ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ

Published : Dec 10, 2025, 09:28 AM IST

ಭಾರತ್ ಜೋಡೋ ಯಾತ್ರೆ ಆರಂಭಿಸಿದಾಗಿನಿಂದ ರಾಹುಲ್ ಗಾಂಧಿ ವೈಟ್ ಟಿ ಶರ್ಟ್, ಕಾರ್ಗೊ ಪ್ಯಾಂಟ್ ಮತ್ತು ಸ್ಪೋರ್ಟ್ಸ್ ಶೂನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಹಿಂದೆ ಲೋಕಸಭೆಗೂ ಟೀ ಶರ್ಟ್ ಧರಿಸಿಯೇ ರಾಹುಲ್ ಗಾಂಧಿ ಆಗಮಿಸಿದ್ದರು.

PREV
16
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

ಮಂಗಳವಾರ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಚುನಾವಣಾ ಸುಧಾರಣೆಗಳ ಮೇಲಿನ ಚರ್ಚೆಯ ವೇಳೆ ಖಾದಿ ಕುರ್ತಾದಲ್ಲಿ ಕಾಣಿಸಿಕೊಂಡರು. ಇದರ ಉದ್ದೇಶ ಕೇವಲ ಸ್ಟೈಲ್ ಅಲ್ಲ, ಬದಲಿಗೆ ಸಮಾನತೆ ಮತ್ತು ಭಾರತದ ಆತ್ಮದ ಸಂದೇಶ ನೀಡುವುದಾಗಿದೆ ಎಂದು ರಾಹುಲ್ ಹೇಳಿದರು.

26
ಕ್ಯಾಶುಯಲ್ ಲುಕ್

ಈ ಬದಲಾವಣೆ ವಿಶೇಷವಾಗಿತ್ತು, ಯಾಕಂದ್ರೆ ಈ ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಅವರ ಉಡುಪಿನ ಬಗ್ಗೆ ಟೀಕೆ ಮಾಡಿತ್ತು. 'ಭಾರತ್ ಜೋಡೋ ಯಾತ್ರೆ'ಯ ಸಮಯದಲ್ಲಿ ಅವರ ಪೋಲೋ ಟಿ-ಶರ್ಟ್ ಮತ್ತು ಕ್ಯಾಶುಯಲ್ ಲುಕ್ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

36
ರಾಹುಲ್ ಗಾಂಧಿ ಖಾದಿ ಕುರ್ತಾ ಯಾಕೆ ಧರಿಸಿದ್ರು?

ಖಾದಿ ಕೇವಲ ಬಟ್ಟೆಯಲ್ಲ, ಇದು ಸಮಾನತೆ ಮತ್ತು ಸ್ವಾವಲಂಬನೆಯ ಸಂಕೇತ ಎಂದು ರಾಹುಲ್ ಗಾಂಧಿ ಹೇಳಿದರು. ಖಾದಿ ಪ್ರತಿಯೊಂದು ರಾಜ್ಯ ಮತ್ತು ಪ್ರದೇಶದ ಜನರ ಗುರುತನ್ನು ಹೇಳುತ್ತದೆ ಮತ್ತು ಇದು ಭಾರತದ ಜನರ ನಿಜವಾದ ಪ್ರತಿನಿಧಿಯಾಗಿದೆ. ಖಾದಿಯ ನೂಲುಗಳು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ, ಎಲ್ಲಾ ನೂಲುಗಳು ಸಮಾನವಾಗಿವೆ ಮತ್ತು ಒಟ್ಟಾಗಿ ಒಂದು ಬಟ್ಟೆಯನ್ನು ರೂಪಿಸುತ್ತವೆ. ಇದನ್ನು ಅವರು ಭಾರತದ 150 ಕೋಟಿ ಜನರ ಪ್ರಜಾಪ್ರಭುತ್ವದ ಏಕತೆಗೆ ಹೋಲಿಸಿದರು ಮತ್ತು ಮತವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕನ್ನು ನೀಡುತ್ತದೆ ಎಂದು ಹೇಳಿದರು.

46
ಲೋಕಸಭೆಯಲ್ಲಿ ರಾಜಕೀಯ ಸಂದೇಶ

ಖಾದಿ ಕುರ್ತಾ ಧರಿಸುವ ಮೂಲಕ ರಾಹುಲ್ ಗಾಂಧಿ ತಮ್ಮ ಸಂದೇಶ ಸಮಾನತೆ ಮತ್ತು ಪ್ರಜಾಪ್ರಭುತ್ವದ ಪರವಾಗಿದೆ ಎಂದು ಸ್ಪಷ್ಟಪಡಿಸಿದರು. ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಮಾನ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.

56
ಮತದಾರರ ಪಟ್ಟಿಯಲ್ಲಿನ ಅಕ್ರಮ

ಹರಿಯಾಣ ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ಉಲ್ಲೇಖಿಸಿದ ಅವರು, ಅಲ್ಲಿ ಬ್ರೆಜಿಲಿಯನ್ ಮಹಿಳೆಯೊಬ್ಬರ ಹೆಸರು 22 ಬಾರಿ ನೋಂದಣಿಯಾಗಿದೆ ಎಂದು ಹೇಳಿದರು. ವೋಟ್ ಕಳ್ಳತನ ದೇಶವಿರೋಧಿ (Anti-National) ಕೆಲಸ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ರಾಹುಲ್ ಒತ್ತಿ ಹೇಳಿದರು.

66
ರಾಹುಲ್ ಗಾಂಧಿ ಲುಕ್

ಭಾರತ್ ಜೋಡೋ ಯಾತ್ರೆ ಆರಂಭಿಸಿದಾಗಿನಿಂದ ರಾಹುಲ್ ಗಾಂಧಿ ವೈಟ್ ಟಿ ಶರ್ಟ್, ಕಾರ್ಗೊ ಪ್ಯಾಂಟ್ ಮತ್ತು ಸ್ಪೋರ್ಟ್ಸ್ ಶೂನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಹಿಂದೆ ಲೋಕಸಭೆಗೂ ಟೀ ಶರ್ಟ್ ಧರಿಸಿಯೇ ರಾಹುಲ್ ಗಾಂಧಿ ಆಗಮಿಸಿದ್ದರು.

Read more Photos on
click me!

Recommended Stories