್ ಕೂಡಾ ಆಗಿತ್ತು. ಪರಶರನ್ ಸುಪ್ರೀಂ ಕೋರ್ಟ್‌ನಲ್ಲಿ ರಾಮಲಲ್ಲಾನಿಗೆ ಈ ಭೂಮಿ ಸೇರಬೇಕೆಂದು ವಾದಿಸಿದ್ದ ಹಿರಿಯ ವಕೀಲರಾಗಿದ್ದಾರೆ. ಇಷ್ಟೇ ಅಲ್ಲ ಅವರು ರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯರೂ ಕೂಡಾ ಹೌದು. ಹೀಗಿರುವಾಗ ಪರಶರನ್ ತಮ್ಮ ಮನೆಯಿಂದಲೇ ಈ ಭೂಮಿ ಪೂಜೆ ಕಾರ್ಯಕ್ರಮವನ್ನು ವೀಕ್ಷಿಸಿದ್ದರು. ಅವರು ಅದೆಷ್ಟು ಶ್ರದ್ಧೆಯಿಂದ ಇದನ್ನು ವೀಕ್ಷಿಸಿದ್ದರೆಂದರೆ ಟಿವಿ ಎದುರು ಪಾರಂಪರಿಗೆ ಉಡುಗೆ ಧರಿಸಿ ಇದನ್ನು ವೀಕ್ಷಿಸಿದ್ದರು. ಸದ್ಯ ಈ ಫೋಟೋಗಳು ವೈರಲ್ ಆಗಿವೆ.

PREV
17
93ರ ಹರೆಯದಲ್ಲಿ ರಾಮಲಲ್ಲಾಗೆ ಸುಪ್ರೀಂನಲ್ಲಿ ನ್ಯಾಯ ಒದಗಿಸಿದ ವಕೀಲ ಇವರೇ ನೋಡಿ!

92 ವರ್ಷದ ಪರಶರನ್ ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂನಲ್ಲಿ ರಾಮಲಲ್ಲಾ ಪರವಾಗಿ ಹೋರಾಡಿದ್ದರು. ವಿಚಾರಣೆ ವೇಳೆ ಪರಶರನ್ ವಯಸ್ಸು ಗಮನಿಸಿ ಕುಳಿತುಕೊಂಡೇ ವಾದಿಸುವ ಅವಕಾಶವನ್ನೂ ನೀಡಲಾಗಿತ್ತು. ಆದರೆ ಪರಶರನ್‌ರವರು ಮಾತ್ರ ತಾನು ಭಾರತೀಯ ವಕೀಲರ ಪರಂಪರೆಯನ್ನು ಪಾಲಿಸುವುದಾಗಿ ಹೇಳಿ ಇದನ್ನು ನಿರಾಕರಿಸಿದ್ದರು.

27

ನಿಂತುಕೊಂಡೇ ವಾದಿಸುವುದಾಗಿ ಹೇಳಿದ್ದ ಪರಶರನ್: ಸುಪ್ರೀಂನಲ್ಲಿ ನಡೆಯುತ್ತಿದ್ದ ವಿಚಾರಣೆ ವೇಳೆ ಪರಶರನ್ ವಾದಿಸಲು ನಿಂತುಕೊಂಡಾಗ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೀವು ಕುಳಿತುಕೊಂಡು ವಾದಿಸುತ್ತೀರಾ? ಎಂದು ಕೇಳಿದ್ದರು. ಪರವಾಗಿಲ್ಲ, ನ್ಯಾಯಾಲಯದಲ್ಲಿ ನಿಂತುಕೊಂಡೇ ವಾದಿಸುವ ಸಂಪ್ರದಾಯವಿದೆ ಹಾಗೇ ಮಾಡುತ್ತೇನೆ ಎಂದಿದ್ದರು.

