ಕುಂಭಮೇಳಕ್ಕೆ ತೆರಳಿದ್ದ ವಿಡಿಯೋ ಕ್ರಿಯೆಟರ್ ಒಬ್ಬ ಮಾಲೆ ಮಾರುವ ಹುಡುಗಿಯ ಬಗ್ಗೆ ವೀಡಿಯೊವನ್ನು ಹಂಚಿಕೊಂಡ ನಂತರ ಸೋಷಿಯಲ್ ಮೀಡಿಯಾ ಮೂಲಕ ಕೋಟ್ಯಂತರ ಜನರನ್ನ ಸೆಳೆದವಳ ಮೊನಾಲಿಸಾ. ಯಾವಾಗ ಮೊನಾಲಿಸಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆದಳೋ ಅಲ್ಲಿಂದ ಕುಂಭಮೇಳಕ್ಕೆ ಹೋದವರೆಲ್ಲ ಪುಣ್ಯ ಸ್ನಾನ ಮಾಡಿದ್ರೋ ಇಲ್ವೋ ಇವಳನ್ನು ಹುಡುಕಿ ಹೊರಟರು. ತನ್ನ ಪಾಡಿಗೆ ತಾನು ಮಾಲೆ ಮಾರುತ್ತಿದ್ದ ಮೊನಾಲಿಸಾಳಿಗೆ ಸೇಲ್ಫಿ ತೆಗೆಸಿಕೊಳ್ಳು ಯುವಕರ ದಂಡೇ ಮುಗಿಬಿಳಲು ಶುರುಮಾಡಿತು.
ಇದೀಗ ಸೆಲ್ಫಿ ತೆಗೆಸಿಕೊಳ್ಳುವ ನೆಪದಲ್ಲಿ ಮೊನಾಲಿಸಾಗೆ ಯುವಕ ಗುಂಪೊಂದು ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಘಟನೆಯಿಂದ ಬೇಸತ್ತ ಮೊನಾಲಿಸಾ ಪ್ರಯಾಗರಾಜ್ ಕುಂಭಮೇಳ ತೊರೆಯುವಂತೆ ಮಾಡಿದೆ. ಅಂಗ್ಲಮಾಧ್ಯಮವೊಂದರ ವರದಿಯ ಪ್ರಕಾರ, ಯುವಕರ ಗುಂಪೊಂದು ಮೋನಾಲಿಸಾಳ ಬಳಿ ಬಂದು ನಿಮ್ಮ ತಂದೆ ನನ್ನೊಂದಿಗೆ ಸೇಲ್ಫಿ ತೆಗೆಸಿಕೊಳ್ಳಲು ಕಳಿಸಿದ್ದಾರೆ ಎಂದು ಹೇಳಿ ಸೆಲ್ಫಿಗೆ ಮುಗಿಬಿದ್ದಿದ್ದ ಯುವಕರ ಗುಂಪು. ಆದರೆ ಮೊನಾಲಿಸಾ ಇದಕ್ಕೆ ನಿರಾಕರಿಸಿದ್ದಾಳೆ. ಅಷ್ಟಕ್ಕೆ ಬಿಡದ ಪುಂಡರ ಗುಂಪು ಟೆಂಟ್‌ಗೆ ನುಗ್ಗಿ ಕಿರುಕುಳ ನೀಡಿದ್ದಾರೆ. ಸೆಲ್ಫಿಗಾಗಿ ಮುಗಿಬಿದ್ದ ಯುವಕರ ಗುಂಪಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಆಕೆಯ ಕುಟುಂಬದವರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಳಿಕ ಅವಳನ್ನ ಬಚ್ಚಿಟ್ಟ ಕಾರಣಕ್ಕೆ ಕುಟುಂಬಸ್ಥರ ಮೇಲೆಯೂ ಯುವಕರ ಗುಂಪು ಆಕ್ರೋಶಗೊಂಡು ಹಲ್ಲೆ ಮಾಡಲು ಮುಂದಾಗಿದೆ.