ಸಿಂಗ್ ಅವರು ಪ್ರಣಬ್ ಮುಖರ್ಜಿ ಜೊತೆ ಚರ್ಚಿಸಿ, ಅದಕ್ಕೂ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ ಗಳಿಸಿದ್ದ ಅನುಭವ ಮತ್ತು ಆರ್ಥಿಕ ವಿಷಯಗಳಲ್ಲಿ ತಮಗಿದ್ದ ಅಪಾರ ಪಾಂಡಿತ್ಯವನ್ನು ಬಳಸಿ ಬಜೆಟ್ ರೂಪಿಸಿದರು. ಅದರಲ್ಲಿ ಲೈಸನ್ಸ್ ರಾಜ್ ತೆಗೆದು ಹಾಕಿದರು. ಬಡ್ಡಿದರಗಳನ್ನು ಇಳಿಸಿ, ದೇಶದ ವಿವಿಧ ಕ್ಷೇತ್ರಗಳನ್ನು ಖಾಸಗಿ ಕಂಪನಿಗಳಿಗೆ ತೆರೆದರು. ಬಹಳಷ್ಟು ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅನುಮತಿ ನೀಡಿದರು.