37

47

ಹಿಂದೂ ಧರ್ಮ ಗ್ರಂಥಗಳ ಮೇಲಿದೆ ಹಿಡಿತ: 1927ರ ಅಕ್ಟೋಬರ್ 9ರಂದು ತಮಿಳುನಾಡಿನ ಶ್ರೀರಂಗಮ್‌ನಲ್ಲಿ ಜನಿಸಿದ ಪರಶರನ್ 70ನೇ ದಶಕದಿಂದಲೂ ಜನಪ್ರಿಯ ವಕೀಲರಾಗಿ ಗುರುತಿಸಿಕೊಂಡವರು. ಹಿಂದೂ ಧರ್ಮಗ್ರಂಥದ ಕುರುತು ಇವರಿಗೆ ಅಪಾರ ಜ್ಞಾನವಿದೆ. ಅವರ ತಂದೆ ಕೆಶವ ಅಯ್ಯಂಗಾರ್ ಮದ್ರಾಸ್ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಪರಶರನ್‌ರವರ ಮೂವರೂ ಪುತ್ರರು ಮೋಹನ್, ಸತೀಶ್ ಹಾಗೂ ಬಾಲಾಜಿ ಕೂಡಾ ವಕೀಲರಾಗಿದ್ದಾರೆ. ಇನ್ನು ಯುಪಿಎ-2ನೇ ಅವಧಿಯಲ್ಲಿ ಅವರುಉ ಕೆಲ ಸಮಯ ಆಲಿಸಿಟರ್ ಜರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

57

ಶಬರಿಮಲೆ ಪ್ರಕರಣದಲ್ಲೂ ವಾದಿಸಿದ್ದ ಪರಶರನ್: ಇವರನ್ನು ದೇವತೆಗಳ ವಕೀಲ ಎನ್ನಲಾಉತ್ತದೆ. ಇದರ ಹಿಂದೆ ವಿಶೇಷ ಕಾರಣವೊಂದಿದೆ. ಅವರು ರಾಮಲಲ್ಲಾ ಹೊರತುಪಡಿಸಿ ಶಬರಿಮಲೆ ದೇಗುಲ ವಿವಾದ ಪ್ರಕರಣದಲ್ಲಿ ಮಹಿಳೆಯರಿಗೆ ಮಂದಿರ ಪ್ರವೇಶಕ್ಕೆ ಅವಕಾಶ ನೀಡದಿರುವ ಸಂಪ್ರದಾಯ ಮುಂದುವರೆಸಬೇಕೆಂದು ವಾದಿಸಿದ್ದರು.

67

61 ವರ್ಷಗಳ ಹಿಂದೆ ಪ್ರ್ಯಾಕ್ಟೀಸ್ ಆರಂಭಿಸಿದ್ದ ಪರಶರನ್: ಇವರು 1958ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಪ್ರ್ಯಾಕ್ಟೀಸ್ ಆರಂಭಿಸಿದ್ದರು. ತುರ್ತು ಪರಿಸ್ಥಿತಿ ವೇಳೆ ಅವರು ತಮಿಳುನಾಡಿನ ಅಡ್ವಕೇಟ್ ಜನರಲ್ ಆಗಿದ್ದರು ಹಾಗೂ 1980 ರಲ್ಲಿ ಭಾರತದ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು. 1983 ರಿಂದ 1989 ರವರೆಗೆ ಭಾರತದ ಅಟಟಾರ್ನಿ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

77

ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪದಕದಿಂದ ಸನ್ಮಾನಿತರಾಗಿದ್ದಾರೆ ಪರಶರನ್: ಭಾರತ ಸರ್ಕಾರ ಇವರನ್ನು 2003ರಲ್ಲಿ ಪದ್ಮಭೂಷಣ ಹಾಗೂ 2011ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಿದೆ. ಅಲ್ಲದೇ 2012ರಲ್ಲಿ ರಾಜ್ಯಸಭೆಯಿಂದ ಪ್ರೆಸಿಡೆನ್ಶಿಯಲ್ ನಾಮಿನೇಷನ್ ಕೂಡಾ ನೀಡಲಾಗಿದೆ. 

click me!

Recommended Stories