ದಾಖಲೆ ಬೆಲೆಗೆ ಮಾರಾಟವಾದ ಅಪರೂಪದ ಮಹಾತ್ಮ ಗಾಂಧೀಜಿ ಫೋಟೋ

Published : Jul 16, 2025, 01:07 PM IST

ಲಂಡನ್ ಹರಾಜಿನಲ್ಲಿ ಮಹಾತ್ಮ ಗಾಂಧೀಜಿಯವರ ಅಪರೂಪದ ಆಯಿಲ್ ಪೇಂಟಿಂಗ್ ದಾಖಲೆ ಬೆಲೆಗೆ ಮಾರಾಟವಾಗಿದೆ. ಟ್ರಾವೆಲ್ ಮತ್ತು ಎಕ್ಸ್‌ಪ್ಲೋರೇಷನ್ ಆನ್‌ಲೈನ್ ಮಾರಾಟದಲ್ಲಿ ಇದುವರೆಗಿನ ಅತ್ಯಧಿಕ ಬೆಲೆ ಇದಾಗಿದೆ. 

PREV
15

ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ ಮಹಾತ್ಮ ಗಾಂಧೀಜಿಯವರ ಅಪರೂಪದ ಆಯಿಲ್ ಪೇಂಟಿಂಗ್ 1.7 ಕೋಟಿ ರೂ.ಗೆ ಮಾರಾಟವಾಗಿದೆ. ಟ್ರಾವೆಲ್ ಮತ್ತು ಎಕ್ಸ್‌ಪ್ಲೋರೇಷನ್ ಆನ್‌ಲೈನ್ ಮಾರಾಟದಲ್ಲಿ ಇದುವರೆಗಿನ ಅತ್ಯಧಿಕ ಬೆಲೆಗೆ ಮಾರಾಟವಾದ ವಸ್ತು ಇದಾಗಿದೆ.

25

ಲಂಡನ್‌ನ ಬೋನ್‌ಹ್ಯಾಮ್ಸ್ ಹರಾಜಿನಲ್ಲಿ ಈ ಅಪರೂಪದ ಚಿತ್ರ 1,52,800 ಪೌಂಡ್‌ಗಳಿಗೆ (ಸುಮಾರು 1.7 ಕೋಟಿ ರೂ.) ಮಾರಾಟವಾಗಿದೆ. ಬ್ರಿಟಿಷ್ ಕಲಾವಿದೆ ಕ್ಲೇರ್ ಲಿಂಗ್ಟನ್‌ ಬಿಡಿಸಿದ ಈ ಚಿತ್ರಕ್ಕೆ 50,000-70,000 ಪೌಂಡ್‌ಗಳ ಬೆಲೆ ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗಿಂತ ಮೂರು ಪಟ್ಟು ಹೆಚ್ಚು ಬೆಲೆ ಸಿಕ್ಕಿದೆ.

35

ಟ್ರಾವೆಲ್ ಮತ್ತು ಎಕ್ಸ್‌ಪ್ಲೋರೇಷನ್ ಆನ್‌ಲೈನ್ ಮಾರಾಟದಲ್ಲಿ ಅತ್ಯುತ್ತಮ ಮಾರಾಟದ ಚಿತ್ರವಾಗಿಯೂ ಇದು ದಾಖಲೆ ನಿರ್ಮಿಸಿದೆ. ಗಾಂಧೀಜಿಯವರ ಈ ಚಿತ್ರವನ್ನು ಹಿಂದೆಂದೂ ಹರಾಜು ಹಾಕಿರಲಿಲ್ಲ ಎಂದು ಬೋನ್‌ಹ್ಯಾಮ್ಸ್ ಮಾರಾಟ ಮುಖ್ಯಸ್ಥ ರಿಯಾನಾನ್ ಡೆಮೆರಿ ಹೇಳಿದ್ದಾರೆ.

45

1974ರಲ್ಲಿ ಆಯಿಲ್ ಪೇಟಿಂಗ್‌ನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಹಿಂದೂ ಬಲಪಂಥೀಯ ಕಾರ್ಯಕರ್ತ ಚಾಕುವಿನಿಂದ ಫೋಟೋಗೆ ಹಾನಿ ಮಾಡಲು ಪ್ರಯತ್ನಿಸಿದ್ದರು. ಇಂದಿಗೂ ಈ ಫೋಟೋದ ಮೇಲೆ ಚಾಕುವಿನಿಂದ ಮಾಡಿದ ಹಾನಿಯನ್ನು ಗಮನಿಸಬಹುದು.

55

ಬ್ರಿಟಿಷ್ ಕಲಾವಿದೆ ಕ್ಲೇರ್ ಲಿಂಗ್ಟನ್‌ 1989ರಲ್ಲಿ ನಿಧನರಾಗುತ್ತಾರೆ. ಆನಂತರ ಈ ಆಯಿಲ್ ಪೇಂಟಿಂಗ್ ಕ್ಲೇರ್ ಲಿಂಗ್ಟನ್‌ ಕುಟುಂಬದ ಸುಪರ್ದಿಗೆ ಸೇರಿತು. 1931ರಲ್ಲಿ ಗಾಂಧೀಜಿಯವರು ಲಂಡನ್‌ನಲ್ಲಿ ನಡೆದ ಎರಡನೇ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಲಾವಿದ ಕ್ಲೇರ್ ಲೈಟನ್ ನೇರವಾಗಿ ಗಾಂಧೀಜಿಯವರನ್ನು ಭೇಟಿಯಾಗಿ ಈ ಚಿತ್ರ ಬಿಡಿಸಿದ್ದರು.

Read more Photos on
click me!

Recommended Stories