ಖಲಿಸ್ತಾನ ಹೋರಾಟ ಬೆಂಬಲಿಸಿದ ಶುಭನೀತ್ ಸಿಂಗ್ ಹಾಡು ಕಿತ್ತೆಸೆದ ಮೋಜ್ ಆ್ಯಪ್!

Published : Sep 21, 2023, 12:34 PM IST

ಖಲಿಸ್ತಾನ ಹೋರಾಟ ಬೆಂಬಲಿಸಿ ವಿವಾದಾತ್ಮಕ ಭಾರತದ ಭೂಪಟ ಹಂಚಿಕೊಂಡ ಕೆನಡಾ ಮೂಲದ ಪಂಜಾಬಿ ಸಿಂಗರ್ ಶುಭನೀತ್ ಸಿಂಗ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಈಗಾಗಲೇ ಶುಭನೀತ್ ಸಿಂಗ್ ಭಾರತದ ಕಾರ್ಯಕ್ರಮ ರದ್ದಾಗಿದೆ. ಇದರ ಬೆನ್ನಲ್ಲೇ ಮೋಜ್ ಆ್ಯಪ್, ಶುಭನೀತ್ ಹಾಡುಗಳನ್ನು ಕಿತ್ತೆಸೆದಿದೆ.

PREV
19
ಖಲಿಸ್ತಾನ ಹೋರಾಟ ಬೆಂಬಲಿಸಿದ ಶುಭನೀತ್ ಸಿಂಗ್ ಹಾಡು ಕಿತ್ತೆಸೆದ ಮೋಜ್ ಆ್ಯಪ್!

ಭಾರತ-ಕೆನಡಾ ಸಂಬಂಧ ಹಾಳುಮಾಡಿರುವ ಖಲಿಸ್ತಾನ ಹೋರಾಟ ಇದೀಗ ಹಲವು ಅವಾಂತರಕ್ಕೆ ಕಾರಣವಾಗಿದೆ. ಕೆನಡಾದ ಪಂಜಾಬಿ ಗಾಯಕ ಶುಭನೀತ್ ಸಿಂಗ್ ಖಲಿಸ್ತಾನ ಹೋರಾಟ ಬೆಂಬಲಿಸಿ ಹಾಕಿದ್ದ ಪೋಸ್ಟ್‌ನಿಂದ ಆತನ ಭಾರತದ ಕಾರ್ಯಕ್ರಮಗಳನ್ನೇ ರದ್ದು ಮಾಡಲಾಗಿದೆ.
 

29

ಖಲಿಸ್ತಾನ ಹೋರಾಟ ಬೆಂಬಲಿಸಿ ವಿವಾದಾತ್ಮ ಪೋಸ್ಟ್ ಹಾಕಿದ್ದ ಕಾರಣ ಶುಭನೀತ್ ವಿರುದ್ದ ಭಾರತದಲ್ಲಿ ಭಾರಿ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲೂ ಶುಭನೀತ್ ವಿರುದ್ಧ ಅಭಿಯಾನ ಆರಂಭಗೊಂಡಿತ್ತು.
 

39

ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸೆಪ್ಟೆಂಬರ್ 23ರಿಂದ ಭಾರತದಲ್ಲಿ ಆಯೋಜನೆಗೊಂಡಿದ್ದ ಶುಭನೀತ್ ಸಿಂಗ್ ಸಂಗೀತ ಕಾರ್ಯಕ್ರವನ್ನು ರದ್ದು ಮಾಡಲಾಗಿದೆ. ಇದೀಗ ಮೋಜ್ ಆ್ಯಪ್ ಮಹತ್ವದ ನಿರ್ಧಾರ ಘೋಷಿಸಿದೆ.

49

ಮೋಜ್ ಆ್ಯಪ್‌ನಲ್ಲಿದ್ದ ಶುಭನೀತ್ ಸಿಂಗ್ ಹಾಡುಗಳನ್ನು ಕಿತ್ತೆಸೆದಿದೆ. ಶೇರ್‌ಚಾಟ್ ಮಾಲೀಕತ್ವದ ಮೋಜ್ ಭಾರತದ ಆ್ಯಪ್. ಭಾರತ ವಿರೋಧಿ ನಿಲುವನ್ನು ಎಂದೂೂ ಸಹಿಸುವುದಿಲ್ಲ ಎಂದಿದೆ.

59

ಮೋಜ್ ಆ್ಯಪ್ ಲೈಬ್ರರಿಯಲ್ಲಿದ್ದ ಶುಭನೀತ್ ಸಿಂಗ್ ಎಲ್ಲಾ ಹಾಡುಗಳನ್ನು ಕಿತ್ತೆಸೆದಿದೆ. ನಮ್ಮ ಬಳಕೆದಾರರಿಗೆ ಸಂಭ್ರಮದ ಹಾಡುಗಳನ್ನು ನೀಡುತ್ತೇವೆ. ಇದರಲ್ಲಿ ಭಾರತ ವಿರೋಧಿ ಧ್ವನಿ ಇರಬಾರದು ಎಂದು ಮೋಜ್ ಹೇಳಿದೆ.
 

69

ಸೆಪ್ಟೆಂಬರ್ 23 ರಿಂದ 25ರ ವರೆಗೆ ಬೆಂಗಳೂರು, ಮುಂಬೈ, ಹೈದರಾಬಾದ್ ಹಾಗೂ ದೆಹಲಿಯಲ್ಲಿ ಶುಭನೀತ್ ಸಿಂಗ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಈ ಎಲ್ಲಾ ಕಾರ್ಯಕ್ರಮವನ್ನು ಬುಕ್‌ಮೈಶೋ ರದ್ದು ಮಾಡಿದೆ.
 

79

ಶುಭನೀತ್ ಕಾರ್ಯಕ್ರಮ ಆಯೋಜಿಸಿದ ಕಾರಣಕ್ಕೆ ಬುಕ್‌ಮೈಶೋ ವಿರುದ್ದ ಬಾಯ್ಕಾಟ್ ಅಭಿಯಾನ ಆರಂಭಗೊಂಡಿತ್ತು. ಹೀಗಾಗಿ ಬುಕ್‌ಮೈಶೋ ಶುಭನೀತ್ ಸಿಂಗ್ ಸಂಗೀತ ಕಾರ್ಯಕ್ರಮ ರದ್ದುಗೊಳಿಸಿದೆ.

89

ಇದಕ್ಕೂ ಮೊದಲು ಶುಭನೀತ್ ಸಿಂಗ್ ಭಾರತ ಪ್ರವಾಸದ ಸಂಪೂರ್ಣ ಪ್ರಾಯೋಜಕತ್ವವನ್ನು ಬೋಟ್ ಬ್ರ್ಯಾಂಡ್ ವಹಿಸಿಕೊಂಡಿತ್ತು. ಆದರೆ ಶುಭನೀತ್ ವಿವಾದಿಂದ ಬೋಟ್ ತನ್ನ ಪ್ರಾಯೋಜಕತ್ವ ಹಿಂಪಡೆದಿತ್ತು. 

99

ಶುಭನೀತ್ ಸಿಂಗ್ ನಡೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ನೆಚ್ಚಿನ ಗಾಯಕ ಶುಭನೀತ್ ಸಿಂಗ್‌ರನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್‌ಫಾಲೋ ಮಾಡಿದ್ದಾರೆ.
 

Read more Photos on
click me!

Recommended Stories